ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

Team Udayavani, Jul 4, 2022, 7:40 AM IST

ಅನುದಾನದ ಕೊರತೆ: ಚೇತರಿಕೆ ಕಾಣದ ಸ್ಟಡಿ ಸರ್ಕಲ್‌

ಉಡುಪಿ: ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಮಾಹಿತಿ ನೀಡಲು ರಾಜ್ಯ ಸರಕಾರ ರೂಪಿಸಿದ್ದ ಸ್ಟಡಿ ಸರ್ಕಲ್‌ ಕಾರ್ಯಕ್ರಮವು ಕೊರೊನಾ ಅನಂತರ ಅನುದಾನದ ಕೊರತೆಯಿಂದ ಚೇತರಿಕೆ ಕಾಣಲೇ ಇಲ್ಲ.

ಎಲ್ಲ ಜಿಲ್ಲೆಗಳ ಉದ್ಯೋಗ ವಿನಿ ಮಯ ಕೇಂದ್ರದ ಮೂಲಕ ವರ್ಷಕ್ಕೆ ನಾಲ್ಕು ಸ್ಟಡಿ ಸರ್ಕಲ್‌ ಕಾರ್ಯಕ್ರಮಗಳನ್ನು ರೂಪಿಸಲಾಗಿತ್ತು. ಪ್ರತೀ ಕಾರ್ಯಕ್ರಮದಲ್ಲೂ ಕಾಲೇಜು ವಿದ್ಯಾರ್ಥಿಗಳಿಗೆ ವಿಷಯ ತಜ್ಞರ ಮೂಲಕ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿಯನ್ನು ಒದಗಿಸಲಾಗುತ್ತಿತ್ತು. ಸುಮಾರು 2 ಗಂಟೆಯ ಕಾರ್ಯಕ್ರಮ ಇದಾಗಿದ್ದು, ವಿದ್ಯಾರ್ಥಿಗಳ ಆಸಕ್ತಿಗೆ ಅನುಸಾರವಾಗಿ ಬ್ಯಾಂಕಿಂಗ್‌, ನೆಟ್‌-ಸ್ಲೆಟ್‌, ಎಸ್‌ಡಿಎ, ಎಫ್ಡಿಎ, ಕಂಪೆನಿ ಸೆಕ್ರೆಟರಿ ಹೀಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಬೇಕಾದ ಪೂರ್ಣ ಮಾಹಿತಿಯನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಗುತ್ತಿತ್ತು.

ಪ್ರತೀ ಕಾರ್ಯಕ್ರಮಕ್ಕೆ ಬರುವ ಸಂಪನ್ಮೂಲ ವ್ಯಕ್ತಿಗಳ ಗೌರವಧನ ಸಹಿತ ಕಾರ್ಯ ಕ್ರಮ ಆಯೋಜನೆಗೆ ಸರಕಾರ ದಿಂದ 25 ಸಾವಿರ ರೂ. ನೀಡಲಾಗುತ್ತಿತ್ತು. ಕೊರೊನಾದಿಂದ ಎರಡು ವರ್ಷಗಳಿಂದ ಸ್ಟಡಿ ಸರ್ಕಲ್‌ ಕಾರ್ಯಕ್ರಮ ನಡೆಯುತ್ತಿಲ್ಲ ಹಾಗೂ ಸರಕಾರಿಂದ ಅನುದಾನವೂ ಬರುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾಲೇಜು ವಿದ್ಯಾರ್ಥಿಗಳನ್ನು ಉದ್ಯೋಗ ವಿನಿಮಯ ಕೇಂದ್ರಕ್ಕೆ ಕರೆಸಿ, ತರಬೇತಿ ನೀಡುವ ಬಗ್ಗೆಯೂ ಯೋಚನೆ ಮಾಡಲಾಗಿತ್ತು. ಆದರೆ ವಿದ್ಯಾರ್ಥಿಗಳು ಬರುವುದು ಕಷ್ಟಸಾಧ್ಯ ಎಂಬುದನ್ನು ಅರಿತು ಕಾಲೇಜುಗಳಲ್ಲೇ ಸ್ಟಡಿ ಸರ್ಕಲ್‌ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಒಂದೊಂದು ಕಾರ್ಯಕ್ರಮದಲ್ಲೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದರು. ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದು ಹೆಚ್ಚು ಅನುಕೂಲವೂ ಆಗಿತ್ತು. ಜತೆಗೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವೂ ಇತ್ತು. ಕೊರೊನಾ ಅನಂತರದಲ್ಲಿ ಸರಕಾರದಿಂದ ಒಂದು ಕಾರ್ಯಕ್ರಮ ಮಾತ್ರ ಮಾಡಲಾಗಿತ್ತು. ಅದು ಉದ್ಯೋಗ ವಿನಿಯಮ ಕೇಂದ್ರದಲ್ಲೇ ಆಗಿರುವುದಿಂದ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸಿರಲಿಲ್ಲ.

ಅನುದಾನದ ನಿರೀಕ್ಷೆಯಲ್ಲಿ
2022-23ನೇ ಸಾಲಿನ ಪದವಿ ಶೈಕ್ಷಣಿಕ ತರಗತಿಗಳು ಇನ್ನಷ್ಟೇ ಆರಂಭವಾಗಬೇಕಿದೆ. ಹೀಗಾಗಿ ಈ ಸಾಲಿನಲ್ಲಿ ಸರಕಾರದಿಂದ ಸ್ಟಡಿ ಸರ್ಕಲ್‌ ಕಾರ್ಯಕ್ರಮವನ್ನು ಮತ್ತೆ ಆರಂಭಿಸುವ ಸಾಧ್ಯತೆಯಿದೆ. ಸರಕಾರದಿಂದ ಅನುದಾನ ಬಂದ ಅನಂತರವೇ ಕಾರ್ಯಕ್ರಮ ನಡೆಸಲು ಸಾಧ್ಯ. ಸಂಪನ್ಮೂಲ ವ್ಯಕ್ತಿ ಗಳಿಗೂ ಗೌರವಧನ ನೀಡಬೇಕಿದೆ. ಹೀಗಾಗಿ ಈ ವರ್ಷ ಅನುದಾನ ಬರುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ; ಒಬ್ಬ ಯೋಧಗೆ ಗಾಯ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಕ್ತ ಚಂದನ ಸಾಗಾಟ ಪ್ರಕರಣ: ಆರೋಪಿಗಳಿಗೆ ಜಾಮೀನು

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರ

ರಾಯರ ಭಕ್ತರಿಗೆ ತಿರುಪತಿಯಲ್ಲಿ ಅಗತ್ಯ ಸೌಲಭ್ಯ: ರಾಯರಿಗೆ 1.5 ಕೋಟಿಯ ಕಾಸಿನ ಸರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಪರ್ಕಳ: ಚಿರತೆ ದಾಳಿ ಪ್ರಕರಣ : ಸತ್ತಂತೆ ನಟಿಸಿ ಬದುಕುಳಿದ ಶ್ವಾನ!

ಪರ್ಕಳ: ಚಿರತೆ ದಾಳಿ ಪ್ರಕರಣ : ಸತ್ತಂತೆ ನಟಿಸಿ ಬದುಕುಳಿದ ಶ್ವಾನ!

ಪಡುಬಿದ್ರಿ : ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣ ಪಡೆದು ಮೋಸ

ಪಡುಬಿದ್ರಿ : ಮದುವೆಯಾಗುವುದಾಗಿ ನಂಬಿಸಿ ಚಿನ್ನಾಭರಣ ಪಡೆದು ಮೋಸ

ಟಿ. ಮೋಹನದಾಸ್‌ ಪೈ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಟಿ. ಮೋಹನದಾಸ್‌ ಪೈ ಭಾವಚಿತ್ರಕ್ಕೆ ಪುಷ್ಪಾರ್ಚನೆ

MUST WATCH

udayavani youtube

ಕಬ್ಬಿನಾಲೆ ಫಾಲ್ಸ್.. ಇದು ಹೆಬ್ರಿಯ ನಿಗೂಢ ಜಲಪಾತ!

udayavani youtube

ಶ್ರೀ ಆರಗ ಜ್ಞಾನೇಂದ್ರ ರವರು ವಿದ್ವತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. |udayavaninews

udayavani youtube

News bulletin 13-8-2022

udayavani youtube

ಕಾಡಿನ ಪರಿಕಲ್ಪನೆಯಲ್ಲಿ ಕೃಷಿ ಮಾಡುವುದು ಹೇಗೆ

udayavani youtube

ಮಗನನ್ನು ನಾಗರ ಹಾವಿನಿಂದ ರಕ್ಷಿಸಿದ ತಾಯಿ : ವಿಡಿಯೋ ನೋಡುವಾಗ ಮೈ ಜುಂ ಅನ್ನುತ್ತೆ

ಹೊಸ ಸೇರ್ಪಡೆ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ; ಒಬ್ಬ ಯೋಧಗೆ ಗಾಯ

ಶ್ರೀನಗರ: ಗ್ರೆನೇಡ್‌ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ಎಸೆತ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಕಳವುಗೈಯಲು ಬಂದು ಹೊಡೆತ ತಿಂದ: ಪರಾರಿಯಾಗಿದ್ದ‌ ಆರೋಪಿ ಬಂಧನ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉಡುಪಿ: ಪತ್ನಿಗೆ ಮಾನಸಿಕ ಕಿರುಕುಳ, ಜೀವ ಬೆದರಿಕೆ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

ಉದ್ಯಮಿಗೆ ಬೆದರಿಕೆ: ದಾಖಲೆ ಕಳವು, ಹಣ ಸುಲಿಗೆಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.