ಜೋಡುರಸ್ತೆ 6.5 ಕೋ.ರೂ. ಕಾಮಗಾರಿಗೆ ಭೂಮಿಪೂಜೆ
Team Udayavani, Apr 26, 2022, 12:39 PM IST
ಕಾರ್ಕಳ: ಕಾರ್ಕಳಕ್ಕೆ ಮೂಲ ಸೌಕರ್ಯ ಜತೆಗೆ ಒಂದಾದ ಅನಂತರ ಇನ್ನೊಂದು ಯೋಜನೆಗಳನ್ನು ತರುವ ಪ್ರಯತ್ನ ನಡೆಸಲಾಗುತ್ತಿದೆ. ವೇಗಕ್ಕೆ ತಕ್ಕಂತೆ ಪರಿವರ್ತನೆಗಳನ್ನು ಮಾಡುತ್ತ ಬರಲಾಗಿದೆ. ಸ್ವರ್ಣ ಕಾರ್ಕಳದ ಕಲ್ಪನೆ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಾರ್ವಜನಿಕರಿಂದ ಸಲಹೆಯನ್ನು ಇತಿಮಿತಿಯೊಳಗೆ ಪಡೆಯುತ್ತೇವೆ. ಕಾರ್ಕಳ ಉತ್ಸವದ ಮೂಲಕ ಕಾರ್ಕಳ ಒಂದು ಹಂತದಲ್ಲಿ ಬ್ರ್ಯಾಂಡ್ ಆಗಿದೆ. ಸ್ವರ್ಣ ಕಾರ್ಕಳ ಕಲ್ಪನೆಯಲ್ಲೂ ಬ್ರ್ಯಾಂಡ್ ಆಗಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ಕುಮಾರ್ ಹೇಳಿದರು.
ಜೋಡುರಸ್ತೆ ಪೇಟೆಯಲ್ಲಿ 6.5 ಕೋ. ರೂ. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಅವರು ಮಾತನಾಡಿದರು.
ಜೋಡುರಸ್ತೆಯ ಈ ಪ್ರದೇಶ ಉದ್ಯಮಗಳನ್ನು ನಡೆಸಿದ್ದರ ಪರಿಣಾಮ ಪಟ್ಟಣಕ್ಕೆ ಸರಿಸಮನಾಗಿ ಬೆಳೆದಿದೆ. ಕರಾವಳಿಯ ಪ್ರದೇಶಗಳ ಪ್ರವಾಸಿ ಕೇಂದ್ರ ತಲುಪಲು ಕಾರ್ಕಳವಾಗಿಯೇ ಹೆಚ್ಚಿನವರು ಪ್ರಯಾಣ ಬೆಳೆಸುತ್ತಾರೆ. ಈ ಹಿನ್ನೆಲೆ ಹಂತ ಹಂತವಾಗಿ ಕಾರ್ಕಳವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹತ್ತಾರು ಯೋಜನೆಗಳ ಮೂಲಕ ಎಲ್ಲ ಆಯಾಮಗಳ ಮೂಲಕ ಗಮನ ನೀಡಲಾಗುತ್ತಿದೆ. ತಾಲೂಕಿನ ಬಹುತೇಕ ರಸ್ತೆಗಳು ಅಭಿವೃದ್ಧಿ ಹೊಂದಿವೆ. ಈದು ನಾಲ್ಕು ಪಥ ರಸ್ತೆಯಾಗಿ ಅಭಿವೃದ್ಧಿಯಾಗುತ್ತಿದೆ. ಪುಲ್ಕೇರಿಯಿಂದ ಬಜಗೋಳಿ ತನಕ ನಾಲ್ಕು ಪಥ ರಸ್ತೆ 180 ಕೋ.ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ ಎಂದರು.
ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಉಪಾಧ್ಯಕ್ಷೆ ಪಲ್ಲವಿ, ಕುಕ್ಕುಂದೂರು ಗ್ರಾ.ಪಂ ಅಧ್ಯಕ್ಷೆ ಶಶಿಮಣಿ, ಬಿಜೆಪಿ ಮಂಡಲ ಅಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ಪ್ರ. ಕಾರ್ಯದರ್ಶಿ ನವೀನ್ ನಾಯಕ್, ಗುತ್ತಿಗೆದಾರ ಡಿ.ಆರ್. ರಾಜು, ಸುಮಿತ್ ಕೌಡೂರು, ಸಚಿನ್ ಸಾಲ್ಯಾನ್, ರವಿಪ್ರಕಾಶ್, ರವೀಂದ್ರಕುಮಾರ್ ಸ್ವಾಗತಿಸಿ, ಜ್ಯೋತಿರಮೇಶ್ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಈಡೇರದ ಬೇಡಿಕೆ : 67ನೇ ದಿನಕ್ಕೆ ಕಾಲಿಟ್ಟ ಮೊಗೇರ ಸಮುದಾಯದ ಧರಣಿ ಸತ್ಯಾಗ್ರಹ
ಆನ್ಲೈನ್ನಲ್ಲಿ ಪ್ರೀತಿ, ಮದುವೆ : 12 ಲಕ್ಷ ರೂ ವಂಚಿಸಿದ ಮೂರು ಮಕ್ಕಳ ತಾಯಿ
ಮಿಜೋರಾಂ: ವಿದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 468 ವನ್ಯಜೀವಿಗಳ ರಕ್ಷಣೆ
ಸಾಗರ : ರಸ್ತೆ ಪಕ್ಕದ ಚರಂಡಿಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಸಾವು
ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ