“ರಾಹುಲ್‌ ಗಾಂಧಿ ಅವರನ್ನು ಪ್ರಧಾನಿಯನ್ನಾಗಿಸೋಣ’


Team Udayavani, Feb 27, 2019, 1:00 AM IST

rahul.jpg

ಕಟಪಾಡಿ: ದ್ವೇಷ, ಸೇಡಿನ ರಾಜಕಾರಣದ ಮೂಲಕ ಭಾರತದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ, ಏಕತೆ-ಅಖಂಡತೆ-ಸಮಗ್ರತೆ ಕಾನೂನು ಸುರಕ್ಷತೆ ಅಪಾಯದಲ್ಲಿದೆ. ದೇಶದ ಇತರೇ ಜ್ವಲಂತ ಸಮಸ್ಯೆಗಳನ್ನು ಸರಿಪಡಿಸುವ ಪ್ರಯತ್ನವು ಗಾಂಧೀಜಿ ಹಾಕಿಕೊಟ್ಟ ಚಳವಳಿ ಮಾರ್ಗದಿಂದ ಮಾಡಬೇಕಿದೆ. ಆ ನಿಟ್ಟಿನಲ್ಲಿ  ಗಾಂಧಿಯಾನದ ಚಳವಳಿಗಳ ಮೂಲಕ ನಾವೆಲ್ಲರೂ ಸೇರಿಕೊಂಡು ತಕ್ಕ ಉತ್ತರ ನೀಡೋಣ. ಮತ್ತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಿ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿಯನ್ನಾಗಿಸೋಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕರೆ ನೀಡಿದರು.

ಆವರು ಫೆ.25ರಂದು ರಾಜೀವ್‌ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆ ವತಿಯಿಂದ ಜನಜಾಗೃತಿಗಾಗಿ ದೇಶ ಸಂಚಾರದ ಸಂದರ್ಭ ಕಟಪಾಡಿಯಿಂದ ಉದ್ಯಾವರ ಹೊಳೆಯನ್ನು ದೋಣಿಯ ಜಂಗಲಿನ ಮೂಲಕ ದಾಟಿದ ಉದ್ಯಾವರ ಕಡವಿನಬಾಗಿಲಿನಿಂದ ಉಡುಪಿಯ ಅಜ್ಜರಕಾಡು ಗಾಂಧಿ ಪ್ರತಿಮೆ ತನಕ ಪಾದಯಾತ್ರೆ-ಗಾಂಧಿ ಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವತ್ಛ  ಭಾರತ್‌ ಮಹಾತ್ಮಾ ಗಾಂಧಿಯವರ ಕನಸು. ಕಾಂಗ್ರೆಸ್‌ನ ನಿರ್ಮಲ್‌ ಭಾರತ್‌ ಯೋಜನೆಯನ್ನು ಇದೀಗ ಬಿಜೆಪಿ ಸ್ವತ್ಛ ಭಾರತ್‌ ಮೂಲಕ ಹೈಜಾಕ್‌ ಮಾಡಿದೆ.

ದೇಶದ 6.5 ಲಕ್ಷ ಹಳ್ಳಿಗಳ ಅಭಿವೃದ್ಧಿಯಾದಲ್ಲಿ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ ಎಂದು ಮನಗಂಡಿದ್ದು, ಸ್ವರಾಜ್‌ ನಿರ್ಮಾಣಕ್ಕಾಗಿ ಗಾಂಧೀಜಿ ಕನಸು ಕಂಡಿದ್ದರು. ಅದಕ್ಕಾಗಿ ಕಾಂಗ್ರೆಸ್‌ ಪಂಚಾಯತ್‌ ರಾಜ್‌ ವಿಕೇಂದ್ರೀಕರಣದ ಮೂಲಕ ಮಹಿಳಾ ಮೀಸಲಾತಿ, ಮಹಿಳೆಯರ ರಕ್ಷಣೆಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಸ್ಥಳೀಯಾಡಳಿತದಲ್ಲೂ ಮೀಸಲಾತಿ ಇರಿಸಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ರೀತಿಯಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಿ ಸಾಮಾಜಿಕ ನ್ಯಾಯ ಒದಗಿಸಿದೆ ಎಂದರು.

ದೇಶದ್ರೋಹದ ಕೆಲಸ ಮಾಡುವ ಬಿಜೆಪಿಗರು ಪ್ರಿಯಾಂಕ ಗಾಂಧಿ ರಾಜಕೀಯಕ್ಕೆ ಬಂದ ತತ್‌ಕ್ಷಣ ದಿಗ್ಭ್ರಮೆಗೊಂಡಿದ್ದಾರೆ, ಕಾಳಧನ್‌ ತರಲಿಲ್ಲ, ರೈತರ ಆತ್ಮಹತ್ಯೆ ಜಾಸ್ತಿಯಾಗಿದೆ, ಫಸಲ್‌ ಭಿಮಾ ಯೋಜನೆಯ ಮೂಲ ಹಣ ಲೂಟಿಯಾಗಿದೆ. ಇದಕ್ಕೆ ಕಾರಣರು ಯಾರೆಂದು ಮತದಾರರಿಗೆ ಮುಟ್ಟಿಸಬೇಕಿದೆ. ಆ ಮೂಲಕ ಜನಜಾಗೃತಿ ಮೂಡಿಸೋಣ ಎಂದರು.

ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ಉಡುಪಿಯ ಪ್ರಮುಖರಾದ ರೋಶಿನಿ ಒಲಿವೆರಾ ಅವರಿಗೆ ಗಾಂಧಿ ಟೋಪಿ ತೊಡಿಸಿ, ಪಕ್ಷದ ಧ್ವಜ ನೀಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಉದ್ಯಾವರ- ಮಠದಂಗಡಿ, ಬಲಾಯಿಪಾದೆ, ಕಿನ್ನಿಮೂಲ್ಕಿ, ಹಳೆ ರಸ್ತೆಯಲ್ಲಿ ಈ ಪಾದಯಾತ್ರೆಯು ಸಾಗಿತ್ತು.
ಈ ಸಂದರ್ಭ ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ, ಮಾಜಿ ಶಾಸಕ ಗೋಪಾಲ ಭಂಡಾರಿ, ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯ ರಾಜ್ಯ ಸಂಚಾಲಕ ರಂಗಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ. ಬಾವಾ, ಪಿ.ವಿ. ಮೋಹನ್‌, ಕಾರ್ಯದರ್ಶಿ ವೆರೋನಿಕಾ ಕರ್ನೇಲಿಯೋ, ಮುರಳೀಧರ ಶೆಟ್ಟಿ, ಕಾಂಗ್ರೆಸ್‌ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಪ್ರಮುಖರಾದ ಪ್ರವೀಣ್‌ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಗೀತಾ ವಾಗ್ಲೆ, ಗ್ರಾ.ಪಂ., ತಾ.ಪಂ., ಜಿ.ಪಂ. ಜನಪ್ರತಿನಿಧಿಗಳು, ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು  ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ಅಯೋಧ್ಯೆ ಮಂದಿರಕ್ಕೆ ರಾಜ್ಯದ ಶಿಲೆಗಲ್ಲು

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ರಾಜ್ಯದಲ್ಲಿ ಏಕರೂಪ ದರ ನಿಗದಿಯಿಂದ ಕಡಿವಾಣ ಸಾಧ್ಯ

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

ವ್ಯಾಕ್ಸಿನೇಶನ್‌: ಉಡುಪಿ ಜಿಲ್ಲೆಯಲ್ಲಿ ಮಣಿಪಾಲ ಕೇಂದ್ರ ಪ್ರಥಮ

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

ಜಿಲ್ಲೆಯಾದ್ಯಂತ 1-5ನೇ ತರಗತಿ ಇಂದಿನಿಂದ ಆರಂಭ

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

ಹೊಸ್ಮಾರು ಜಂಕ್ಷನ್‌ನಲ್ಲೆ ಇದೆ ಸಮಸ್ಯೆ ಹತ್ತಾರು!

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.