ಲೈಟ್‌ ಫಿಶಿಂಗ್‌: ರಾಜ್ಯ ಸರಕಾರದ ಮೃದು ಧೋರಣೆ


Team Udayavani, Dec 15, 2017, 8:04 AM IST

15-6.jpg

ಕುಂದಾಪುರ: ಆಳ ಸಮುದ್ರದಲ್ಲಿ ರಾತ್ರಿ ವೇಳೆ ಲೈಟ್‌ ಉರಿಸಿ ಮೀನುಗಾರಿಕೆ ನಡೆಸುವುದನ್ನು ಕೇಂದ್ರ ಸರಕಾರದ ನಿಷೇಧವಿದ್ದರೂ ರಾಜ್ಯ ಸರಕಾರ ಮೃದು ಧೋರಣೆ ತಳೆದಿದ್ದು, ಇತ್ತೀಚೆಗೆ ಮುಖ್ಯಮಂತ್ರಿ ಭಟ್ಕಳಕ್ಕೆ ಬಂದಿದ್ದಾಗ ಲೈಟ್‌ ಫಿಶಿಂಗ್‌ ನಡೆಸಲು ಮೀನುಗಾರರಿಗೆ ಮೌಖೀಕವಾಗಿ ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಜತೆಗೆ ಏಕಾಏಕಿ ಲೈಟ್‌ ಫಿಶಿಂಗ್‌ ನಿಷೇಧಿಸಿ ಆದೇಶ ಹೊರಡಿಸಿರುವ ಕೇಂದ್ರದ ಏಕಪಕ್ಷೀಯ ನಿರ್ಧಾರಕ್ಕೆ ರಾಜ್ಯ ಆಕ್ಷೇಪವನ್ನೂ ವ್ಯಕ್ತಪಡಿಸಿದೆ. 

ರಾಜ್ಯ ಸರಕಾರವು ಸಮುದ್ರದಲ್ಲಿ 12 ನಾಟಿಕಲ್‌ ಮೈಲು ಒಳಗಿನ ಪ್ರದೇಶ ಹಾಗೂ ಕೇಂದ್ರ ಸರಕಾರವು 12 ನಾಟಿಕಲ್‌ ಮೈಲು ಹೊರಗಿನ ವ್ಯಾಪ್ತಿಯಲ್ಲಿ ಬುಲ್‌ ಟ್ರಾಲಿಂಗ್‌ ಹಾಗೂ ಬೆಳಕು ಹಾಕಿ ಮೀನುಗಾರಿಕೆ ನಡೆಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿವೆ. ಆದರೆ ಇತ್ತೀಚೆಗೆ ಭಟ್ಕಳಕ್ಕೆ ಬಂದಿದ್ದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮನ್ನು ಭೇಟಿಯಾದ ಮೀನುಗಾರರಿಗೆ ಸದ್ಯ ಲೈಟ್‌ ಫಿಶಿಂಗ್‌ ನಡೆಸಬಹುದು ಎನ್ನುವ “ಮೌಖೀಕ’ವಾಗಿ ಆದೇಶಿಸಿದ್ದಾರೆ ಎನ್ನಲಾಗಿದೆ.  

ಸಿಎಂ ಮೌಖೀಕ ಆದೇಶದ ಹಿನ್ನೆಲೆಯಲ್ಲಿ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಲೈಟ್‌ ಫಿಶಿಂಗ್‌ ಆರಂಭವಾಗುವ ಸಾಧ್ಯತೆಗಳಿವೆ. ಮೊದಲ ಒಂದು ತಿಂಗಳು ಪ್ರತಿಕೂಲ ವಾತಾವರಣದಿಂದ ಮೀನುಗಾರಿಕೆ ವಿಳಂಬ ಆರಂಭ, ಮತ್ಸ  ಕ್ಷಾಮ, ಒಖೀ ಚಂಡ ಮಾರುತಗಳಿಂದ ತತ್ತರಿಸಿದ್ದ ಮೀನುಗಾರರಿಗೆ ಸರಕಾರದ ಈ ನಡೆ ಹೊಸ ಭರವಸೆ ಮೂಡಿಸಿದೆ.

ವಿದೇಶಗಳಲ್ಲಿ ಅನುಮತಿ ಇದೆ
ಮೀನುಗಾರಿಕೆ ನಡೆಯುತ್ತಿರುವ ಅನ್ಯ ದೇಶಗಳಲ್ಲಿಯೂ ಲೈಟ್‌ ಫಿಶಿಂಗ್‌ಗೆ ಅನುಮತಿಯಿದೆ. ರಾತ್ರಿ ವೇಳೆ ಮೀನುಗಳ ಹೆಚ್ಚು ಪ್ರಮಾಣದಲ್ಲಿ ಹಾಗೂ ಬೃಹತ್‌ ಗಾತ್ರದ ಮೀನುಗಳು ಸಿಗುವುದರಿಂದ ರಾಜ್ಯ ಕರಾವಳಿಯಲ್ಲಿಯೂ ಲೈಟ್‌
ಫಿಶಿಂಗ್‌ಗೆ ಅವಕಾಶ ನೀಡುವಂತೆ ಮೀನುಗಾರರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.

750 ಪಸೀìನ್‌ ಬೋಟುಗಳು: ಮಂಗಳೂರಿನಿಂದ ಕಾರವಾರದವರೆಗೆ ಹಬ್ಬಿರುವ ರಾಜ್ಯ ಕರಾವಳಿಯಲ್ಲಿ ಸುಮಾರು 750 ಪಸೀìನ್‌ ಬೋಟುಗಳಿದ್ದು, ಪ್ರತೀ ದೋಣಿಯಲ್ಲಿ ಸುಮಾರು 35-40 ಮೀನುಗಾರರಂತೆ 28 ಸಾವಿರಕ್ಕೂ ಅಧಿಕ ಮಂದಿ ಈ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಕಳೆದ ವರ್ಷ ಕೇಂದ್ರ ಸರಕಾರ ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ಎಲ್ಲ ಪಸೀìನ್‌ ಬೋಟುಗಳು 3-4 ಲಕ್ಷ ರೂ. ಬಂಡವಾಳ ಹೂಡಿ ಲೈಟ್‌ ಫಿಶಿಂಗ್‌ಗೆ ಸಿದ್ಧವಾಗಿದ್ದವು. ಆದರೆ ಈಗ ಏಕಾಏಕಿ ನಿಷೇಧ ಹೇರಿರುವುದರಿಂದ ತೊಂದರೆಯಾಗಿದೆ, ಹಗಲು ಮೀನುಗಾರಿಕೆಯಲ್ಲಿ ಮೀನುಗಳು ಹೆಚ್ಚು ಸಿಗದೆ ಇರುವುದರಿಂದ ಸಂಕಷ್ಟದಲ್ಲಿದ್ದೇವೆ ಎನ್ನುವ ಅಳಲು ಮೀನುಗಾರರದು.  

ಏನಿದು ಲೈಟ್‌ ಫಿಶಿಂಗ್‌?
ಪಸೀನ್‌ ಬೋಟುಗಳಲ್ಲಿ ಜನರೇಟರ್‌ ವ್ಯವಸ್ಥೆ ಮಾಡಿ, ತೀರದಿಂದ 12 ನಾಟಿಕಲ್‌ ಮೈಲು ದೂರದಲ್ಲಿ ರಾತ್ರಿ ವೇಳೆ ಆಳ ಸಮುದ್ರದಲ್ಲಿ ಲೈಟ್‌ ಉರಿಸಿ, ಬೋಟುಗಳು ಸುತ್ತುವರಿದು, ಮೀನುಗಾರಿಕೆ ನಡೆಸುವ ವಿಧಾನ ಲೈಟ್‌ ಫಿಶಿಂಗ್‌. 

ಕೇಂದ್ರಕ್ಕೆ ಪತ್ರ: ಸಚಿವ ಪ್ರಮೋದ್‌
ರಾಜ್ಯ ಸರಕಾರಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇಂದ್ರ ಸರಕಾರವು ಏಕಪಕ್ಷೀಯವಾಗಿ ಲೈಟ್‌ ಫಿಶಿಂಗ್‌ ನಿಷೇಧಿಸಿ ಆದೇಶ ಹೊರಡಿಸಿರುವುದು ಒಕ್ಕೂಟ ವ್ಯವಸ್ಥೆಯಲ್ಲಿ ಸರಿಯಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೂಡಲೇ ಕೇಂದ್ರಕ್ಕೆ ಪತ್ರ ಬರೆಯಲಾಗುವುದು. 
ಪ್ರಮೋದ್‌ ಮಧ್ವರಾಜ್‌,  ರಾಜ್ಯ ಮೀನುಗಾರಿಕೆ ಸಚಿವರು

ಇದು ಅಸಾಂಪ್ರದಾಯಿಕ ವಿಧಾನವೇ?
ಲೈಟ್‌ ಫಿಶಿಂಗ್‌ ಅಸಾಂಪ್ರದಾಯಿಕ ಮೀನುಗಾರಿಕೆಯ ವಿಧಾನ, ಇದರಿಂದ ಮತ್ಸé ಸಂತತಿ ನಾಶ ಆಗುತ್ತದೆ ಎನ್ನುವ ಅಪವಾದಗಳಿವೆ. ಆದರೆ ಮೀನುಗಾರಿಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಂಪಾಡನ್‌ ಎನ್ನುವ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಸಂಸ್ಥೆ ಈ ಬಗ್ಗೆ ವಿಜ್ಞಾನಿಗಳ ತಂಡದಿಂದ ಅಧ್ಯಯನ ನಡೆಸಿದ್ದು, ಅದರನ್ವಯ 25 ಕಿಲೋ ವ್ಯಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಜನರೇಟರ್‌ ಬಳಸಬಾರದು, 45 ಎಂಎಂಗಿಂತ ಸಣ್ಣ ಬಲೆಗಳನ್ನು ಬಳಸಬಾರದು, ಹುಣ್ಣಿಮೆ ಸಮಯದಲ್ಲಿ ಲೈಟ್‌ ಫಿಶಿಂಗ್‌ ನಡೆಸಬಾರದು ಎನ್ನುವ ಷರತ್ತು ವಿಧಿಸಿ ಅನುಮತಿ ನೀಡಲಾಗಿತ್ತು. ಆದರೆ ಕೆಲವು ತಿಂಗಳ ಹಿಂದೆ ಗೋವಾದಲ್ಲಿ ಪಸೀìನ್‌ ಹಾಗೂ ಸಾಮಾನ್ಯ ದೋಣಿ ಮೀನುಗಾರರ ನಡುವೆ ನಡೆದ ಸಂಘರ್ಷದ ಪರಿಣಾಮ ಅಲ್ಲಿನ ಸರಕಾರ ಕೇಂದ್ರಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಲೈಟ್‌ ಫಿಶಿಂಗ್‌ಗೆ ಕೇಂದ್ರ ನಿಷೇಧ ಹೇರಿತ್ತು. 

ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.