“ಭಜನೆ, ಹರಿಕಥೆಯ ಮೂಲಕ ಮದರಂಗಿ ಕಾರ್ಯಕ್ರಮವಾಗಲಿ’


Team Udayavani, Mar 7, 2019, 1:00 AM IST

bhajane.jpg

ಹೆಬ್ರಿ: ಸಂಪ್ರದಾಯ ಬದ್ಧ ಹಾಗೂ ಶಾಸ್ತ್ರಬದ್ಧವಾಗಿ ಆಚರಿಸುವ ಮದರಂಗಿ ಕಾರ್ಯಕ್ರಮಗಳು ಇಂದು ಆಧುನಿಕತೆ ಯಿಂದ ಮರೆಯಾಗುತ್ತಿರುವುದು ದುಃಖದ ಸಂಗತಿ. ಮದ್ಯಪಾನದೊಂದಿಗೆ ಮದರಂಗಿ ಕಾರ್ಯಕ್ರಮ ನಮ್ಮ ಆಚರಣೆ ಅಲ್ಲವೇ ಅಲ್ಲ. ಅದನ್ನು ನಿಲ್ಲಿಸಬೇಕು. ಭಜನೆ ,ಹರಿಕಥೆ ಮೂಲಕ ಮದರಂಗಿ ಕಾರ್ಯಕ್ರಮವಾಗಲಿ ಎಂದು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್‌ಅಮೀನ್‌ ಹೇಳಿದರು.

ಮಾ. 6ರಂದು ಹೆಬ್ರಿ ಸೂಪರ್‌ ಮಾರ್ಕೆಟ್‌ನ ಶ್ರೀ ಶಾರದಾ ನಂದ್ಯಪ್ಪ ಶೆಟ್ಟಿ ಸಭಾಭವನದಲ್ಲಿ ಕಾರ್ಕಳ   ತಾಲೂಕಿನ ತಾಲೂಕು ಜನಜಾಗೃತಿ ವೇದಿಕೆ ಮತ್ತು ಶ್ರೀ ಕ್ಷೇತ್ರ ಧ.ಗ್ರಾ.ಯೋ., ಹೆಬ್ರಿ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಹೆಬ್ರಿಯ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಮದರಂಗಿ ಕಾರ್ಯಕ್ರಮದಲ್ಲಿ ಮದ್ಯಪಾನ ನಿಷೇಧದ ಬಗ್ಗೆ  ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮದ್ಯಪಾನ ಎಲ್ಲಿಯ ವರೆಗೆ ಮುಟ್ಟಿದೆ ಎಂದರೆ ಇಂದು ಕೇವಲ ಮದರಂಗಿ,ಸಾವಿನ ಮನೆಯಲ್ಲಿ ಮಾತ್ರವಲ್ಲ ಹುಟ್ಟಿದ ಮಗು ಮಾತನಾಡುವ ಮೊದಲೇ ಮೊದಲ ಹುಟ್ಟು ಹಬ್ಬದಲ್ಲಿ ಕಂಠಪೂರ್ತಿ ಮದ್ಯಸೇವನೆ ನಡೆಸಿ ಮಗುವಿನ ಹುಟ್ಟು ಹಬ್ಬ ಆಚರಿಸುವುದು ಬೇಸರದ ಸಂಗತಿ ಎಂದು ಹೆಬ್ರಿ ವಲಯ ಜನಜಾಗೃತಿ ವೇದಿಕೆಯ ಸದಸ್ಯ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಇಂದು ತೀರ ಬಡತನದಲ್ಲಿರುವವರು ಕೂಡ ಬ್ಯಾಂಕ್‌ಗಳಲ್ಲಿ ಅಥವಾ ನೆರೆಹೊರೆ ಯವರಲ್ಲಿ ಸಾಲ ಮಾಡಿ ದೂರಿಯಾಗಿ ಮದ್ಯಪಾನದೊಂದಿಗೆ ಮದರಂಗಿ ಕಾರ್ಯ ಕ್ರಮವನ್ನು ಆಚರಿಸುತ್ತಾರೆ. ಈ ರೀತಿಯ ಕಾರ್ಯಕ್ರಮಗಳಿಗೆ ಯಾರೂ ಸಹಕಾರ ನೀಡಬಾರದು ಎಂದು ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್‌.ಕೆ. ಸುಧಾಕರ್‌ ಹೇಳಿದರು.

ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಸುಭಾಶ್ಚಂದ್ರ ಚೌಟ ಅಧ್ಯಕ್ಷತೆ ವಹಿಸಿªರು. ಹೆಬ್ರಿ ವಲಯ ಜನಜಾಗೃತಿ ವೇದಿಕೆಯ ಸದಸ್ಯ ಬೋಜ ಕುಲಾಲ್‌, ಉದ್ಯಮಿ ಭಾಸ್ಕರ್‌ ಜೋಯಿಸ್‌, ಹೆಬ್ರಿ ಕೇಂದ್ರ ಸಮಿತಿ ಒಕ್ಕೂಟದ ಉಪಾಧ್ಯಕ್ಷ ಮುದ್ದು ಕೃಷ್ಣ, ಹೆಬ್ರಿ ಸೀತಾನದಿ ಸೌಖ್ಯ ಯೋಗ ಟ್ರಸ್ಟ್‌ ಅಧ್ಯಕ್ಷ ಸೀತಾನದಿ ವಿಟuಲ ಶೆಟ್ಟಿ  , ಹೆಬ್ರಿ ಮದಗ ಫೌಂಡೇಶನ್‌ನ ಉಪಾಧ್ಯಕ್ಷ ಎಚ್‌.ಬಿ. ಸುರೇಶ್‌, ಚೈತನ್ಯ ಯುವ ವೃಂದದ ಅಧ್ಯಕ್ಷ ಶಂಕರ ಶೇರಿಗಾರ್‌,ಲಯನ್ಸ್‌ ಕ್ಲಬ್‌ ಅಧ್ಯಕ್ಷ ಹರೀಶ್‌ ಪೂಜಾರಿ, ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಕಮಲಾಕ್ಷ ನಾಯಕ್‌, ಉದ್ಯಮಿ ವಾದಿರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಹೆಬ್ರಿ ವಲಯ ಜನಜಾಗೃತಿ ವೇದಿಕೆಯ ನರೇಂದ್ರ ನಾಯಕ್‌ ಸ್ವಾಗತಿಸಿ, ಧರ್ಮಸ್ಥಳ ವಲಯ ಮೇಲ್ವಿಚಾರಕ ಪ್ರವೀಣ್‌ ಕಾರ್ಯಕ್ರಮ ನಿರೂಪಿಸಿದರು.ಯೋಜನಾ ಅಧಿಕಾರಿ ಕೃಷ್ಣ ಟಿ. ವಂದಿಸಿದರು.

15 ದಿನಗಳ ಮೊದಲು ಮದುವೆ ಮನೆ ಭೇಟಿ
ಧರ್ಮಸ್ಥಳ ಯೋಜನೆಯ ನೇತೃತ್ವದಲ್ಲಿ ಪ್ರತಿಯೊಂದು ಸಂಘಟನೆಗಳು ಒಟ್ಟಾಗಿ ಈ ಭಾಗದಲ್ಲಿ ನಡೆಯುವ ಮದುವೆ ಕಾರ್ಯಕ್ರಮದ ಬಗ್ಗೆ ಗಮನಿಸಿ 15 ದಿನಗಳ ಮೊದಲು ಅವರ ಮನೆಗೆ ಭೇಟಿ ನೀಡಿ ಮದರಂಗಿ ಕಾರ್ಯಕ್ರಮದಲ್ಲಿ ಯಾವುದೇ ಕಾರಣಕ್ಕೂ ಮದ್ಯಪಾನವನ್ನು ಬಳಸಬೇಡಿ ಎಂಬ ಮನವಿ ಮಾಡಿ ಅರಿವು  ಮೂಡಿಸುವ ಕೆಲಸಮಾಡಬೇಕು ಎಂದು ಉಡುಪಿ ಜಿಲ್ಲೆ  ಶ್ರೀ ಕÒೇ. ಧ.ಗ್ರಾ.ಯೋ. ನಿರ್ದೇಶಕ ಪುರುಷೋತ್ತಮ ಪಿ.ಕೆ. ಅವರು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ಹೇಳಿದರು.

ಟಾಪ್ ನ್ಯೂಸ್

ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!

ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!

1-vv

ಪ್ಯಾರಿಸ್ ಒಲಂಪಿಕ್ಸ್‌ : ಅಮೃತ ಕ್ರೀಡಾ ದತ್ತು,ರಾಜ್ಯದ 75 ಕ್ರೀಡಾಪಟುಗಳ ಆಯ್ಕೆ

”ಮುತ್ಯಾ ಆರಾಮ ಅದಾನೂ…” ವಿಜಯೇಂದ್ರ ಬಳಿ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿದ ಪೋರ

”ಮುತ್ಯಾ ಆರಾಮ ಅದಾನೂ…” ವಿಜಯೇಂದ್ರ ಬಳಿ ಬಿಎಸ್ ವೈ ಯೋಗಕ್ಷೇಮ ವಿಚಾರಿಸಿದ ಪೋರ

mamata

ಬಿಜೆಪಿ ಸೋಲಿಸಲು ಗೋವಾದ ಎಲ್ಲರೂ ಒಂದಾಗುವ : ಮಮತಾ ಬ್ಯಾನರ್ಜಿ

ಕಿತ್ತೂರಿನಲ್ಲಿ ಮನಸೂರೆಗೊಂಡ ಜನಪದ ಕಲಾವಾಹಿನಿ

ಕಿತ್ತೂರಿನಲ್ಲಿ ಮನಸೂರೆಗೊಂಡ ಜನಪದ ಕಲಾವಾಹಿನಿ

hardep-singh-puri

ಲಸಿಕೆ ನೀಡಿಲ್ಲವೇ?:ತೈಲ ಬೆಲೆ ಏರಿಕೆ ಸಮರ್ಥಿಸಿಕೊಂಡ ಪೆಟ್ರೋಲಿಯಂ ಸಚಿವ

ಕಿತ್ತೂರು ಉತ್ಸವ ಬೆಳ್ಳಿ ಹಬ್ಬ ಸಂಭ್ರಮ: ವೀರಜ್ಯೋತಿಗೆ ಸ್ವಾಗತ, ಉತ್ಸವಕ್ಕೆ ಅದ್ಧೂರಿ ಚಾಲನೆ

ಕಿತ್ತೂರು ಉತ್ಸವ ಬೆಳ್ಳಿ ಹಬ್ಬ ಸಂಭ್ರಮ: ವೀರಜ್ಯೋತಿಗೆ ಸ್ವಾಗತ, ಉತ್ಸವಕ್ಕೆ ಅದ್ಧೂರಿ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ರಸ್ತೆ ಅಪಘಾತ: ಕೊಳಲಗಿರಿ ಮೂಲದ ಯುವಕ ಮೃತ್ಯು

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ಕೋವಿಡ್‌ 3ನೇ ಅಲೆ ತಡೆಗೆ ಸನ್ನದ್ಧ: ಶಾಸಕ ರಘುಪತಿ ಭಟ್‌

ಕೋವಿಡ್‌ 3ನೇ ಅಲೆ ತಡೆಗೆ ಸನ್ನದ್ಧ: ಶಾಸಕ ರಘುಪತಿ ಭಟ್‌

ಹಡಿಲು ಭೂಮಿ ಕೃಷಿ ಕಟಾವಿಗೆ ಸಿದ್ಧ: 1,000 ಟನ್‌ ಉತ್ಪಾದನೆ ನಿರೀಕ್ಷೆ

ಹಡಿಲು ಭೂಮಿ ಕೃಷಿ ಕಟಾವಿಗೆ ಸಿದ್ಧ: 1,000 ಟನ್‌ ಉತ್ಪಾದನೆ ನಿರೀಕ್ಷೆ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!

ಟಿ20 ವಿಶ್ವಕಪ್: ಭಾರತೀಯ ನಾಯಕನಿಗೆ ಎಚ್ಚರಿಕೆ ನೀಡಿದ ಸ್ಕಾಟ್ಲೆಂಡ್ ಬೌಲರ್!

1-vv

ಪ್ಯಾರಿಸ್ ಒಲಂಪಿಕ್ಸ್‌ : ಅಮೃತ ಕ್ರೀಡಾ ದತ್ತು,ರಾಜ್ಯದ 75 ಕ್ರೀಡಾಪಟುಗಳ ಆಯ್ಕೆ

14satyagraha

ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಹಾಯಕ ಆಯುಕ್ತರ ಭೇಟಿ

13former

ಕೃಷಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ದೊಡ್ಡಬಳ್ಳಾಪುರ- ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗ

ದೊಡ್ಡಬಳ್ಳಾಪುರ: ಶವಸಂಸ್ಕಾರ ಚಿತ್ರದ ಪೋಸ್ಟರ್‌ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.