ಮಾಹೆ- ಫ್ರಾನ್ಸ್‌ನ ಫಿಗರ್‌: ಒಪ್ಪಂದಕ್ಕೆ ಸಹಿ

Team Udayavani, Jun 20, 2019, 6:10 AM IST

ಉಡುಪಿ: ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯ ಫ್ರಾನ್ಸ್‌ನ
ವಿ.ವಿ.ಗಳ ಸಮೂಹ “ಫಿಗರ್‌’ ಜಾಲಕ್ಕೆ ಸೇರ್ಪಡೆಗೊಂಡಿದೆ. ಇದಕ್ಕಾಗಿ ಎರಡೂ ಸಂಸ್ಥೆಗಳು ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿದವು. ಮಾಹೆ ಪರವಾಗಿ ಕುಲಪತಿ ಡಾ| ಎಚ್‌.ವಿನೋದ ಭಟ್‌ ಮತ್ತು ಫಿಗರ್‌ ಅಧ್ಯಕ್ಷ ಡಾ| ಲಾಮಿನ್‌ ಬೌಡಕರ್‌ ಫ್ರಾನ್ಸ್‌ನಲ್ಲಿ ಸಹಿ ಮಾಡಿದರು.

ಫಿಗರ್‌ ಫ್ರಾನ್ಸ್‌ ವಿ.ವಿ.ಗಳ ಲಾಭೇತರ ಉದ್ದೇಶದ ಸಂಘಟನೆಯಾಗಿದೆ. ಇದರಲ್ಲಿ ನೂರಕ್ಕೂ ಹೆಚ್ಚು ವಿ.ವಿ.ಗಳ ಸಂಯೋಜನೆ (ಕೋರ್ಸಸ್‌ ಮಾಸ್ಟರ್‌ ಎಂಜಿನಿಯರಿಂಗ್‌- ಸಿಎಂಐ) ಇದೆ. ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಒತ್ತು ನೀಡುವ ಸಂಘಟನೆ ಇದಾಗಿದೆ. ಸಿಎಂಐ ಐದು ವರ್ಷಗಳ ಕೋರ್ಸ್‌ ಹೊಂದಿದೆ. ಇದು ಪ್ರಾಜೆಕ್ಟ್$Õ, ಇಂಟರ್‌° ಶಿಪ್ಸ್‌ ಸಹಿತವಾದ ಸಂಶೋಧನ ತರ ಬೇತಿಯನ್ನು ನೀಡಲಿದೆ. ಸಂಶೋಧನ ಸಂಸ್ಥೆಗಳೊಂದಿಗೆ ಸಂಬಂಧವಿದೆ.

ಮಾಹೆ ಮತ್ತು ಸಿಎಂಐ ಸಂಯೋ ಜಿತ ಸದಸ್ಯ ವಿ.ವಿ.ಗಳ ನಡುವೆ ಸಂಶೋ
ಧನೆ, ತರಬೇತಿಯನ್ನು ನೀಡಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪರಿಣಿತರನ್ನು ತಯಾರುಗೊಳಿಸುವ ಗುರಿಯನ್ನು ಒಡಂಬಡಿಕೆ ಹೊಂದಿದೆ. ಮಣಿಪಾಲ ಎಂಐಟಿಯ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಫ್ರಾನ್ಸ್‌ನಲ್ಲಿ ಅಧ್ಯಯನಕ್ಕೆ ಅವಕಾಶ ಸಿಗಲಿದೆ.

ಒಪ್ಪಂದ ಪತ್ರಕ್ಕೆ ಸಹಿ ಮಾಡುವ ಸಂದರ್ಭ ಮಾಹೆ ಇಂಟರ್‌ನ್ಯಾಶನಲ್‌ ರಿಲೇಶನ್ಸ್‌ ನಿರ್ದೇಶಕ ಡಾ| ರಘು ರಾಧಾಕೃಷ್ಣನ್‌, ಫಿಗರ್‌ ಇಂಟರ್‌ನ್ಯಾಶನಲ್‌ ರಿಲೇಶನ್ಸ್‌ ಪ್ರಭಾರಿ ಪ್ರೊ| ಜೀನ್‌ ಪೀರ್‌ ಜೆಸನ್‌, ಮಾಹೆ ಸ್ಕೂಲ್‌ ಆಫ್ ಇನಾ#ರ್ಮೇಶನ್‌ ಸೈನ್ಸಸ್‌ ಸಹ ಪ್ರಾಧ್ಯಾಪಕ ಡಾ| ಪ್ರಶಾಂತ ಶೆಟ್ಟಿ ಉಪಸ್ಥಿತರಿದ್ದರು.

ಆಯಾ ವಿ.ವಿ.ಗಳೇ ಸ್ನಾತಕೋತ್ತರ ಪದವಿಗಳನ್ನು ನೀಡಲಿವೆ. ಆದರೆ ಸಿಎಂಐ ಜಂಟಿ ಮಾನ್ಯತೆ ವಿದ್ಯಾರ್ಥಿ ಗಳಿಗೆ ದೊರಕಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ