ಮಲ್ಲಾರು: ಸೇತುವೆಗಳ ತಳಭಾಗದಲ್ಲಿ ತ್ಯಾಜ್ಯ ಸಂಗ್ರಹ

Team Udayavani, May 28, 2019, 6:10 AM IST

mallar-bridge

ಕಾಪು : ನಗರ ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡುತ್ತಾ ಸ್ವತ್ಛ ಕಾಪು – ಸುಂದರ ಕಾಪು ಎಂಬ ಘೋಷಣೆಯೊಂದಿಗೆ ಪೌರಾಡಳಿತ ಸಂಸ್ಥೆಗಳ ಪೈಕಿ ರಾಜ್ಯಕ್ಕೇ ಮಾದರಿಯಾಗುವ ರೀತಿಯಲ್ಲಿ ಮುನ್ನಡೆಯುತ್ತಿರುವ ಕಾಪು ಪುರಸಭೆಗೆ ಮಲ್ಲಾರು ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿಯೇ ಸವಾಲಾಗಿ ಬಿಟ್ಟಿರುವ‌ಂತೆ ಕಾಣುತ್ತಿದೆ.

ಈ ಪುರಸಭೆ ವ್ಯಾಪ್ತಿಗೊಳಪಟ್ಟಿರುವ ಮಲ್ಲಾರು ಗ್ರಾಮದ 16 ಮತ್ತು 17ನೇ ವಾರ್ಡ್‌ನಲ್ಲಿರುವ ಅವಳಿ ಸೇತುವೆಗಳ ತಳಭಾಗವು ಕೊಳೆತ ತ್ಯಾಜ್ಯ ವಸ್ತುಗಳಿಂದಲೇ ತುಂಬಿ ಹೋಗಿದ್ದು, ಸುತ್ತಲೂ ಕೆಟ್ಟ ದುರ್ನಾತ ಬೀರುವ ಮೂಲಕ ಪುರಸಭೆಯ ಪ್ರಸಿದ್ಧಿಗೆ ಅಪಚಾರ ಉಂಟು ಮಾಡುವ ಪ್ರದೇಶಗಳಾಗಿ ಮಾರ್ಪಾಡಾಗುತ್ತಿವೆ.

ಕೊಂಬಗುಡ್ಡೆ ಸೇತುವೆ, ಕೋಟೆರೋಡ್‌ ಸೇತುವೆ
ಕಾಪು ಶ್ರೀ ಲಕೀÒ$¾ ಜನಾರ್ದನ ದೇವಸ್ಥಾನ ಬಳಿಯಲ್ಲಿ ಹಾದು ಹೋಗುವ ಕಾಪು – ಶಿರ್ವ ರಾಜ್ಯ ಹೆದ್ದಾರಿಯಲ್ಲಿರುವ ಬಡಗರಗುತ್ತು ವಾರ್ಡ್‌ ವ್ಯಾಪ್ತಿಗೆ ಬರುವ ಮಲ್ಲಾರು ಕೊಂಬಗುಡ್ಡೆ ಸೇತುವೆ ಮತ್ತು ಜನಾರ್ದನ ದೇವಸ್ಥಾನ ವಾರ್ಡ್‌ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿ 66ರಿಂದ ಕೊಪ್ಪಲಂಗಡಿ – ಕೋಟೆ ರೋಡ್‌ನ‌ ಸೇತುವೆಯ ಕೆಳಭಾಗದಲ್ಲಿ ಭರ್ಜರಿಯಾಗಿ ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ.

ಡಂಪಿಂಗ್‌ ಯಾರ್ಡ್‌ನೂ° ಮೀರಿಸುವಂತಿದೆ
ಮಲ್ಲಾರು ಗ್ರಾಮದ ಎರಡು ಸೇತುವೆಗಳ ತಳಭಾಗದಲ್ಲಿ ಸಂಗ್ರಹವಾಗುತ್ತಿರುವ ಕೊಳೆತ ತ್ಯಾಜ್ಯದ ರಾಶಿಯನ್ನು ಗಮನಿಸಿದಾಗ ಇದು ಕಾಪು ಪುರಸಭೆಯ ಅಧಿಕೃತ ಡಂಪಿಂಗ್‌ ಯಾರ್ಡ್‌ಗಿಂತಲೂ ದೊಡ್ಡಮಟ್ಟದ ತ್ಯಾಜ್ಯ ಸಂಗ್ರಹಣಾ ಕೇಂದ್ರವಾಗಿ ಮಾರ್ಪಟ್ಟಿದ್ದು, ಡಂಪಿಂಗ್‌ ಯಾರ್ಡ್‌ನೂ° ಮೀರಿಸುವಂತಿದೆಯೋ ಎಂಬ ಸಂಶಯ ಸ್ಥಳೀಯರ ಮನಸ್ಸಿನಲ್ಲಿ ಮೂಡಿಬರುವಂತಾಗಿದೆ.

ಕೋಳಿ – ಮಾಂಸಗಳ ತ್ಯಾಜ್ಯದ್ದೇ ಕಾರುಬಾರು
ಮಲ್ಲಾರು ಬಡಗರಗುತ್ತು ಮತ್ತು ಜನಾರ್ದನ ದೇವಸ್ಥಾನ ವಾರ್ಡ್‌ನ ಮಲ್ಲಾರು ಕೋಟೆ ರೋಡ್‌ನ‌ಲ್ಲಿರುವ ಸೇತುವೆಗಳ ಅಡಿ ಭಾಗದಲ್ಲಿ ಕೋಳಿ – ಮಾಂಸದಂಗಡಿಗಳ ಕೊಳೆತ ತ್ಯಾಜ್ಯ, ನಾಯಿ, ಬೆಕ್ಕು ಸಹಿತ ಸಾಕು ಪ್ರಾಣಿಗಳ ಕಳೇಬರಗಳು, ಬಟ್ಟೆ, ಪ್ಲಾಸ್ಟಿಕ್‌, ಗಾಜಿನ ಚೂರುಗಳ ಸಹಿತವಾದ ವಿವಿಧ ತ್ಯಾಜ್ಯ ವಸ್ತುಗಳು, ಕೊಳೆತ ತರಕಾರಿ ವಸ್ತುಗಳು, ಕಾರ್ಯಕ್ರಮಗಳಲ್ಲಿ ಉಳಿಸಿ, ಬಿಸಾಡುವ ಎಂಜಲು ಮತ್ತು ಹಳಸಿದ ಅನ್ನ ಪದಾರ್ಥಗಳು ಹೀಗೆ ನೂರಾರು ಬಗೆಯ ತ್ಯಾಜ್ಯ ವಸ್ತುಗಳು ಎರಡೂ ಸೇತುವೆಗಳ ತಳಭಾಗದಲ್ಲಿ ತುಂಬಿ ಹೋಗಿದ್ದು ಸುತ್ತಲೂ ಕೆಟ್ಟ ದುರ್ನಾತ ಬೀರುತ್ತಿದೆ.

ಎಚ್ಚರಿಕೆ ಫಲಕಕ್ಕೆ ಕೇರೇ ಇಲ್ಲ
ಮಲ್ಲಾರು ಕೊಂಬಗುಡ್ಡೆ ಸೇತುವೆ ಮತ್ತು ಕೋಟೆ ರೋಡ್‌ನ‌ ಸೇತುವೆಯ ತಳಭಾಗವು ಹಿಂದೆ ಗ್ರಾಮ ಪಂಚಾಯತ್‌ ಇರುವ ಕಾಲದಿಂದಲೂ ತ್ಯಾಜ್ಯ ಎಸೆಯುವ ಗುಂಡಿಂಯತೆಯೇ ಭಾಸವಾಗುತ್ತಿತ್ತು. ಇಲ್ಲಿನ ತೋಡಿನಲ್ಲಿ ನೀರು ಸರಾಗವಾಗಿ ಹರಿದು ಹೋಗುವಾಗ ವಾಸನೆ ಗೊತ್ತಾಗುತ್ತಿರಲಿಲ್ಲ. ಆದರೆ ಈಗ ನೀರು ಬತ್ತಿ ಹೋಗಿರುವುದರಿಂದ ತ್ಯಾಜ್ಯದ ವಾಸನೆ ಘಮ್ಮೆಂದು ಹಬ್ಬುತ್ತಿದೆ. ಎರಡೂ ಕಡೆಗಳಲ್ಲಿ ಕಾಪು ಪುರಸಭೆ ಎಚ್ಚರಿಕೆ ಫಲಕ ಹಾಕಿದೆಯಾದರೂ ಜನರು ಮಾತ್ರಾ ಅದಕ್ಕೆ ಡೋಂಡ್‌ ಕೇರ್‌ ಎಂದು ಹೇಳುತ್ತಿದ್ದಾರೆ.

ಮನವಿ ಮಾಡಲಾಗಿದೆ
ಮಲ್ಲಾರು ಕೋಟೆ ರೋಡ್‌ ಸೇತುವೆಯ ತಳಭಾಗದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಬಗ್ಗೆ ಪುರಸಭೆಗೆ ಹಲವು ಬಾರಿ ದೂರು ನೀಡಲಾಗಿದೆ. ಸೇತುವೆ ತಳಭಾಗದಲ್ಲಿ ಶೇಖರಣೆಯಾಗುವ ತ್ಯಾಜ್ಯ ಅಲ್ಲೇ ಕೊಳೆತು ದುರ್ನಾತ ಬೀರುತ್ತಿದ್ದು, ಜನರು ಜನಪ್ರತಿನಿಧಿಗಳಾದ ನಮ್ಮನ್ನು ದೂರುವಂತಾಗಿದೆ. ಇಲ್ಲಿನ ತ್ಯಾಜ್ಯವನ್ನು ಶುಚಿಗೊಳಿಸಿ, ತೋಡಿನ ಹೂಳೆತ್ತಿದರೆ ಹೇರಳ ಜಲ ಸಂಪನ್ಮೂಲ ದೊರಕುವ ಸಾಧ್ಯತೆಯಿದೆ. ಆ ಮೂಲಕ ಸರಾಗವಾಗಿ ನೀರು ಹರಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆಯೂ ವಿಶೇಷ ಅನುದಾನ ಮೀಸಲಿಟ್ಟು ಹೂಳೆತ್ತುವಿಕೆ ನಡೆಸಲು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಲಾಗಿದೆ.
– ವಿಜಯಲಕೀÒ ¾ಜಿ. ಕೋಟ್ಯಾನ್‌
16ನೇ ಜನಾರ್ದನ ದೇವಸ್ಥಾನ ವಾರ್ಡ್‌ನ ಸದಸ್ಯೆ

ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ
ಮಲ್ಲಾರು ಗ್ರಾಮದ ಕೊಂಬಗುಡ್ಡೆ ಸೇತುವೆ ಮತ್ತು ಕೋಟೆರೋಡ್‌ನ‌ ಸೇತುವೆ ತಳಭಾಗದಲ್ಲಿ ತ್ಯಾಜ್ಯದ ರಾಶಿ ಬೆಳೆದಿರುವ ಬಗ್ಗೆ ದೂರು ಬಂದಿದೆ. ತ್ಯಾಜ್ಯ ವಿಲೇವಾರಿಗೆ ಶೀಘ್ರ ಕ್ರಮ ತಗೆದುಕೊಳ್ಳುತ್ತೇವೆ. ಈಗಾಗಲೇ ಆ ಪ್ರದೇಶಗಳಲ್ಲಿ ಎಚ್ಚರಿಕೆ ಫಲಗಳನ್ನು ಹಾಕಲಾಗಿದ್ದು, ಮುಂದೆ ಸಿಸಿ ಕ್ಯಾಮರಾ ಅಳವಡಿಸಿ ತ್ಯಾಜ್ಯ ತಂದು ಸುರಿಯುವವರನ್ನು ಪತ್ತೆ ಹಚ್ಚಿ, ಹಾಕುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.
– ರಾಯಪ್ಪ ಮುಖ್ಯಾಧಿಕಾರಿ, ಕಾಪು ಪುರಸಭೆ

ಟಾಪ್ ನ್ಯೂಸ್

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

‘Please sell the RCB team to someone else’; Tennis star appeal

IPL 2024; ‘ದಯವಿಟ್ಟು ಆರ್ ಸಿಬಿ ತಂಡವನ್ನು ಬೇರೆಯವರಿಗೆ ಮಾರಿ ಬಿಡಿ’; ಟೆನ್ನಿಸ್ ತಾರೆ ಮನವಿ

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

Lok Sabha Elections ಈಶ್ವರಪ್ಪ ಸ್ಪರ್ಧೆಯಿಂದ ಬಿಜೆಪಿಗೆ ಲಾಭ: ಆರ್‌. ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

ಕಾಲರಾ ರೋಗ ತಡೆಗೆ ಸಕಲ ಮುನ್ನೆಚ್ಚರಿಕೆ; ತೆರೆದ ಸ್ಥಿತಿಯಲ್ಲಿ ಆಹಾರೋತ್ಪನ್ನ ಮಾರಾಟ ಅಪಾಯಕಾರಿ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

Former Prime Minister ಇಂದಿರಾ ಗಾಂಧಿಗೆ ಪುನರ್‌ಜನ್ಮ ನೀಡಿ, ಪ್ರಧಾನಿಯಾಗಿಸಿದ ಕ್ಷೇತ್ರ

ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Udupi; ಶ್ರೀಕೃಷ್ಣನಿಗೆ ಪಾರ್ಥಸಾರಥಿ ಸುವರ್ಣ ರಥ: ಪುತ್ತಿಗೆ ಶ್ರೀ ಸಂಕಲ್ಪ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Manipal ಮಾಹೆ ವಿ.ವಿ.ಗೆ ಕ್ವಾಕ್ವರೆಲಿ ಸಿಮಾಂಡ್ಸ್‌ ಶ್ರೇಯಾಂಕ ಗರಿ

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

Udupi-Chikmagalur Constituency; ಈವರೆಗಿನ ಅಭ್ಯರ್ಥಿ, ಸಂಸದರು ಕರಾವಳಿಗರೇ ಆಗಿದ್ದರು!

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

Salman Khan: ನಟ ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

RCBsvSRH; ಚಿನ್ನಸ್ವಾಮಿಯಲ್ಲಿ ರೆಕಾರ್ಡ್ಸ್ ಸುರಿಮಳೆ; ದಾಖಲೆಗಳ ವಿವರ ಇಲ್ಲಿದೆ

Bus Falls From Bridge In Odisha’s Jajpur

Jajpur; ಸೇತುವೆಯಿಂದ ಬಿದ್ದ ಬಸ್; ಐವರು ಸಾವು, ಹಲವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.