ಮಲ್ಪೆ ಬೀಚ್‌ ಉತ್ಸವಕ್ಕೆ ಜನಸಾಗರ; ಮನೋರಂಜನೆ, ಸಾಹಸ ಕ್ರೀಡೆಗಳ ಆಕರ್ಷಣೆ‌

ವಿವಿಧ ಸ್ಪರ್ಧೆಗಳು, ಗಾಳಿಪಟ ಹಾರಾಟ, ಶ್ವಾನಪ್ರದರ್ಶನದ ಮೆರುಗು

Team Udayavani, Feb 2, 2020, 7:52 PM IST

0202MLE2A

ಮಲ್ಪೆ: ಇಲ್ಲಿನ ನೀಲ ಕಡಲ ತೀರದ ಮರಳಿನಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ವಿವಿಧ ಪಂದ್ಯಾಟಗಳು, ಶ್ವಾನ ಪ್ರದರ್ಶನ, ಗಾಳಿಪಟ ಹಾರಾಟ, ಘಮ ಘಮಿಸುತ್ತಿದ್ದ ಆಹಾರ ಮಳಿಗೆಗಳು. ಇವುಗಳೆಲ್ಲವುದರ ಮಧ್ಯೆ ಉತ್ಸಾಹಕ್ಕೆ ಮಿತಿಯೇ ಇಲ್ಲದಂತೆ ಓಡಾಡುವ ದೊಡ್ಡ ಸಂಖ್ಯೆಯ ಜನರು. ಇದೆಲ್ಲ ಕಂಡದ್ದು ರವಿವಾರ ನಡೆದ ಬೀಚ್‌ ಉತ್ಸವದಲ್ಲಿ.

ಜಿಲ್ಲಾಡಳಿತ, ಮಲ್ಪೆ ಅಭಿವೃದ್ಧಿ ಸಮಿತಿ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಕ್ರೀಡಾ ಇಲಾಖೆ, ನಿರ್ಮಿತಿ ಕೇಂದ್ರ, ಪಶುಪಾಲನ ಇಲಾಖೆ, ಕರಾವಳಿ ಪ್ರವಾಸೋದ್ಯಮ ಸಂಘಟನೆ ಹಾಗೂ ಸ್ಥಳೀಯ ಭಜನ ಮಂದಿರಗಳ ಸಹಯೋಗದೊಂದಿಗೆ ಈ ಉತ್ಸವ ನಡೆದಿದ್ದು ಗರಿಷ್ಠ ಸಂಖ್ಯೆಯ ಜನರನ್ನು ಆಕರ್ಷಿಸಿದೆ. ರಜಾ ದಿನವಾದ್ದರಿಂದ ಕುಟುಂಬ ಸಮೇತರಾಗಿ ಜನ ಆಗಮಿಸಿದ್ದರು.

ಕೆಲವರು ಗಾಳಿ ಪಟ ಹಾರಾಟ ನಡೆಸಿ ಸಂಭ್ರಮ ಪಟ್ಟರೆ, ಕಲಾವಿದರು ಮರಳು ಶಿಲ್ಪ ಬಿಡಿಸಿ ಜನಮನ ಗೆದ್ದರು. ಹಿರಿಯರು-ಕಿರಿಯರು ಕರಾವಳಿಯ ಮೀನು ಖಾದ್ಯ, ವಿಶೇಷ ತಿಂಡಿ ತಿನಸು, ವೈನ್‌ ರುಚಿ ಸವಿದರು.

ಕಡಲ ತೀರದಲ್ಲಿ ಒಂಟೆ ಸವಾರಿ, ದೋಣಿ ವಿಹಾರಗಳ ಮೋಜು ಅನುಭವಿಸಿದರು. ಮಕ್ಕಳು ಹಿರಿಯರು ಕೈಯಲ್ಲಿ ಗಾಳಿಪಟ ಹಿಡಿದು ಬರುತ್ತಿದ್ದು, ಹಿರಿಯರು ಮಕ್ಕಳಿಗೆ ಗಾಳಿಪಟ ಬಿಡಲು ಉತೇ¤ಜಿಸುತ್ತಿದ್ದರು. ಸಮುದ್ರದಲ್ಲಿ ಬೋಟಿಂಗ್‌, ಜೆಸ್ಕಿಯಲ್ಲಿ ಕುಳಿತು ಯುವಕರು ಸಾಹಸ ಪ್ರದರ್ಶಿಸುತ್ತಿದ್ದರು.

ವೈವಿಧ್ಯ ಖಾದ್ಯಗಳು
ಬೀಚ್‌ನಲ್ಲಿ ವಿವಿಧ ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು. ಚಿಕನ್‌ ಬಿರಿಯಾನಿ, ಚಿಕನ್‌ ಫ್ರೈಡ್‌ರೈಸ್‌, ಎಗ್‌ ಫ್ರೈಡ್‌ರೈಸ್‌, ವಡಪಾವ್‌, ಚಿಲ್ಲಿ ಪಕೋಡ, ಗೋಬಿ ನೂಡಲ್ಸ್‌ ಹೀಗೆ ಬಗೆ ಬಗೆಯ ಖಾದ್ಯಗಳಿದ್ದವು. ಮೀನು ಪ್ರಿಯರಿಗಾಗಿಯೇ ಇದ್ದ ಖಾದ್ಯಗಳಿಗೂ ಜನ ಮುಗಿ ಬುದ್ದರು. ಮೀನಿನ ಮಸಾಲೆ, ಗುಡಿಕೈಗಾರಿಕೆ, ದೇಶಿಯ ತಂಪು ಪಾನೀಯಗಳ ಸ್ಟಾಲ್‌ಗ‌ಳಿಗೂ ಉತ್ತಮ ಸ್ಪಂದನೆ ಇತ್ತು.ಶನಿವಾರದಂದು ಅವಿಭಜಿತ ಪುರು ಷರ ಹೊನಲು ಬೆಳಕಿನ ಪ್ರೊ. ಕಬಡ್ಡಿ ಪಂದ್ಯಾವಳಿ ರೋಮಾಂಚಕಾರಿಯಾಗಿ ನಡೆದಿತ್ತು. ರವಿವಾರ ಬೆಳಗ್ಗೆ ಪುರುಷರಿಗಾಗಿ ವಾಲಿಬಾಲ್‌, ಮಹಿಳೆಯರಿಗೆ ತ್ರೋಬಾಲ್‌ ಪಂದ್ಯಾಟಗಳು ಜರಗಿತು. ಶಾಲಾ ಕಾಲೇಜು ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಸುಮಾರು 200ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ದಿನಗಳುಹೆಚ್ಚಳವಾಗಲಿ
ಬೀಚ್‌ ಉತ್ಸವಗಳು ಕೇವಲ ಒಂದೆರಡು ದಿನದಲ್ಲಿ ಮುಗಿದು ಹೋಗಬಾರದು. ಕನಿಷ್ಠ ಒಂದು ವಾರವಾದರೂ ಇರಬೇಕು. ಆಕರ್ಷಕ ಗಾಳಿಪಟ ಪ್ರದರ್ಶನ, ಶ್ವಾನ ಪ್ರದರ್ಶನ ತುಂಬ ಖುಷಿ ಕೊಟಿತು. ಇನ್ನಷ್ಟು ಸ್ಪರ್ಧೆಗಳು ಇದ್ದರೆ ಚೆನ್ನಾಗಿತ್ತು.
-ಶ್ವೇತಾ ಶೆಟ್ಟಿ, ಕಾಲೇಜು ವಿದ್ಯಾರ್ಥಿ

ಚಿತ್ತಾಕರ್ಷಕ ಕಲಾಕೃತಿಗಳು
ಜಿಲ್ಲೆಯ ಪ್ರವಾಸಿ ತಾಣ, ಸ್ವತ್ಛ ಭಾರತ್‌ ಮತ್ತು ಕರಾವಳಿಯ ಸಂಸ್ಕೃತಿ ಬಿಂಬಿಸುವ ಮರಳುಶಿಲ್ಪ ಸ್ಪರ್ಧೆಯನ್ನು ನಡೆಸಲಾಗಿದ್ದು ಸುಮಾರು 15ತಂಡಗಳು ಭಾಗವಹಿಸಿದ್ದವು. ಒಂದನ್ನೊಂದು ಮೀರಿಸುವಂತೆ ಕಲಾಕೃತಿಗಳು ಮೂಡಿಬಂದಿದ್ದವು. ಬಾನೆತ್ತರದಲ್ಲಿ ಬಣ್ಣ ಬಣ್ಣದ ಗಾಳಿಪಟಗಳು ಗಿರಕಿ ಹೊಡೆಯುತ್ತಿದ್ದವು.

ಮನಸೆಳೆದ ಶ್ವಾನ ಪ್ರದರ್ಶನ
ಇತ್ತ ಶ್ವಾನ ಸಾಮ್ರಾಜ್ಯವೇ ನಿರ್ಮಾಣವಾಗಿತ್ತು. ವಿವಿಧ ಕಡೆಗಳಿಂದ ಬಂದ ಸ್ವದೇಶಿ-ವಿದೇಶಿ ಶ್ವಾನ ತಳಿಗಳು ಪ್ರೇಕ್ಷಕರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದವು. ಮಧೋಳ್‌ನಿಂದ ಹಿಡಿದು ವಿದೇಶದಿಂದ ಆಮದು ಮಾಡಿದ ನೆಪೊಲಿಯನ್‌ ಮಸ್ತಿಫ್‌ ನಾಯಿಗಳು ಗಮನ ಸೆಳೆದವು.

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Neha Case: ನೇಹಾ ಅಮಾನುಷ ಹತ್ಯೆಗೆ ಜೆ.ಪಿ.ಹೆಗ್ಡೆ ಖಂಡನೆ

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

5-karkala

Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್‌; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.