ಮಣಿಪಾಲ: ವಿಶ್ವ ಅವಧಿ ಪೂರ್ವ ಜನಿಸಿದ ಶಿಶುಗಳ ದಿನಾಚರಣೆ

Team Udayavani, Nov 21, 2019, 5:03 AM IST

ಉಡುಪಿ: ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌ ಹಾಗೂ ಕಸ್ತೂರ್ಬಾ ಮಣಿಪಾಲ ಆಸ್ಪತ್ರೆ ಮಕ್ಕಳ ವಿಭಾಗ ಜಂಟಿಯಾಗಿ ವಿಶ್ವ ಅವಧಿ ಪೂರ್ವ ಜನಿಸಿದ ಶಿಶುಗಳ ದಿನಾಚರಣೆ ನ.18 ರಂದು ಜರಗಿತು.

ನ.11ರಿಂದ 18ರ ವರೆಗೆ ನವಜಾತ ಶಿಶುವಿನ ಆರೈಕೆ ಶುಷೂÅಕರು ಹಾಗೂ ಅವಧಿ ಪೂರ್ವ ಜನಿಸಿದ ಶಿಶುಗಳ ಪೋಷಕರಿಗೆ ಉತ್ತಮ ಗುಣ ಮಟ್ಟದ, ದೈಹಿಕ ಹಾಗೂ ಮೆದುಳಿನ ಬೆಳವಣಿಗೆಗೆ ಪೂರಕವಾಗುವ ಆರೈಕೆ, ಅರಿವಳಿಕೆಯನ್ನು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಸ್ತೂರ್ಬಾ ಆಸ್ಪತ್ರೆಯ ನವಜಾತ ಶಿಶು ಘಟಕದ ಮುಖ್ಯಸ್ಥ ಡಾ| ಲೆಸ್ಲಿ ಲೂಯಿಸ್‌ ಅವರು ಜಗತ್ತಿನಾದ್ಯಂತ ಪ್ರತೀ ವರ್ಷ 15 ಮಿಲಿಯನ್‌ ಶಿಶುಗಳ ಜನನವಾಗುತ್ತಿದ್ದು ಇದರಲ್ಲಿ ಒಂದು ಮಿಲಿಯನ್‌ಗಿಂತಲೂ ಜಾಸ್ತಿ ಅವಧಿ ಪೂರ್ವ ಶಿಶುಗಳ ಜನನವಾಗುತ್ತಿದೆ. ಇದರಲ್ಲಿ ಹತ್ತನೇ ಒಂದು ಪಾಲು ಮಕ್ಕಳು ಮರಣ ಹೊಂದುವುದು ಅಥವಾ ಮೆದುಳಿನ ತೊಂದರೆ ಒಳಗಾಗುವ ಸಂಭವ ಜಾಸ್ತಿ. ಇದನ್ನು ತಡೆಗಟ್ಟಲು ಅವಧಿ ಪೂರ್ವ ಜನಿಸಿದ ಶಿಶುವಿಗೆ ಸೂಕ್ತ ಸಮಯದಲ್ಲಿ ಸರಿಯಾದ ಜಾಗದಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಗಳೊಂದಿಗೆ, ಆರೈಕೆ, ಶುಚಿತ್ವದ ಬಗ್ಗೆ ಎಲ್ಲ ನಿಯಮಗಳನ್ನು ಪಾಲಿಸಿದರೆ ಹೆಚ್ಚಿನ ಅವಧಿ ಪೂರ್ವ ಶಿಶುವಿನ ಅರೋಗ್ಯವನ್ನು ಕಾಪಾಡಬಹುದು ಎಂದರು.

ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌ ಸಹಾಯಕ ಪ್ರೊಫೆಸರ್‌ ಯಶೋದ ಸತೀಶ್‌, ಬಿನು ಮಾರ್ಗರೇಟ್‌ ಈ ಕುರಿತು ಮಾಹಿತಿ ನೀಡಿದರು. ಮಕ್ಕಳ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಕಣ್ಣಿನ ತಜ್ಞರಾದ ಡಾ| ಸುಲತಾ ಭಂಡಾರಿ ಅವಧಿ ಪೂರ್ವ ಶಿಶುವಿನ ಬೆಳವಣಿಗೆಯ ಹಂತದಲ್ಲಿ ನಿಯಮಿತ ಸಮಯದಲ್ಲಿ ಕಣ್ಣಿನ ತಪಾಸಣೆಯ ಮಹತ್ವವನ್ನು ವಿವರಿಸಿದರು. ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌ನ ಅಸೋಸಿಯೇಟ್‌ ಡೀನ್‌ ಡಾ| ಜೂಡಿತ್‌ ನೊರೊನ್ಹಾ , ಮಕ್ಕಳ ಶುಷೂÅಷ ವಿಭಾಗದ ಡಾ| ಬೇಬಿ ಎಸ್‌. ನಾಯಕ್‌, ನವಜಾತ ಶಿಶುವಿನ ಘಟಕದ ಪ್ರೊ| ಡಾ| ಜಯಶ್ರೀ, ಡಾ| ಅಪೂರ್ವಾ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ....