- Monday 09 Dec 2019
ಸ್ಥಳೀಯರಿಂದಲೇ ಕಡಲ್ಕೊರೆತ ತಡೆ ಯತ್ನ !
ಮರಳ ಚೀಲ ಪೇರಿಸಿಟ್ಟು ದೈತ್ಯ ಅಲೆಗಳಿಗೆ ಪ್ರತಿರೋಧ
Team Udayavani, Jun 24, 2019, 10:10 AM IST
ಉಪ್ಪುಂದ: ಮರವಂತೆಯಲ್ಲಿ ಕಡಲು ಕೊರೆತ ತಡೆಗೆ ಕ್ರಮ ಕೈಗೊಳ್ಳುವಂತೆ ಮಾಡಿರುವ ಮನವಿಗಳಿಗೆ ಸರಕಾರ, ಇಲಾಖೆಗಳು ಕಿವಿಗೊಡದ್ದ ರಿಂದ ರೋಸಿಹೋಗಿರುವ ಸ್ಥಳೀಯ ಮೀನುಗಾರರು ಸ್ವತಃ ಮರಳು ತುಂಬಿದ ಚೀಲಗಳನ್ನು ಪೇರಿಸಿಟ್ಟು ಅಲೆಗಳನ್ನು ತಡೆಯುವ ಸಾಹಸಕ್ಕೆ ಕೈಹಾಕಿದ್ದಾರೆ.
ಬಹಳಷ್ಟು ನಿರೀಕ್ಷೆ ಮೂಡಿಸಿದ್ದ ಕೇರಳ ಮಾದರಿಯ ಔಟ್ ಡೋರ್ ಬಂದರು ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ನಡುವೆ ಉತ್ತರ ಮತ್ತು ದಕ್ಷಿಣದ ತಡೆಗೋಡೆಯ ಮಧ್ಯ ಭಾಗದಲ್ಲಿ ಗಾಳಿಯ ಒತ್ತಡ ಅಧಿಕಗೊಂಡು ಕಡಲಿನ ಆರ್ಭಟ ಹೆಚ್ಚುತ್ತಿದೆ. ಕಳೆದ ಮಳೆಗಾಲದಿಂದೀಚೆಗೆ ಬುದ್ಧಿವಂತರ ಮನೆ ಮಂಜುನಾಥ, ಬಬ್ಬರ್ಯ ಕೋಡಿ ಮನೆ ರಾಮಚಂದ್ರ, ದೇವಿ, ಸುಬ್ರಹ್ಮಣ್ಯ, ಅಣ್ಣಪ್ಪ, ಸುಕ್ರ ಅವರ ಮನೆಯ ಅಂಗಳಕ್ಕೆ ನೀರು ನುಗ್ಗುತ್ತಿದೆ. ಸರಕಾರವನ್ನು ನಂಬಿ ಕೂತರೆ ಈ ಮಳೆಗಾಲದಲ್ಲಿ ಆಸ್ತಿಪಾಸ್ತಿ ಉಳಿಸಿಕೊಳ್ಳಲು ಸಾಧ್ಯವಾಗದು ಎಂದು ನಿರ್ಧರಿಸಿ ತಾವೇ ಕ್ರಮಕ್ಕೆ ಮುಂದಾಗಿದ್ದಾರೆ. 10 ಲಕ್ಷ ರೂ. ವೆಚ್ಚದಲ್ಲಿ 100ರಿಂದ 500 ಕಿಲೋ ಸಾಮರ್ಥ್ಯದ 1 ಸಾವಿರ ದೊಡ್ಡ ಚೀಲ ಗಳಲ್ಲಿ ಮರಳು ತುಂಬಿ 120 ಮೀ. ದೂರದ ವರೆಗೆ ಇರಿಸಿ ಅಲೆಗಳು ಅಂಗಳಕ್ಕೇರದಂತೆ ತಡೆಯಲು ಯತ್ನಿಸಿದ್ದಾರೆ.
ಭರವಸೆಯಲ್ಲೇ ಉಳಿದ ಜಾಗ
ಕಳೆದ ಬಾರಿ ಅಲೆಗಳ ಹೊಡೆತಕ್ಕೆ ಮೀನುಗಾರರ 6 ಮನೆಗಳು ಸಂಪೂರ್ಣ ಜಖಂಗೊಂಡಿದ್ದವು. ಸ್ಥಳಕ್ಕಾಗಮಿಸಿದ್ದ ಮೀನುಗಾರಿಕೆ ಸಚಿವ ವೆಂಕಟರಾವ್
ನಾಡ ಗೌಡ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಸಂತ್ರಸ್ತ ರಿಗೆ ಪರ್ಯಾಯ ಜಾಗ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಮರವಂತೆಯ ಗಾಂಧಿನಗರದ ಸರ್ವೆ ನಂಬ್ರ 57ಎಯಲ್ಲಿ ಪಂಚಾಯತ್ ಜಾಗ ಇದ್ದು, ಅದನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿತ್ತು. ಆದರೆ ಕಾರ್ಯಗತಗೊಂಡಿಲ್ಲ.
ಮರಳು ಚೀಲದ ತಡೆಗೋಡೆ
ಇಲ್ಲಿ ಸುಮಾರು 400 ಮೀ. ಉದ್ದಕ್ಕೆ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಅಲೆಗಳ ಹೊಡೆತಕ್ಕೆ ಕಲ್ಲುಗಳು ಕಡಲಾಳ ಸೇರುತ್ತಿವೆ. ಬೇಸಗೆಯಲ್ಲೂ ಕಂಡು ಬಂದಿದ್ದ ಕೊರೆತ ಈಗ ತೀವ್ರ ಸ್ವರೂಪದಲ್ಲಿದ್ದು, ತೀರ ಪ್ರದೇಶದ ರಸ್ತೆ, ಮನೆ, ತೆಂಗಿನ ಮರಗಳು, ಮೀನುಗಾರಿಕೆ ಶೆಡ್‌ಗಳು ಅಪಾಯದಲ್ಲಿವೆ.
ಶಾಶ್ವತ ಯೋಜನೆಗಿಲ್ಲ ಅನುದಾನ
ತಡೆಗೋಡೆ ಅವೈಜ್ಞಾನಿಕವಾಗಿರುವುದರಿಂದ ಒಳ ಭಾಗದಿಂದ ಮರಳು ಕೊಚ್ಚಿ ಹೋಗುತ್ತಿದೆ. ತಡೆಗೋಡೆ ನೆಲಮಟ್ಟದಿಂದ 2 ಅಡಿ ಕೆಳಗಡೆ ಇರುವುದರಿಂದ ಅಲೆಗಳು ಮೇಲೇರಿ ಬರುತ್ತಿವೆ. 2 ಮೀ. ಎತ್ತರದ ಗೋಡೆ ನಿರ್ಮಿಸುವ ಚಿಂತನೆ ಇದೆ. ಮೀನುಗಾರಿಕೆ ಸ. ಎಂಜಿನಿ ಯರ್ 50 ಲಕ್ಷ ರೂ. ವೆಚ್ಚದ ಯೋಜನೆ ರೂಪಿಸಿದ್ದು, ಕೂಡಲೇ ಕಾರ್ಯಗತಗೊಳಿಸುವಂತೆ ಮೀನುಗಾರರು ಮನವಿ ಮಾಡುತ್ತಿದ್ದಾರೆ. ಆದರೆ ಇಲಾಖಾಧಿಕಾರಿಗಳು ಅನುದಾನ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.
ಹಣ ಬಿಡುಗಡೆ ಮಾಡಿ
ಅಪಾಯದಲ್ಲಿರುವ ಮೀನು ಗಾರರಿಗೆ ಪರ್ಯಾಯ ನಿವೇಶನ ನೀಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ಜಾಗ ಮಂಜೂರಾಗಿಲ್ಲ. ಹೊರ ಬಂದರು ಕಾಮಗಾರಿಯನ್ನು ಶೀಘ್ರ ಪೂರ್ಣ ಗೊಳಿಸಬೇಕು. ಪ್ರಸ್ತುತ ಮೀನುಗಾರರು ತಮ್ಮ ಹಣದಿಂದ ಮರಳು ತುಂಬಿದ ಚೀಲಗಳನ್ನಿಟ್ಟು ತಾತ್ಕಾಲಿಕ ರಕ್ಷಣೆ ಮಾಡಿಕೊಂಡಿದ್ದಾರೆ. ಶಾಶ್ವತ ಯೋಜನೆಗೆ ಸರಕಾರ ಕೂಡಲೇ ಹಣ ಬಿಡುಗಡೆ ಮಾಡಲಿ.
– ಮೋಹನ ಖಾರ್ವಿ,ಮೀನುಗಾರರ ಮುಖಂಡ
ಕೃಷ್ಣ ಬಿಜೂರು
ಈ ವಿಭಾಗದಿಂದ ಇನ್ನಷ್ಟು
-
ಪಡುಬಿದ್ರಿ:ಇಲ್ಲಿನ ಬೀಡು ಸಮೀಪದ ಜಾಗದಲ್ಲಿ ವಾಸಿಸುತ್ತಿದ್ದು ಅಲ್ಲಿಂದ ಸುಜ್ಲಾನ್ ಪುನರ್ವಸತಿ ಕಾಲೋನಿ ಸಮೀಪಕ್ಕೆ ಸ್ಥಳಾಂತರಗೊಂಡು ಕಳೆದ 6 ವರ್ಷಗಳಿಂದ...
-
ಅಜೆಕಾರು: ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುದ ಕಟ್ಟೆಯಿಂದ ಕಾನಂಗಿ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ಅಭಿವೃದ್ಧಿಗೆ...
-
ಕುಂದಾಪುರ: ಪುರಸಭೆ ವ್ಯಾಪ್ತಿಯಲ್ಲಿ 42 ಕೋ.ರೂ.ಗಳಲ್ಲಿ ಆರಂಭಿಸಿದ ಒಳಚರಂಡಿ ಯೋಜನೆ ಕಾಮಗಾರಿ ಸ್ಥಗಿತವಾಗಿದೆ. ಚರಂಡಿ ನೀರು ಹರಿಸಿ ಶುಚಿ ಮಾಡಲು ಬಾವಿಗಳಿಲ್ಲದ...
-
ಗಂಗೊಳ್ಳಿ: ಇಲ್ಲಿನ ಬೀಚ್ ಬಳಿ ಚರ್ಚ್ ರಸ್ತೆಗೆ ತಾಗಿಕೊಂಡಿರುವ ಮಡಿವಾಳರ ಕೆರೆ, ಗಂಗೊಳ್ಳಿಯ ಕಡಲ ಕಿನಾರೆಗಳು, ಸೇರಿದಂತೆ ರಸ್ತೆ ಬದಿಯ ಚರಂಡಿಗಳೆಲ್ಲ ಕಸ...
-
ವಿಶೇಷ ವರದಿ-ಉಡುಪಿ: ಅಸಮರ್ಪಕ ಚರಂಡಿ, ಹದಗೆಟ್ಟ ರಸ್ತೆ, ಅಲ್ಲಲ್ಲಿ ಕಾರಂಜಿಯಂತೆ ಉಕ್ಕಿ ಹರಿಯುತ್ತಿರುವ ಕೊಳಚೆ ನೀರಿನ ಮ್ಯಾನ್ಗಳು, ಕಿ.ಮೀ. ಒಂದರಂತೆ ಅಗೆದ ರಸ್ತೆ,...
ಹೊಸ ಸೇರ್ಪಡೆ
-
ಗಜೇಂದ್ರಗಡ: ಕಿತ್ತು ಹೋದ ಡಾಂಬರ, ಅರ್ಧಂಬರ್ಧ ಜೋಡಿಸಿರುವ ಇಂಟರಲಾಕ್, ಅರ್ಧಕ್ಕೆ ನಿಂತ ಮುಖ್ಯ ರಸ್ತೆಯ ಕಾಮಗಾರಿಯಿಂದ ಗಜೇಂದ್ರಗಡ ಅಭಿವೃದ್ಧಿಗೆ ಮಂಕು ಕವಿದಿದೆ....
-
ಹೆಲ್ಸಿಂಕಿ: ಫಿನ್ ಲ್ಯಾಂಡ್ ನ ಸೋಶಿಯಲ್ ಡೆಮೋಕ್ರಟ್ಸ್ 34 ವರ್ಷದ ಮಾಜಿ ಸಾರಿಗೆ ಸಚಿವೆಯನ್ನು ದೇಶದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದು, ದೇಶದ ಇತಿಹಾಸದಲ್ಲಿಯೇ...
-
ಕೇಪ್ ಟೌನ್: ಆತ ನನ್ನ ತಂಗಿಯ ಜೊತೆಗೆ ಮಲಗಿದ್ದ, ಅದಕ್ಕಾಗಿಯೇ ತಂಡದಿಂದ ಕೈಬಿಟ್ಟೆ ಎಂದು ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಹೇಳಿದ್ದಾರೆ. ಅಷ್ಟಕ್ಕೂ ಅವರು...
-
ನಾಗರಾಜ ತೇಲ್ಕರ್ ದೇವದುರ್ಗ: ಪಟ್ಟಣದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ 250 ಮನೆಗಳಿಗೆ ಮರಳಿನ ಕೊರತೆ, ಜಾಗದ ಸಮಸ್ಯೆ, ಗುತ್ತಿಗೆದಾರರಿಗೆ...
-
ಹುಬ್ಬಳ್ಳಿ: ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಪಪ್ರಚಾರ ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರದ ಜನರು ತಕ್ಕ ಉತ್ತರ ನೀಡಿದ್ದಾರೆ....