ಮರವಂತೆ: ಕಡಲ್ಕೊರೆತ ಅಪಾಯದಲ್ಲಿ ತೀರ ಪ್ರದೇಶ

Team Udayavani, Jun 17, 2019, 6:00 AM IST

ಉಪ್ಪುಂದ: ಮರವಂತೆಯ ಹೊರ ಬಂದರು ಪ್ರದೇಶದ ತೀರದಲ್ಲಿ ಕಡಲಬ್ಬರ ತೀವ್ರಗೊಂಡಿದ್ದು ಕಡಲ್ಕೊರೆತ ಉಂಟಾಗಿದೆ.

ಸಮುದ್ರ ತೀರದ ರಸ್ತೆ, ತೆಂಗಿನ ಮರಗಳು ಸೇರಿದಂತೆ ಮನೆಗಳು ಅಪಾಯ ಎದುರಿಸುತ್ತಿವೆ. ಅಲೆಗಳ ಅಬ್ಬರಕ್ಕೆ ನೀರು ಮನೆಯ ಅಂಗಳಕ್ಕೆ ಬರುತ್ತಿದೆೆ.

ಮಳೆಗಾಲದ ಆರಂಭದಲ್ಲಿಯೇ ಕಡಲ್ಕೊರೆತ ಪ್ರಾರಂಭವಾಗಿದೆ. ಬೃಹತ್‌ ಗಾತ್ರದ ಅಲೆಗಳು ತಡೆಗೋಡೆಯ ಕಲ್ಲುಗಳಿಗೆ ಬಡಿದು ರಸ್ತೆಗೆ ಬಂದು ಅಪ್ಪಳಿಸುತ್ತಿವೆ. ತೀರ ಪ್ರದೇಶದ ರಕ್ಷಣೆಗೆ ಹಾಕಲಾಗಿರುವ ಕಲ್ಲುಗಳು ಸಮುದ್ರ ಸೇರುತ್ತಿವೆ. ಮಳೆ ಹಾಗೂ ಗಾಳಿಯ ಅಬ್ಬರ ಹೆಚ್ಚಾದಂತೆ ಕಡಲಿನ ಅಬ್ಬರವೂ ಹೆಚ್ಚಾಗುತ್ತದೆ.

ಕಾಮಗಾರಿ ಪೂರ್ಣಗೊಳಿಸಿ
ಬೇಸಗೆಯಲ್ಲಿ ಕಡಲ್ಕೊರೆತ ಉಂಟಾಗಿ ಅಪಾಯ ಎದುರಾಗಿತ್ತು. ಇದೀಗ ಮಳೆ ಬಿರುಸುಗೊಂಡಾಗಲೇ ಕಡಲಿನ ಆರ್ಭಟವೂ ಜೋರಾಗಿದೆ. ಇದಕ್ಕೆ ಕಾರಣ ನಿರ್ಮಾಣ ಹಂತದಲ್ಲಿರುವ ಹೊರ ಬಂದರಿನ ಅಪೂರ್ಣ ಕಾಮಗಾರಿಯೇ ಎನ್ನುತ್ತಾರೆ ಸ್ಥಳೀಯರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳು ವಂತೆ ಕ್ರಮ ಕೈಗೊಳ್ಳ ಬೇಕು. ಈಗ ನಿರ್ಮಿಸಿರುವ ತಡೆಗೋಡೆಯ ಎತ್ತರವನ್ನು ಇನ್ನಷ್ಟು ಹೆಚ್ಚಿಸ ಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ