ಕೇಂದ್ರ ಸಚಿವ ಸದಾನಂದ ಗೌಡರಿಂದ ಸಾಹಿತಿ, ಚಿಂತಕ, ಸಾಧಕರ ಭೇಟಿ

Team Udayavani, Sep 22, 2019, 5:35 AM IST

ಉಡುಪಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಅವರು ಶನಿವಾರ ಜಿಲ್ಲೆಯ ಸಾಹಿತಿ, ಸಾಂಸ್ಕೃತಿಕ ಚಿಂತಕರು ಹಾಗೂ ಸಾಧಕರನ್ನು ಭೇಟಿ ಮಾಡಿ ಕೇಂದ್ರ ಸರಕಾರದ ಪರವಾಗಿ ಅವರನ್ನು ಸಮ್ಮಾನಿಸಿದರು.

ಕೇಂದ್ರ ಸರಕಾರ ಮುಂದೆ ಅನುಸರಿಸ ಬೇಕಾದ ಮಾರ್ಗಸೂಚಿಗಳ ಬಗ್ಗೆ ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿ. ಎಂಡಿ ಟಿ.ಗೌತಮ್‌ ಪೈ, ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ, ಸಾಹಿತಿ ಉದ್ಯಾವರ ಮಾಧವಾಚಾರ್ಯ, ಜಾದೂಗಾರ ಪ್ರೊ| ಶಂಕರ್‌, ಸಮಾಜಸೇವಕ ಹರಿಯಪ್ಪ ಕೋಟ್ಯಾನ್‌, ಸೂಪರ್‌ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಾದ ಪ್ರಸಾದ್‌ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿ
ನರೇಂದ್ರ ಮೋದಿ ಅವರು ಮುಂದಿನ ಹತ್ತು ವರ್ಷ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಬೇಕು. ಕಾಶ್ಮೀರದ 379ನೇ ವಿಧಿ ರದ್ದತಿ ಸರಕಾರದ ಮಹತ್ವದ ಸಾಧನೆ. ಇತರರಿಂದ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ದೇಶದ ಅಭಿವೃದ್ಧಿ ಬಗ್ಗೆ ದೂರದೃಷ್ಟಿ ಇರುವವರಿಗೆ ಸಲಹೆ ಕೋಡಬೇಕಾದ ಆವಶ್ಯಕತೆಯಿಲ್ಲ. ರಾಜ್ಯದ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಉತ್ತಮ ಪರಿಹಾರ ನೀಡಬೇಕು ಎಂದು ಗೋವಿಂದಾಚಾರ್ಯ ತಿಳಿಸಿದರು.

ಶಂಕರ್‌, ಹರಿಯಪ್ಪ ಕೋಟ್ಯಾನ್‌, ಡಾ| ಕೃಷ್ಣಪ್ರಸಾದ್‌ ಅವರು ಕೇಂದ್ರ ಸರಕಾರ ತೆಗೆದುಕೊಳ್ಳಬೇಕಾದ ಜನಪರ ಕಾರ್ಯಕ್ರಮಗಳ ಬಗ್ಗೆ ಮನವಿ ಮಾಡಿದರು.

ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ, ಪ್ರ. ಕಾರ್ಯದರ್ಶಿ ಪ್ರವೀಣ್‌ ಕಪ್ಪೆಟ್ಟು, ಮುಖಂಡರಾದ ಸಂಧ್ಯಾ ರಮೇಶ್‌, ಪ್ರಭಾಕರ ಪೂಜಾರಿ, ರವಿ ಅಮೀನ್‌, ಉದಯ್‌ ಕುಮಾರ್‌ ಶೆಟ್ಟಿ , ಸಾಣೂರು ನರಸಿಂಹ ಕಾಮತ್‌, ಪೂರ್ಣಿಮಾ ನಾಯಕ್‌, ವಾಸುದೇವ ಭಟ್‌ ಪೆರಂಪಳ್ಳಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಜ್ಯಗಳನ್ನು ಕಡೆಗಣಿಸದಿರಿ
ಉತ್ತಮ ಸಾಧನೆಗಳ ಉತ್ಸಾಹದಲ್ಲಿರುವ ಮೋದಿ, ರಾಜ್ಯಗಳಿಗೆ ಪರಿಹಾರವನ್ನು ನೀಡುವುದನ್ನು ಕಡೆಗಣಿಸಬಾರದು. ಜಮ್ಮು-ಕಾಶ್ಮೀರ ಪರಿಸ್ಥಿತಿಯಿಂದ ಬೇಸತ್ತು ವಿವಿಧ ಪ್ರದೇಶಗಳಿಗೆ ತೆರಳಿ ನೆಲೆ ಕಂಡುಕೊಂಡ ಮೂಲ ನಿವಾಸಿಗಳಿಗೆ ಮತ್ತೆ ಅಲ್ಲಿಯೇ ಜೀವನ ಕಟ್ಟಿಕೊಳ್ಳಲು ಮೊದಲ ಆದ್ಯತೆ ನೀಡಬೇಕು ಎಂದು ಉದ್ಯಾವರ ಮಾಧವಾಚಾರ್ಯ ಮನವಿ ಮಾಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ