ನೀವು ಕೆಲಸ ಮಾಡೋಕೆ ಅನ್ ಫಿಟ್: ಜಲಜೀವನ್ ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಸುನಿಲ್ ಕುಮಾರ್
Team Udayavani, Jan 29, 2022, 3:35 PM IST
ಕಾರ್ಕಳ: ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಕೆಡಿಪಿ ಸಭೆಯಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವ ಸುನಿಲ್ ಕುಮಾರ್ ಜಲಜೀವನ್ ವಿಭಾಗದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರ ನಡೆದಿದೆ.
ಜಲಜೀವನ್ ಗೆ ಸಂಬಂಧಿಸಿ ಸಚಿವರು ಆ ಇಲಾಖೆಯ ಅಧಿಕಾರಿಯಿಂದ ಮಾಹಿತಿ ಬಯಸಿದ್ದರು. ಇದೇ ವೇಳೆ ಅಧಿಕಾರಿ ನೀಡಿದ ಉತ್ತರದಲ್ಲಿ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇದಕ್ಕೆ ಗರಂ ಆದ ಸಚಿವರು ನನಗೆ ಪ್ರಾಕ್ಟಿಕಲ್ ಏನಾಗಿದೆ ಅದು ಬೇಕು. ಕಾಲಹರಣಕ್ಕೆ ಸಭೆಗೆ ಬರಬೇಡಿ. ಸಭೆಗೆ ಬರುವಾಗ ವಾಸ್ತವಾಂಶ ವರದಿ ತನ್ನಿ.ಪೂರ್ಣ ಮಾಹಿತಿ ನನಗೆ ಬೇಕು. ಯಾಕೆ ತಪ್ಪು ರಿಪೋರ್ಟ್ ನೀಡುತ್ತೀರಿ ಎಂದು ಗರಂ ಆದರು.
ಸಭೆ ಅಂತ್ಯದಲ್ಲಿ ಜನಸಾಮಾನ್ಯರಿಗೆ ಸರಕಾರದ ಯೋಜನೆಗಳು ಹೇಗೆ ತಲುಪಿಸಬೇಕು..ಎಲ್ಲ ಬಡವರ ಮನೆಗೆ ಸರಕಾರಿ ಸವಲತ್ತು ತಲುಪುವ ಕುರಿತು ಸುದೀರ್ಘ ಪಾಠ ಮಾಡಿ ಆಡಳಿತ ಅಧಿಕಾರಿಗಳನ್ನು ಚುರುಕು ಮುಟ್ಟಿಸಿದರು.