ಸಾಫ್ಟ್‌ವೇರ್‌ ಎಂಜಿನಿಯರ್‌-ಎಂಬಿಎ ಪದವೀಧರೆ ದಂಪತಿಯ ಮಾದರಿ ಕೃಷಿ !

ಹೆಗ್ಗುಂಜೆ ವಿಖ್ಯಾತ್‌ಕುಮಾರ್‌ ಶೆಟ್ಟಿ-ನಂದನಿಶಾ ಯುವಜನತೆಗೆ ಮಾಡೆಲ್‌

Team Udayavani, Dec 29, 2019, 7:30 AM IST

bg-12

ಹೆಸರು: ವಿಖ್ಯಾತ್‌ ಕುಮಾರ್‌ ಶೆಟ್ಟಿ, ನಂದನಿಶಾ
ಏನೇನು ಕೃಷಿ: ಅಡಿಕೆ, ತೆಂಗು, ಕಾಳುಮೆಣಸು
ಎಷ್ಟು ವರ್ಷ: 9
ಕೃಷಿ ಪ್ರದೇಶ: 10 ಎಕರೆ
ಸಂಪರ್ಕ ಸಂಖ್ಯೆ: 9964522009

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಬ್ರಹ್ಮಾವರ: ಪತಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಬೆಂಗಳೂರಿನ ಪ್ರಸಿದ್ಧ ಕಂಪೆನಿಯಲ್ಲಿ ಉದ್ಯೋಗಿ. ಪತ್ನಿ ಎಂಬಿಎ ಪದವೀಧರೆ ಹಾಗೂ ಉದ್ಯೋಗಸ್ಥೆ. ನಗರ ಜೀವನ ವ್ಯವಸ್ಥೆಯಲ್ಲಿರುವ ಇವರಿಗೆ ಹಳ್ಳಿಯಲ್ಲಿರುವ ತಂದೆ ತಾಯಂದಿರನ್ನು ನೋಡಿಕೊಳ್ಳುವ ಅನಿವಾರ್ಯತೆ ಬಂದಾಗ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಳ್ಳದೆ, ನಾವೇ ಯಾಕೆ ಹಳ್ಳಿಗೆ ತೆರಳಿ ಹಿರಿಯರ ಭೂಮಿಯಲ್ಲಿ ಕೃಷಿ ಮಾಡಿ ಯಶಸ್ಸು ಹಾಗೂ ನೆಮ್ಮದಿ ಕಂಡುಕೊಳ್ಳಬಾರದು ಎನ್ನುವ ಯೋಚನೆ. ಅದರಂತೆ ಊರಿಗೆ ಬಂದು ಹೈನುಗಾರಿಕೆ ಮತ್ತು ಸಮಗ್ರ ಕೃಷಿ ಮೂಲಕ ಸರ್ವರಿಗೂ ಪ್ರೇರಣೆಯಾದವರು ಹೆಗ್ಗುಂಜೆಯ ವಿಖ್ಯಾತ್‌ ಕುಮಾರ್‌ ಶೆಟ್ಟಿ ಮತ್ತು ನಂದನಿಶಾ ದಂಪತಿ.

ಬಾಲ್ಯದಿಂದಲೇ ಹಸುಗಳ ಮೇಲಿನ ಪ್ರೀತಿಯಿಂದ ಮೊದಲು ಹೈನುಗಾರಿಕೆ ಪ್ರಾರಂಭಿಸಿದರು. ಅನುಭವಕ್ಕಾಗಿ ಹತ್ತಾರು ಡೈರಿ ಸುತ್ತಿ ಬಂದು ಕರಾವಳಿಯಲ್ಲೇ ಅತ್ಯಂತ ವ್ಯವಸ್ಥಿತವಾದ ವಿಮಲಾ ಡೈರಿ ಪ್ರಾರಂಭಿಸಿದರು. ಇದೇ ಸಂದರ್ಭ ನೀರಿನ ಆಶ್ರಯವನ್ನೂ ಬಲಪಡಿಸಿದರು.

35 ಹಸುಗಳು
ವಿಖ್ಯಾತ್‌ ಶೆಟ್ಟಿ ಅವರ ಡೈರಿಯಲ್ಲಿ 35 ಹಸು, ಎರಡು ಎಮ್ಮೆ ಹಾಗೂ ಐದು ಕರುಗಳಿವೆ. ಪ್ರತಿನಿತ್ಯ ಸರಾಸರಿ 300 ಲೀ. ಹಾಲನ್ನು ಒಕ್ಕೂಟಕ್ಕೆ ನೀಡುತ್ತಿದ್ದಾರೆ. ಹಾಲೆಸ್ಟಿನ್‌, ಜೆರ್ಸಿ ಹಾಗೂ ಸಾಯಿವಾಲ್‌ ದೇಶೀ ತಳಿಯ ಹಸುಗಳಿವೆ. ಹೈನುಗಾರಿಕೆಗೆ ಹಸಿ ಮೇವು ಜೀವಾಳ ಎನ್ನುವುದನ್ನು ಅರಿತು ಸುಮಾರು 5 ಎಕ್ರೆ ಜಾಗದಲ್ಲಿ ಹಸಿ ಹುಲ್ಲು ಬೆಳೆಸಿದ್ದಾರೆ.  ಗೋಮೂತ್ರ, ಹಟ್ಟಿ ತೊಳೆದ ನೀರು ವ್ಯವಸ್ಥಿತವಾಗಿ ಸ್ಲರಿ ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಇದನ್ನು ಸ್ಪಿಂಕ್ಲರ್‌ ಮೂಲಕ ಹುಲ್ಲಿನ ಗದ್ದೆಗಳಿಗೆ ಹಾಯಿಸುತ್ತಾರೆ. ಉಪ ಉತ್ಪನ್ನವಾಗಿ ಸೆಗಣಿಯನ್ನು ಮಾರಾಟ ಮಾಡುತ್ತಿದ್ದಾರೆ. ಹಸುಗಳಿಗೆ ದಿನಕ್ಕೆ ಮೂರು ಬಾರಿ ಸ್ನಾನ ಸೇರಿದಂತೆ ನೀರು, ಆಹಾರ ಎಲ್ಲದರಲ್ಲೂ ಇವರು ಸ್ವತ್ಛತೆಯನ್ನು ಕಾಯ್ದುಕೊಂಡಿದ್ದಾರೆ.

ತೋಟಕ್ಕೆ ಪೂರಕ
ಹಸು ಸಾಕಾಣಿಕೆ ತೋಟಗಾರಿಕೆಗೆ ಪೂರಕವಾಗಬೇಕು ಎನ್ನುವ ದೃಷ್ಟಿಯಿಂದ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. 700ರಷ್ಟು ಫಲ ಬರುವ ಅಡಿಕೆ ಮರಗಳಿದ್ದು, ಈ ವರ್ಷ ಹೊಸದಾಗಿ 1,000 ಸಸಿ ನಾಟಿ ಮಾಡಿದ್ದಾರೆ. ಇದರ ಜತೆ ಕಾಳುಮೆಣಸು, ತೆಂಗು, ಗೇರು, ರಕ್ತಚಂದನ, ಕಸಿ ನುಗ್ಗೆ, ವೀಳ್ಯದೆಲೆ, ಸಿಹಿಕಂಚಿ, ದಿವಹಲಸು, ಚಿಕ್ಕು, ಮಾವು, ಬಾಳೆ ಬೆಳೆಸಿದ್ದಾರೆ. ಭತ್ತ ಬೆಳೆಯುತ್ತಿದ್ದಾರೆ. ಸೆಗಣಿ ಹಾಗೂ ಗೋಮೂತ್ರ ಬಳಕೆಯಿಂದ ಮಾಮೂಲಿಗಿಂತ ಎರಡು ಪಟ್ಟು ಹೆಚ್ಚು ಇಳುವರಿ ಕಂಡುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾರಾಟಕ್ಕಾಗಿ ಸುಮಾರು 200 ನಾಟಿ ಕೋಳಿ (ಫೈಟರ್‌) ಸಾಕುತ್ತಿದ್ದಾರೆ. ನೈಸರ್ಗಿಕವಾಗಿ ಮರಿ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಇವುಗಳಿಗೆ ಹೆಚ್ಚು ಬೇಡಿಕೆ ಇದೆ ಹಾಗೂ ಲಾಭದಾಯಕ.

ತರಬೇತಿ:
ಸಿಂಡಿಕೇಟ್‌ ಬ್ಯಾಂಕ್‌ನ ರೂರಲ್‌ ಡೆವಲಪ್‌ಮೆಂಟ್‌ ಮೆನೇಜರ್, ರುಡ್‌ಸೆಟ್‌ ಶಿಬಿರಾರ್ಥಿಗಳು, ಬ್ರಹ್ಮಾವರ ಕೆವಿಕೆ ಕೃಷಿ ಮೇಳಗಳು ಸೇರಿದಂತೆ ಸಾವಿರಾರು ಮಂದಿಗೆ ಹೈನುಗಾರಿಕೆ ತರಬೇತಿ ನೀಡಿದ್ದಾರೆ.

ಪ್ರಶಸ್ತಿ
ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪತ್ನಿ ನಂದನಿಶಾ ವಿ. ಶೆಟ್ಟಿ ಅವರ ಸಂಪೂರ್ಣ ಸಹಕಾರ, ತಂದೆ ಸುಧಾಕರ ಶೆಟ್ಟಿ ಅವರ ಸಲಹೆಯೊಂದಿಗೆ ಮುನ್ನಡೆಯುತ್ತಿದ್ದಾರೆ. ಡೈರಿ ನಿರ್ವಹಣೆಗಾಗಿ ನಾಲ್ಕು ಮಂದಿ ಸಹಾಯಕರಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಿ
ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃಷಿ, ಹೈನುಗಾರಿಕೆ ಮಾಡುವವರಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಪರಿಸ್ಥಿತಿ ನಿಭಾಯಿಸಬಹುದು. ಹೈನುಗಾರಿಕೆ ಪ್ರಾರಂಭಿಸುವಾಗ ಚಿಕ್ಕ ಮೊತ್ತದ ಸಾಲಕ್ಕೆ ಮಾತ್ರ ಕಡಿಮೆ ಬಡ್ಡಿ. ಆಧುನಿಕ ಡೈರಿ ಆರಂಭಿಸಲು ಅನಿವಾರ್ಯವಾಗಿ ದೊಡ್ಡ ಮೊತ್ತದ ಸಾಲಕ್ಕೆ ಕಮರ್ಷಿಯಲ್‌ ಬಡ್ಡಿ. ಕೈಗಾರಿಕೆ ಪ್ರಾರಂಭಿಸುವವರಿಗೆ ಹತ್ತಾರು ಸೌಲಭ್ಯ. ಕೃಷಿಗೆ ಪ್ರೋತ್ಸಾಹ ಸಾಲದು. ಹಲವು ವಿಚಾರಗಳಲ್ಲಿ ಸರಕಾರದ ಧೋರಣೆ ಬದಲಾಗಬೇಕು. ಕೃಷಿ ನಿಜವಾಗಿಯೂ ಲಾಭದಾಯಕ, ನೆಮ್ಮದಿಯೂ ಹೌದು. ಆದರೆ ಸುಲಭದಲ್ಲಿ ಎಲ್ಲವೂ ಸಾಧ್ಯ ಎನ್ನುವ ಭ್ರಮೆ ಯಿಂದ ಹೊರಬರಬೇಕು. ಕಠಿನ ಪರಿಶ್ರಮ, ಬದ್ಧತೆ, ಇಚ್ಛಾಶಕ್ತಿ, ಏಕಾಗ್ರತೆ ಬೆಳೆಸಿಕೊಳ್ಳಬೇಕು. ಆಗ ಕಷ್ಟ ಇದ್ದರೂ ಅತ್ಯಮೂಲ್ಯವಾದ ಮಾನಸಿಕ ನೆಮ್ಮದಿ ದೊರೆಯತ್ತದೆ.
ವಿಖ್ಯಾತ್‌ ಕುಮಾರ್‌ಶೆಟ್ಟಿ, ನಂದನಿಶಾ ವಿ. ಶೆಟ್ಟಿ, ಕೃಷಿಕರು

ಪ್ರವೀಣ್‌ ಮುದ್ದೂರು

ಟಾಪ್ ನ್ಯೂಸ್

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಕುಖ್ಯಾತ ನಕ್ಸಲ್‌ ನಾಯಕನ ಶವ ಪತ್ತೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆ

ಏಕಾಂಗಿ ಪ್ರವಾಸ: ಭಾರತೀಯ ಕಾಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

Untitled-1

ಪಡುಬಿದ್ರಿ: ಬಾವಿಗೆ ಹಾರಿ ಯುವತಿ ಆತ್ಮಹತ್ಯೆ

12kaup

ಆನೆಗುಂದಿ ಶ್ರೀಗಳ ಪಟ್ಟಾಭಿಷೇಕ ಮಹೋತ್ಸವದ 12 ನೇ ವರ್ಧಂತಿ ಉತ್ಸವ

dredge

ಮಲ್ಪೆ ಬಂದರಿನಲ್ಲಿ ಹೂಳು: ಡ್ರಜ್ಜಿಂಗ್‌ ಬೇಡಿಕೆಗೆ ಇನ್ನೂ ಸಿಗಲಿಲ್ಲ ಮನ್ನಣೆ

2sucide

ಕುಂದಾಪುರದ ಉದ್ಯಮಿ ಕಟ್ಟೆ ಭೋಜಣ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

MUST WATCH

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

udayavani youtube

ಮಳಲಿ ಮಸೀದಿಯ ಸರ್ವೇ ನಡೆಯಲಿ ಜನರು ಸತ್ಯ ತಿಳಿಯಲಿ : ಡಾ ಸುರೇಂದ್ರ ಕುಮಾರ್ ಜೈನ್

udayavani youtube

ಒಂದು ಲಕ್ಷದ ಎಂಟು ವಡೆಗಳಿಂದ ಅಲಂಕೃತಗೊಂಡ ಮೈಸೂರಿನ ಶ್ರೀ ಅಂಜನೇಯ ಸ್ವಾಮಿ

udayavani youtube

ಮಣಿಪಾಲ : ಡಿವೈಡರ್ ಗೆ ಬೈಕ್ ಢಿಕ್ಕಿ, ವಿದ್ಯಾರ್ಥಿ ಸಾವು… ಇನ್ನೋರ್ವ ಗಂಭೀರ

udayavani youtube

IPL ಬೆಟ್ಟಿಂಗ್ ಗಾಗಿ ಠೇವಣಿದಾರರ ಹಣವನ್ನೇ ಬಳಸಿಕೊಂಡ ಪೋಸ್ಟ್ ಮಾಸ್ಟರ್

ಹೊಸ ಸೇರ್ಪಡೆ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಮಂಗಳೂರು : ಠಾಣೆ ಮಟ್ಟದಲ್ಲಿ ಯುವಕರ ಸಮಿತಿ: ಎಡಿಜಿಪಿ

ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣ ಹೆಚ್ಚಳ : “ಹೊರಗಿಂದ ಬರುವವರ ಮೇಲೆ ವಿಶೇಷ ನಿಗಾ’

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕ್ರೀಡಾಂಗಣದ ಮಣ್ಣು ಕುಸಿತಕ್ಕೆ ಪರಿಹಾರ : ಅಧಿಕಾರಿಗಳಿಗೆ ನಿರ್ದೇಶ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಕಡಲ ತೀರಕ್ಕೆ ದೌಡಾಯಿಸಿದ ಚುಂಗ್ರಿ! ಸಾಂಪ್ರದಾಯಿಕ ಮೀನುಗಾರರಿಗೆ ಕಂಟಕ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

ಇಮೇಲ್‌ ಮೂಲಕ ಮಹಿಳೆಗೆ 50 ಸಾವಿರ ರೂ. ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.