ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ


Team Udayavani, Sep 20, 2021, 3:50 AM IST

Untitled-1

ಕೋಟ: ರಾಜ್ಯ ಸರಕಾರದ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆಗೆ ಸಂಬಂಧಿಸಿದ ಪಶು ಆಸ್ಪತ್ರೆಗಳು, ಉಪಕೇಂದ್ರಗಳಲ್ಲಿ  ಸಿಬಂದಿಯ ಕೊರತೆ ಕಾಡುತ್ತಿದೆ. ಉಡುಪಿ ಜಿಲ್ಲೆಯಲ್ಲಿ  57 ವಿವಿಧ ಪಶು ವೈದ್ಯಕೀಯ ಹುದ್ದೆಗಳಲ್ಲಿ 30 ಸ್ಥಾನಗಳಿಗೆ ವೈದ್ಯರಿಲ್ಲ ಹಾಗೂ ಹಲವು ಕಡೆಗಳಲ್ಲಿ  ಶೂನ್ಯ ಸಿಬಂದಿಯಿದ್ದಾರೆ.  ಇದರಿಂದಾಗಿ ಜಾನುವಾರುಗಳಿಗೆ ಲಸಿಕೆ, ಚಿಕಿತ್ಸೆಗಾಗಿ ಹೈನುಗಾರರು ಪರದಾಡಬೇಕಾದ ಸ್ಥಿತಿ ಇದೆ.

ಶೂನ್ಯ ಸಿಬಂದಿ ಆಸ್ಪತ್ರೆಗಳು:

ಬ್ರಹ್ಮಾವರ ತಾ|ನಲ್ಲಿ ಒಟ್ಟು 8 ಮುಖ್ಯ ಆಸ್ಪತ್ರೆಗಳು,  7 ಉಪ ಕೇಂದ್ರಗಳಿವೆ. ಇದರಲ್ಲಿ  ಪೇತ್ರಿ, ಧರ್ಮಸಾಲೆ, ಕೊಕ್ಕರ್ಣೆ, ಗುಂಡ್ಮಿ, ಹೆಗ್ಗುಂಜೆ, ಶಿರಿಯಾರ ಆಸ್ಪತ್ರೆಗಳಲ್ಲಿ  ಪಶು ವೈದ್ಯಾಧಿಕಾರಿ, ಪಶು ವೈದ್ಯ ಪರೀಕ್ಷಕರು, ಡಿ ದರ್ಜೆ ಸಿಬಂದಿ ಎಲ್ಲ ಹುದ್ದೆಗಳು ಖಾಲಿ ಇದ್ದು  ಶೂನ್ಯ ಸಿಬಂದಿಯಿದ್ದಾರೆ.  ಇಲ್ಲಿಗೆ ಬೇರೆ ಆಸ್ಪತ್ರೆಗಳಿಂದ ಹೆಚ್ಚುವರಿ ನೆಲೆಯಲ್ಲಿ ವೈದ್ಯರನ್ನು ನೇಮಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ ಹಾಗೂ ಆಸ್ಪತ್ರೆಯ ಬಾಗಿಲು ತೆರೆಯುವ ಸಲುವಾಗಿ ಹೊರಗುತ್ತಿಗೆಯ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗುತ್ತದೆ. ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಇದ್ದು  ಸುವ್ಯವಸ್ಥಿತ ಕಟ್ಟಡ, ಸಾವಿರಾರು ರೂ. ಮೌಲ್ಯದ ಔಷಧವಿದ್ದರೂ  ಚಿಕಿತ್ಸೆಗೆ ವೈದ್ಯರೇ ಇಲ್ಲದ ಸ್ಥಿತಿ ಇದೆ.

ಖಾಸಗಿ ವೈದ್ಯರ ಸೇವೆ:

ಸರ ಕಾರಿ ಪಶು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದ ಕಾರಣ ನಿವೃತ್ತ ವೈದ್ಯರು ಹಾಗೂ ಕೆ.ಎಂ.ಎಫ್‌. ವೈದ್ಯರು ಸೇರಿದಂತೆ ವಿವಿಧ ಖಾಸಗಿ ವೈದ್ಯರ ಸೇವೆಯನ್ನು  ಸಾವಿರಾರು ಹೈನುಗಾರರು ನೆಚ್ಚಿಕೊಂಡಿದ್ದಾರೆ.

ಕಾಯಿಲೆಗಳನ್ನು ನಿಯಂತ್ರಿಸುವ ವಿವಿಧ ಲಸಿಕೆ ಶಿಬಿರಗಳು ಹಾಗೂ ಇಲಾಖಾ ಕಾರ್ಯಕ್ರಮಗಳನ್ನು ನೆರವೇರಿಸಲು ಈಗ ಇರುವ ಸಿಬಂದಿಗೆ ಮಾತ್ರ ಕೆಲಸದ ಒತ್ತಡಕ್ಕೆ ಹೆಚ್ಚಾ ಗಿದೆ.  ಜತೆಗೆ ಗ್ರಾ.ಪಂ. ನೋಡಲ್‌ ಅಧಿಕಾರಿ ಹುದ್ದೆ, ಚುನಾವಣೆ ಕರ್ತವ್ಯದ ತಲೆನೋವು ಕೂಡ ಈ ಸಿಬಂದಿಗಿದೆ.

ಜಿಲ್ಲೆಯ ಜನಪ್ರತಿನಿಧಿಗಳು ಈ ಬಗ್ಗೆ ಸರಕಾರದ ಗಮನಸೆಳೆದು ಖಾಲಿ ಇರುವ ಹುದ್ದೆಗಳಿಗೆ  ಶೀಘ್ರ ವೈದ್ಯರನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.

ರಾಜ್ಯಾದ್ಯಂತ ಈ ಸಮಸ್ಯೆ ಇದ್ದು  ಸಿಬಂದಿ ಕೊರತೆ ಕುರಿತು ಈಗಾಗಲೇ ಇಲಾಖೆಯ ಮುಖ್ಯಸ್ಥರಿಗೆ ವರದಿ ನೀಡಲಾಗಿದೆ.  ಮುಂದೆ ಗುತ್ತಿಗೆ ಅಥವಾ ಖಾಯಂ ವೈದ್ಯರ ನೇಮಕಾತಿ ಸಂದರ್ಭ ಕೊರತೆಯನ್ನು ನೀಗಿಸುವ ಭರವಸೆ ನೀಡಿದ್ದಾರೆ. –ಡಾ| ಅರುಣ್‌ ಕುಮಾರ್‌ ಶೆಟ್ಟಿ, ಆಡಳಿತ ಮುಖ್ಯ ಪಶು ವೈದ್ಯಾಧಿಕಾರಿ,  ಬ್ರಹ್ಮಾವರ ತಾಲೂಕು

-ರಾಜೇಶ್‌ ಗಾಣಿಗ ಅಚ್ಲಾಡಿ

ಟಾಪ್ ನ್ಯೂಸ್

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ನಾಳೆ ಭಾರತ- ಪಾಕ್‌ ಹೈ ವೋಲ್ಟೇಜ್ ಹಣಾಹಣಿ

ನಾಳೆ ಭಾರತ- ಪಾಕ್‌ ಹೈ ವೋಲ್ಟೇಜ್ ಹಣಾಹಣಿ

ಚೀನಾ ಗಡಿಯಲ್ಲಿ ಭಾರತದಿಂದ ಅತಿ ಎತ್ತರದ ರಸ್ತೆ ಸುರಂಗ

ಚೀನಾ ಗಡಿಯಲ್ಲಿ ಭಾರತದಿಂದ ಅತಿ ಎತ್ತರದ ರಸ್ತೆ ಸುರಂಗ

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

ಗ್ರಾಹಕ ಆಯೋಗಕ್ಕೆ ನೇಮಕಾತಿ ಮಾಡದ ಕೇಂದ್ರ: ಸುಪ್ರೀಂ ಬೇಸರ

ಗ್ರಾಹಕ ಆಯೋಗಕ್ಕೆ ನೇಮಕಾತಿ ಮಾಡದ ಕೇಂದ್ರ: ಸುಪ್ರೀಂ ಬೇಸರ

ಕೋವಿಡ್‌ 3ನೇ ಅಲೆ ಭೀಕರವಾಗಿರದು

ಕೋವಿಡ್‌ 3ನೇ ಅಲೆ ಭೀಕರವಾಗಿರದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ಕೋವಿಡ್‌ 3ನೇ ಅಲೆ ತಡೆಗೆ ಸನ್ನದ್ಧ: ಶಾಸಕ ರಘುಪತಿ ಭಟ್‌

ಕೋವಿಡ್‌ 3ನೇ ಅಲೆ ತಡೆಗೆ ಸನ್ನದ್ಧ: ಶಾಸಕ ರಘುಪತಿ ಭಟ್‌

ಹಡಿಲು ಭೂಮಿ ಕೃಷಿ ಕಟಾವಿಗೆ ಸಿದ್ಧ: 1,000 ಟನ್‌ ಉತ್ಪಾದನೆ ನಿರೀಕ್ಷೆ

ಹಡಿಲು ಭೂಮಿ ಕೃಷಿ ಕಟಾವಿಗೆ ಸಿದ್ಧ: 1,000 ಟನ್‌ ಉತ್ಪಾದನೆ ನಿರೀಕ್ಷೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

ಶಿರ್ವ, ಕುಂದಾಪುರದಲ್ಲಿ ಅಕ್ರಮ ಮರಳುಗಾರಿಕೆ

MUST WATCH

udayavani youtube

ಆಟೋ ಚಾಲಕನ ನತದೃಷ್ಟ ಕಥೆಯಿದು

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

ಹೊಸ ಸೇರ್ಪಡೆ

ಚಾಂಪಿಯನ್‌ ವೆಸ್ಟ್‌ ಇಂಡೀಸಿಗೆ ರನ್ನರ್ ಅಪ್‌ ಇಂಗ್ಲೆಂಡ್‌ ಸವಾಲು

ಚಾಂಪಿಯನ್‌ ವೆಸ್ಟ್‌ ಇಂಡೀಸಿಗೆ ರನ್ನರ್ ಅಪ್‌ ಇಂಗ್ಲೆಂಡ್‌ ಸವಾಲು

300ರ ಬದಲು ಇರುವುದು 22 ಯಂತ್ರಗಳು !

300ರ ಬದಲು ಇರುವುದು 22 ಯಂತ್ರಗಳು !

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ನಿರ್ಯಾಣ ಶ್ರೀವಿಶ್ವೇಶತೀರ್ಥರಿಗೆ ನ. 8ರಂದು ಪದ್ಮ ಪ್ರಶಸ್ತಿ ಪ್ರದಾನ

ಮುಂದಿನ ವರ್ಷ ನಡೆಯಲಿದೆ ಭಾರತ-ಇಂಗ್ಲೆಂಡ್‌ 5ನೇ ಟೆಸ್ಟ್‌

ಮುಂದಿನ ವರ್ಷ ನಡೆಯಲಿದೆ ಭಾರತ-ಇಂಗ್ಲೆಂಡ್‌ 5ನೇ ಟೆಸ್ಟ್‌

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಶೀಘ್ರ ಇತ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.