Udayavni Special

ಶ್ರೀ ಪೇಜಾವರ ಶ್ರೀಗಳಿಗೆ ಯಶಸ್ವೀ ಶಸ್ತ್ರಚಿಕಿತ್ಸೆ


Team Udayavani, Aug 21, 2017, 8:55 AM IST

pejawar.jpg

ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಗೆ ರವಿವಾರ ಮಣಿಪಾಲ ಆಸ್ಪತ್ರೆಯಲ್ಲಿ ಹರ್ನಿಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಯಿತು. ಬೆಳಗ್ಗೆ ಶ್ರೀಕೃಷ್ಣ ಮಠದಲ್ಲಿ ಮಹಾಪೂಜೆ ನಡೆಸಿದ ಬಳಿಕ ಶ್ರೀಗಳು ಮಣಿಪಾಲ ಆಸ್ಪತ್ರೆಗೆ ತೆರಳಿದರು. ಪೂರ್ವಾಹ್ನ 11.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆದವು. ಶಸ್ತ್ರಚಿಕಿತ್ಸೆ ಬಳಿಕ ಅವರು ಮಾತನಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಸರ್ಜರಿ ವಿಭಾಗದ ಡಾ| ರಾಮಕೃಷ್ಣನ್‌, ಡಾ| ರಾಜಗೋಪಾಲ ಶೆಣೈ ಶಸ್ತ್ರಚಿಕಿತ್ಸೆ ನಡೆಸಿದರೆ ಯೂರೋಲಜಿ ವಿಭಾಗದ ಡಾ| ಪದ್ಮರಾಜ ಹೆಗ್ಡೆ, ಹೃದಯ ವಿಭಾಗದ ಡಾ| ಪದ್ಮಕುಮಾರ್‌, ಮೆಡಿಸಿನ್‌ ವಿಭಾಗದ ಡಾ| ಮಂಜುನಾಥ ಹಂದೆ, ಅರಿವಳಿಕೆ ವಿಭಾಗದ ಡಾ| ಮಂಜುನಾಥ, ಡಾ| ರಾಮಕುಮಾರ್‌ ಸಹಕರಿಸಿದರು. 

ಮುಸ್ಲಿಮರ ನಮಾಜು: ಶಸ್ತ್ರಚಿಕಿತ್ಸೆ ನಡೆಯುವ ಕೆಲವೇ ಹೊತ್ತಿನ ಮುನ್ನ ಅದೇ ಆವರಣದಲ್ಲಿ ಉಡುಪಿ ಮುಸ್ಲಿಂ ಸಮಿತಿ, ಪೇಜಾವರ ಬ್ಲಿಡ್‌ ಟೀಮ್‌ ಸದಸ್ಯರು ಟೀಮ್‌ ಅಧ್ಯಕ್ಷ ಮಹಮ್ಮದ್‌ ಆರಿಫ್ ನೇತೃತ್ವದಲ್ಲಿ ಶ್ರೀಗಳ ಆರೋಗ್ಯಕ್ಕೆ ಪ್ರಾರ್ಥಿಸಿ ವಿಶೇಷ ನಮಾಜು ನಡೆಸಿದರು. ಗೌರವಾಧ್ಯಕ್ಷ ಪರ್ಕಳ ಅಬೂಬಕ್ಕರ್‌, ಸಮಿತಿಯ ಅನ್ಸರ್‌ ಅಹಮ್ಮದ್‌, ಶಾಹಿಲ್‌ ಮೊದಲಾದವರು ಉಪಸ್ಥಿತರಿದ್ದರು.

ವಿಶೇಷ ಪೂಜೆ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಗಳ ಸುಧಾ ವಿದ್ಯಾರ್ಥಿ ಗಳು, ಹಳೆ ವಿದ್ಯಾರ್ಥಿಗಳು ಕಿರಿಯ ಶ್ರೀಗಳ ನೇತೃತ್ವದಲ್ಲಿ ಧನ್ವಂತರಿ ಹವನ ಮತ್ತು ಜಪ ನಡೆಸಿದರು. ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಕರಂಬಳ್ಳಿ ಬ್ರಾಹ್ಮಣ ವಲಯ ಸಮಿತಿ ಸದಸ್ಯರು ನಂದಾದೀಪ, ವಿಷ್ಣುಸಹಸ್ರನಾಮ ಅರ್ಚನೆ ನಡೆಸಿದರು. ಕಿರಿಯ ಶ್ರೀಗಳು ಹಿರಿಯ ಶ್ರೀಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.

ಪೇಜಾವರ ಕಿರಿಯ ಶ್ರೀಗಳಿಂದ ಚಾಮರ ಸೇವೆ
ಶ್ರೀಕೃಷ್ಣ ಮಠದಲ್ಲಿ ರವಿವಾರ ರಾತ್ರಿ ಪೂಜೆಯನ್ನು ಶ್ರೀ ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇದೇ ಮೊದಲ ಬಾರಿ ನಡೆಸಿದರು. ಕಿರಿಯ ಶ್ರೀಗಳು ಪ್ರತಿನಿತ್ಯ ಪೂಜೆಗೆ ಸಹಕರಿಸುತ್ತಿದ್ದರಾದರೂ ಹಿರಿಯರೇ ಇದುವರೆಗೆ ಮಾಡಿಕೊಂಡು ಬಂದ ಚಾಮರ ಸೇವೆಯನ್ನು ನಡೆಸಿದರು. ಈ ಎರಡು ಚಾಮರಗಳು ತಲಾ 1.5 ಕೆ.ಜಿ. ತೂಗುತ್ತವೆ. ಹಿರಿಯ ಶ್ರೀಗಳ ದೇಹದ ತೂಕವೇ ಎರಡು ವರ್ಷಗಳ ಹಿಂದೆ 35 ಕೆ.ಜಿ. ಇತ್ತು. ಈಗ ಕೆಲವು ಕೆ.ಜಿ.ಯಾದರೂ ಕಡಿಮೆಯಾಗಿದೆ. ಈ ಎರಡು ಚಾಮರಗಳನ್ನು ನಾಲ್ಕೈದು ನಿಮಿಷ ಎರಡೂ ಕೈಯಲ್ಲಿ  ಬೀಸುತ್ತಿದ್ದರು.

ಟಾಪ್ ನ್ಯೂಸ್

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

1-rerrr

ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ: ಅನ್ಸಾರಿ ವಿರುದ್ಧ ಶರವಣ ಆಕ್ರೋಶ

cm-b-bommai

ಉಪಚುನಾಣೆ ತಮಗೆ ಪ್ರತಿಷ್ಠೆಯ ಪ್ರಶ್ನೆಯಲ್ಲ: ಸಿಎಂ ಬಸವರಾಜ್ ಬೊಮ್ಮಾಯಿ

PM Narendra Modi to visit Kedarnath on November 5, inaugurate several projects

ಹಲವು ಯೋಜನೆಗಳ ಉದ್ಘಾಟಣೆಗಾಗಿ ಕೇದಾರನಾಥಕ್ಕೆ ಪ್ರಧಾನ ಮಂತ್ರಿಗಳ ಭೇಟಿ

congress

ಅಲ್ಪಸಂಖ್ಯಾತರ ಕಾಳಜಿ ಎಚ್ ಡಿಕೆಗೆ ಫಲ ನೀಡುವುದಿಲ್ಲ: ಕೈ ನಾಯಕರು ಕಿಡಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

dinesh-gu

ಭಾಗವತ್‌ರ ಹೇಳಿಕೆ ಅರ್ಚಕರ ಬದುಕಿಗೆ ಕೊಳ್ಳಿ‌ ಇಡಲಿದೆ : ದಿನೇಶ್ ಗುಂಡೂರಾವ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಪಾಡಿ: ಶಾಸಕ ಲಾಲಾಜಿ ಮೆಂಡನ್ ರಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ  ಹಸಿರು ನಿಶಾನೆ

ಕಟಪಾಡಿ: ಶಾಸಕ ಲಾಲಾಜಿ ಮೆಂಡನ್ ರಿಂದ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಪ್ರವಾಸಕ್ಕೆ ರಜೆ ಇಂಬು; ಕರಾವಳಿಯ ಪುಣ್ಯಕ್ಷೇತ್ರ, ಪ್ರವಾಸಿ ತಾಣಗಳಲ್ಲಿ ಜನಸಂದಣಿ

ಶ್ರೀಕೃಷ್ಣಮಠದಲ್ಲಿ ಪಶ್ಚಿಮ ಜಾಗರಪೂಜೆ ಆರಂಭ

ಶ್ರೀಕೃಷ್ಣಮಠದಲ್ಲಿ ಪಶ್ಚಿಮ ಜಾಗರಪೂಜೆ ಆರಂಭ

ಬಯೋತೆರಪ್ಯುಟಿಕ್ಸ್‌ ಕ್ಷೇತ್ರಕ್ಕೀಗ ಆದ್ಯತೆ: ಬಗಾರಿಯಾ

ಬಯೋತೆರಪ್ಯುಟಿಕ್ಸ್‌ ಕ್ಷೇತ್ರಕ್ಕೀಗ ಆದ್ಯತೆ: ಬಗಾರಿಯಾ

samshodhana

ಡಾ.ದಿನೇಶ್ ಶೆಟ್ಟಿಯವರ ಸಂಶೋಧನೆಗೆ ಅಬುಧಾಬಿಯಿಂದ 1 ಮಿಲಿಯನ್ ಅನುದಾನ!

MUST WATCH

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

udayavani youtube

ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ದ್ರಾವಿಡ್ ನೇಮಕ

udayavani youtube

ಅಸಹಾಯಕ ಸ್ಥಿತಿಯಲ್ಲಿದ್ದ ವ್ಯಕ್ತಿ ಹಾಗೂ ಕೋತಿಯನ್ನು ರಕ್ಷಿಸಿ ಮಾದರಿಯಾದ ಯುವಕರು

udayavani youtube

ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದವರಿಗೆ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಹೊಸ ಸೇರ್ಪಡೆ

Vijaya Dashami celebration

ವಿಜಯ ದಶಮಿ ಸಂಭ್ರಮ: ರಾವಣನ ಪ್ರತಿಕೃತಿ ದಹನ

davanagere news

ಬಿಎಸ್‌ವೈ ಪ್ರಚಾರಕ್ಕೆ ಬರ್ತಾರೆ

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

ಮೊದಲ ಹಂತ ಮುಗಿಸಿದ ‘ನೀ ಸಿಗೋವರೆಗೂ’: ಶಿವಣ್ಣ ಈಗ ಸೇನಾಧಿಕಾರಿ

kalaburugi news

ಮೇಳ ಕುಂದಾದಲ್ಲಿ ಕುದುರಿ ವಾಸ್ತವ್ಯ

Untitled-1

ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪನ: ಗ್ರಾಮಸ್ಥರಿಗೆ ಧೈರ್ಯ ತುಂಬಿದ ಭೂವಿಜ್ಞಾನಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.