ಮೂಳೂರು: ಬಸ್‌ ಢಿಕ್ಕಿ ಹೊಡೆದು ಗಾಯಗೊಂಡಿದ್ದ ವಿದ್ಯಾರ್ಥಿನಿ ಸಾವು

Team Udayavani, Jul 12, 2019, 9:52 AM IST

ಕಾಪು: ಕಾಲೇಜಿಗೆ ಹೋಗಲು ರಸ್ತೆ ಬದಿ ಕಾಯುತ್ತಿದ್ದಾಗ ಎಕ್ಸ್‌ಪ್ರೆಸ್‌ ಬಸ್‌ ಢಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿನಿ ಗುರುವಾರ ಮೃತಪಟ್ಟಿದ್ದಾರೆ.

ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ, ಮೂಳೂರು ತೊಟ್ಟಂ ವೀರ ಮಾರುತಿ ನಗರ ಕಾಲನಿ ಸದಾಶಿವ ಸಾಲ್ಯಾನ್‌ ಅವರ ಪುತ್ರಿ ಸುನಯ್ನಾ (16) ಮೃತಪಟ್ಟವರು.

ಇವರು ಸೋಮವಾರ ಬೆಳಗ್ಗೆ ಮೂಳೂರು ಎಸ್‌.ಎಂ. ನರ್ಸರಿ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ ಉಡುಪಿ ಕಡೆಗೆ ಹೋಗುತ್ತಿದ್ದ ಎಕ್ಸ್‌ಪ್ರೆಸ್‌ ಬಸ್‌ ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತ ಬಾಲಕಿಯ ತಂದೆ ಮೀನುಗಾರಿಕಾ ವೃತ್ತಿಯಲ್ಲಿದ್ದು, ತಾಯಿ ಸ್ಥಳೀಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹೋದರ ಮೂಳೂರು ಸಿಎಸ್‌ಐ ಶಾಲೆಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಯಾಗಿದ್ದಾನೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ