ಮುಂಡ್ಕೂರು-ಪೇರೂರು ರಸ್ತೆ: ಅಪಾಯ ಆಹ್ವಾನಿಸುತ್ತಿರುವ ಆಲದ ಮರಗಳು

Team Udayavani, Sep 11, 2019, 5:45 AM IST

ಬೆಳ್ಮಣ್‌: ಮುಂಡ್ಕೂರು-ಮೂಡಬಿದಿರೆ ಮುಖ್ಯ ರಸ್ತೆಯ ಪೇರೂರು ಬಳಿ ರಸ್ತೆಗೆ ತಾಗಿ ಕೊಂಡಿರುವ ಎರಡು ಬೃಹತ್‌ ಆಲದ ಮರಗಳು ವಾಲಿಕೊಂಡ ಸ್ಥಿತಿಯಲ್ಲಿದ್ದು, ಅಪಾಯ ಆಹ್ವಾನಿ ಸುತ್ತಿವೆ.

ಕಿನ್ನಿಗೋಳಿ, ಬೆಳ್ಮಣ್‌ ಕಡೆಯಿಂದ ಮೂಡುಬಿದಿರೆ ಮತ್ತು ಕೊಡ್ಯಡ್ಕಗಳಿಗೆ ಪ್ರಯಾಣಿಸುವವರಿಗೂ ಈ ರಸ್ತೆ ಅನಿವಾರ್ಯವಾಗಿರುವ ಕಾರಣ ಮರಗಳ ತೆರವಿಗೆ ಲೋಕೋಪಯೋಗಿ ಇಲಾಖೆ ಶೀಘ್ರ ಮುಂದಾಗಬೇಕೆಂಬ ಆಗ್ರಹ ಸಾರ್ವಜನಿಕ ವಲಯ ದಿಂದ ಕೇಳಿ ಬಂದಿದೆ.

ಖಾಸಗಿ ಜಾಗದಲ್ಲಿರುವ ಮರಗಳು

ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಈ ಆಲದ ಮರಗಳು ಇರುವುದು ಖಾಸಗಿ ಜಾಗದಲ್ಲಿ. ಸಾರ್ವಜನಿಕ ಹಿತದೃಷ್ಟಿಯಿಂದ ಇಲಾಖೆ ಖಾಸಗಿಯವರ ಮನವೊಲಿಸಿ ಈ ಮರಗಳನ್ನು ತೆರವುಗೊಳಿಸಬೇಕೆಂಬ ಸಲಹೆಗಳೂ ಕೇಳಿ ಬಂದಿವೆ. ಈ ಮರಗಳು ಭಾರೀ ಗಾಳಿಮಳೆಗೆ ರಸ್ತೆಗೆ ಉರುಳಿದಲ್ಲಿ ದೊಡ್ಡ ಅವಘಡ ಸಂಭವಿಸುವ ಸಾಧ್ಯತೆ ಇದೆ ಎಂಬುದು ಸ್ಥಳೀಯರ ಅಭಿಪ್ರಾಯ.

ಇಕ್ಕಟ್ಟಾದ ರಸ್ತೆ, ಸೇತುವೆ

ಈ ರಸ್ತೆ ಭಾರೀ ಇಕ್ಕಟ್ಟಾಗಿದ್ದು ಕಿರು ಸೇತುವೆ ಯನ್ನೂ ವಿಸ್ತರಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆ. ಈ ಪ್ರದೇಶದಲ್ಲಿ ಹಲವು ಅಪಘಾತಗಳು ನಡೆದರೂ ಇಲಾಖೆ ಮಾತ್ರ ಇನ್ನೂ ಸ್ಪಂದಿಸದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಸಂಚಾರ ಕಷ್ಟ

ರಸ್ತೆ ಹಾಗೂ ಕಿರುಸೇತುವೆ ಇಕ್ಕಟ್ಟಾಗಿರುವ ಕಾರಣ ವಾಹನ ಸಂಚಾರ ಕಷ್ಟವಾಗಿದೆ. ಇದರ ನಡುವೆ ಆಲದ ಮರಗಳೂ ರಸ್ತೆಗೆ ವಾಲಿಕೊಂಡು ಅಪಾಯ ಆಹ್ವಾನಿಸುತ್ತಿವೆ. ಸಂಬಂಧ ಪಟ್ಟ ಇಲಾಖೆ ರಸ್ತೆ ವಿಸ್ತರಣೆಯ ಜತೆಗೆ ಇವುಗಳ ತೆರವಿಗೆ ಮುಂದಾಗಬೇಕು.
– ರಾಜೇಶ್‌ ಕಡಂದಲೆ, ಬಸ್‌ ಚಾಲಕ
ಲೋಕೋಪಯೋಗಿ ಇಲಾಖೆಗೆ ಪತ್ರ

ಈ ಆಲದ ಮರಗಳ ಬಗ್ಗೆ ಏಕಾಏಕಿ ಪಂಚಾಯತ್‌ ಕ್ರಮಕೈಗೊಳ್ಳುವಂತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಪಂಚಾಯತ್‌ ವತಿಯಿಂದ ಪತ್ರ ಬರೆಯಲಾಗುವುದು.
– ಶುಭಾ ಪಿ. ಶೆಟ್ಟಿ, ಅಧ್ಯಕ್ಷೆ, ಮುಂಡ್ಕೂರು ಗ್ರಾ.ಪಂ.
ಹಲವು ಅಪಘಾತ

ಇಲ್ಲಿ ಈ ಹಿಂದೆಯೂ ಹಲವಾರು ಅಪಘಾತಗಳು ನಡೆದಿವೆ. ಅಪಘಾತಗಳಿಗೆ ರಸ್ತೆ ಇಕ್ಕಟ್ಟಾಗಿರುವುದೇ ಮುಖ್ಯ ಕಾರಣ.
– ಪುರಂದರ ಪೊಸ್ರಾಲು, ಸ್ಥಳೀಯರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ