ನಾಗರಾಜ್‌ ತಂತ್ರಿ ಅವರಿಗೆ ಬೀಳ್ಕೊಡುಗೆ, ಸಮ್ಮಾನ

Team Udayavani, May 16, 2019, 6:20 AM IST

ಉಡುಪಿ: ಎಸ್‌ಬಿಐ ಮಂಗಳೂರು ಮುಖ್ಯ ಶಾಖೆಯ ಮುಖ್ಯ ವ್ಯವಸ್ಥಾಪಕರಾಗಿದ್ದು, ಇದೀಗ ನಿವೃತ್ತಿ ಹೊಂದಿದ ನಾಗರಾಜ್‌ ತಂತ್ರಿ ಅವರನ್ನು ಸಮ್ಮಾನಿಸಲಾಯಿತು.

ನಾಗರಾಜ್‌ ತಂತ್ರಿ ದಂಪತಿಯನ್ನು ರಾಮಮೂರ್ತಿ, ಶಾಂತಾರಾಮ್‌ ಶೆಣೈ ಅವರು ಸಮ್ಮಾನಿಸಿ ಶುಭ ಹಾರೈಸಿದರು.

ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 39 ವರ್ಷ ಸೇವೆ ಸಲ್ಲಿಸಿದ್ದ ನಾಗರಾಜ್‌ ಅವರು ಮಂಗಳೂರು ಶಾಖೆಯ 150ನೇ ವರ್ಷಾಚರಣೆಯನ್ನು ಅಕ್ಟೋಬರ್‌ನಲ್ಲಿ ಚೇರ್‌ಮನ್‌ ರಜನೀಶ್‌ ಕುಮಾರ್‌ ಅವರಿಂದ ಪ್ರಾರಂಭಿಸಿದ್ದರು. ಎನ್‌ಆರ್‌ಐ, ಅಂತರ್‌ದೇಶೀಯ ಬ್ಯಾಂಕಿಂಗ್‌, ವಿದೇಶೀ ವಿನಿಮಯಗಳಲ್ಲಿ ವಿಶೇಷ ಜ್ಞಾನ ಹೊಂದಿದ ಅವರು ಬೆಂಗಳೂರು ವೃತ್ತದ ಎಲ್ಲ ಶಾಖೆಗಳಿಗೆ ಮಾರ್ಗದರ್ಶನ ನೀಡಿದ್ದರು. ಎಸ್‌ಬಿಐ ಲೈಫ್, ಎಸ್‌ಬಿಐ ಮ್ಯುಚುವಲ್‌ ಫ‌ಂಡ್‌ನ‌ಲ್ಲೂ ಅತ್ಯುತ್ತಮ ವ್ಯವಹಾರ ನಡೆಸಿ ಚೇರ್‌ಮನ್‌ ಕ್ಲಬ್‌ ಮೆಂಬರ್‌ಶಿಪ್‌ ಪಡೆದಿದ್ದರು.

2 ಬಾರಿ ಸ್ಟಾರ್‌ ಎಂಡಿಆರ್‌ಟಿ, 7 ಬಾರಿ ಎಂಡಿಆರ್‌ಟಿ, 1 ಬಾರಿ ಸಿಒಟಿ ಬಿರುದು ಗಳಿಸಿದ್ದಾರೆ. 5 ವರ್ಷ ಇನ್ಸ್‌ಪೆಕ್ಷನ್‌ ವಿಭಾಗದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡಿನ ನೂರಕ್ಕೂ ಹೆಚ್ಚು ಶಾಖೆಗಳಲ್ಲಿ ಕರ್ತವ್ಯ ನಿಭಾಯಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ