ನೌಕಾ ಮಾದರಿ ರಚನೆ: ಕಲ್ಲಾಪುವಿನ ಕೆಡೆಟ್‌ ನಿಸರ್ಗಾಗೆ ಗೌರವ


Team Udayavani, Mar 10, 2018, 6:00 AM IST

NC.jpg

ಕಟಪಾಡಿ: ಗಣರಾಜ್ಯೋತ್ಸವ ಸಂದರ್ಭ ಎನ್‌ಸಿಸಿ (ನೇವಿ) ನಡೆಸಿದ ಶಿಪ್‌ ಮಾಡೆಲರ್‌ ಆಗಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ  ಉಡುಪಿ, ಕಟಪಾಡಿ ಕಲ್ಲಾಪುವಿನ “ಪೆಟ್ಟಿ ಆಫೀಸರ್‌ ಕೆಡೆಟ್‌’ ನಿಸರ್ಗಾ 4ನೇ ಸ್ಥಾನ ಪಡೆದಿದ್ದಾರೆ.
 
ಇವರು  ನಿಟ್ಟೆ ರುಕ್ಮಿಣಿ ಅಡ್ಯಂತಾಯ ಮೆಮೋರಿಯಲ್‌ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ 2ನೇ ವರ್ಷದ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಉಡುಪಿ ಪೂರ್ಣಪ್ರಜ್ಞ 1 ಕಾಲೇಜಿನಲ್ಲಿ ಮೂರನೇ ವರ್ಷದ ನೇವಿ ಕೆಡೆಟ್‌ ಆಗಿದ್ದಾರೆ.
  
17 ಡೈರೆಕ್ಟರೇಟ್‌ಗಳಿಂದ ಆಗಮಿಸಿದ ಸ್ಪರ್ಧಾಳುಗಳ ಮಧ್ಯೆ ಕರ್ನಾಟಕ-ಗೋವಾ ಡೈರೆಕ್ಟರೇಟ್‌ನ ಮೂವರು ಎಸ್‌.ಡಬ್ಲ್ಯೂ ಕೆಡೆಟ್ಸ್‌ಗಳ ತಂಡವನ್ನು ನಿಸರ್ಗಾ ಅವರು ಮುನ್ನಡೆಸಿದ್ದಾರೆ. ಅವರ ತಂಡ ಶಿಪ್‌ ಮಾಡೆಲಿಂಗ್‌ ಇನ್‌ಸ್ಟ್ರಕ್ಟರ್‌ ಪರಶುರಾಮ್‌ ಕೆ. ಅವರ ಮಾರ್ಗದರ್ಶನದಲ್ಲಿ ಐಎನ್‌ಎಸ್‌ ತಬರ್‌ ನೌಕೆಯ ಮಾದರಿಯನ್ನು ತಯಾರಿಸಿತ್ತು. ಈ ಮಾದರಿ ಕುರಿತ ವಿವರಗಳನ್ನು ಪ್ರದರ್ಶಿನಿಯಲ್ಲಿ  ಚೀಫ್‌ ಆಫ್‌ ನೇವಲ್‌ ಸ್ಟಫ್‌ ಅಡ್ಮಿರಲ್‌ ಸುನಿಲ್‌ ಲಾಂಬ ಅವರಿಗೆ ನಿಸರ್ಗಾ ಅವರು ನೀಡಿದ್ದು, ತಂಡಕ್ಕೆ 4ನೇ ಸ್ಥಾನ ಪ್ರಾಪ್ತವಾಗಿದೆ. ಇದರೊಂದಿಗೆ ವಿಜೇತರು ರಾಷ್ಟ್ರಪತಿ, ಪ್ರಧಾನಿ, ರಕ್ಷಣಾಮಂತ್ರಿ ಅವರೊಂದಿಗೆ ಚಹಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಇದರೊಂದಿಗೆ ಬೆಂಗಳೂರಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು ವಿಜೇತರನ್ನು ಸಮ್ಮಾನಿಸಿದ್ದಾರೆ. ನಿಸರ್ಗಾ ಅವರು ಕಟಪಾಡಿ ಕಲ್ಲಾಪು ನಿವಾಸಿ ಭಾರತಿ ಅವರ ಪುತ್ರಿಯಾಗಿದ್ದಾರೆ. 

ಕಠಿನ ತರಬೇತಿ ಬಳಿಕ ನಿಸರ್ಗಾ 52 ತಾಸಿನಲ್ಲಿ ಐ.ಎನ್‌.ಎಸ್‌. ತಬರ್‌ ನೌಕಾ ಮಾದರಿಯನ್ನು ಸಿದ್ಧಪಡಿಸಿದ್ದಾಳೆ. ತಂಡದ ನಾಯಕಿಯಾಗಿ ಆಕೆ ಯಶಸ್ಸು ಸಾಧಿಸಿದ್ದಾಳೆ.  ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಎನ್‌.ಸಿ.ಸಿ. ಕೋಟಾದಡಿ ಮೀಸಲಾತಿಗೂ ಅರ್ಹತೆ ಪಡೆದಿದ್ದಾಳೆ. 
–  ಪರಶುರಾಮ್‌ ಕೆ., 
ಶಿಪ್‌ ಮಾಡೆಲಿಂಗ್‌ ಇನ್‌ಸ್ಟ್ರಕ್ಟರ್‌.

– ವಿಜಯ ಆಚಾರ್ಯ, ಉಚ್ಚಿಲ

ಟಾಪ್ ನ್ಯೂಸ್

lighthouse web exclusive dm

ಕಾಪು ಲೈಟ್‌ ಹೌಸ್‌ ಬಗ್ಗೆ ನಿಮಗೆಷ್ಟು ಗೊತ್ತು ? ದೀಪಸ್ತಂಭಗಳ ಬಗ್ಗೆ ಕುತೂಹಲಕರ ಮಾಹಿತಿ…

1-sadsad

ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

1-sadsdsads

ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದೂಗಳ….; ಸಿ.ಟಿ.ರವಿ ಆಕ್ರೋಶ

arrested

ಹಿಂದೂ ಯುವತಿಯೊಂದಿಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ; ಮೂವರ ಬಂಧನ

1-sdsadas

ಧರ್ಮ ಲೆಕ್ಕಿಸದೆ ಜನಸಂಖ್ಯಾ ನಿಯಂತ್ರಣ ಮಸೂದೆ ಅಗತ್ಯವಿದೆ: ಸಚಿವ ಗಿರಿರಾಜ್ ಸಿಂಗ್

ಕೆನಡಾದಲ್ಲಿ ರಸ್ತೆ ಅಪಘಾತ: ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಕೆನಡಾದಲ್ಲಿ ರಸ್ತೆ ಅಪಘಾತ: ಭಾರತೀಯ ಮೂಲದ ವಿದ್ಯಾರ್ಥಿ ಸಾವು

1-sadsadasd

ಜನರೀಗ ರಾಹುಲ್ ಗಾಂಧಿಯ ನಿಜವಾದ ಮುಖವನ್ನು ನೋಡುತ್ತಿದ್ದಾರೆ: ವೇಣುಗೋಪಾಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ ಕೃಷ್ಣ ಮಠದ ಪರಿಸರಕ್ಕೂ ಬಂದಿದ್ದನಂತೆ ಉಗ್ರ ಶಾರೀಕ್‌!

ಉಡುಪಿ ಕೃಷ್ಣ ಮಠದ ಪರಿಸರಕ್ಕೂ ಬಂದಿದ್ದನಂತೆ ಉಗ್ರ ಶಾರೀಕ್‌!

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ ಆರಂಭ: ಶಾಸಕ ರಘುಪತಿ ಭಟ್‌

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ ಆರಂಭ: ಶಾಸಕ ರಘುಪತಿ ಭಟ್‌

ಉಪೇಂದ್ರ ಪೈ ಜನ್ಮದಿನಾಚರಣೆ ; ಸಚಿವ ಅಶ್ವ ತ್ಥನಾರಾಯಣರಿಂದ ಗತಕಾಲದ ಸ್ಮರಣೆ

ಉಪೇಂದ್ರ ಪೈ ಜನ್ಮದಿನಾಚರಣೆ ; ಸಚಿವ ಅಶ್ವ ತ್ಥನಾರಾಯಣರಿಂದ ಗತಕಾಲದ ಸ್ಮರಣೆ

ವಿ.ವಿ.ಗಳ ಆಡಳಿತ ವಿಕೇಂದ್ರೀಕರಣಕ್ಕೆ ಹೊಸ ಕಾಯ್ದೆ

ವಿಶ್ವವಿದ್ಯಾನಿಲಯಗಳ ಆಡಳಿತ ವಿಕೇಂದ್ರೀಕರಣಕ್ಕೆ ಹೊಸ ಕಾಯ್ದೆ

ಉಡುಪಿ: ದತ್ತುಗ್ರಾಮ ಸಂಕಲ್ಪಕ್ಕೆ ಚಾಲನೆ

ಉಡುಪಿ: ದತ್ತುಗ್ರಾಮ ಸಂಕಲ್ಪಕ್ಕೆ ಚಾಲನೆ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

1-adasdsadsa

ಶೀಘ್ರ ಭತ್ತ-ರಾಗಿಗೆ ಖರೀದಿ ಕೇಂದ್ರ ಸ್ಥಾಪಿಸಿ: ಸಿಎಂಗೆ ದಿನೇಶ್‌ ಗೂಳಿಗೌಡ ಮನವಿ

lighthouse web exclusive dm

ಕಾಪು ಲೈಟ್‌ ಹೌಸ್‌ ಬಗ್ಗೆ ನಿಮಗೆಷ್ಟು ಗೊತ್ತು ? ದೀಪಸ್ತಂಭಗಳ ಬಗ್ಗೆ ಕುತೂಹಲಕರ ಮಾಹಿತಿ…

20

ಇನ್ನೂ ತಪ್ಪಿಲ್ಲ ಬಿಡಾಡಿ ದನಗಳ ಹಾವಳಿ

1-sadsad

ಮೂವರು ಶೂಟರ್‌ಗಳು ನನ್ನನ್ನು ಮುಗಿಸಲು ಮುಂದಾಗಿದ್ದರು: ಇಮ್ರಾನ್ ಖಾನ್

19

ಕುರುಗೋಡು: ಮಾಜಿ ಶಾಸಕರಿಂದ ಆಂಜನೇಯ ದೇವಸ್ಥಾನಕ್ಕೆ 1 ಲಕ್ಷ ದೇಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.