ಕಟ್ಟೆಮಕ್ಕಿ – ಹೊಗೆಮನೆ ರಸ್ತೆ : ಇನ್ನೂ ಆಗಿಲ್ಲ ಡಾಮರು

25 ವರ್ಷಗಳಿಂದ ಕೆಸರು, ಧೂಳುಮಯ ರಸ್ತೆ, ಡಾಮರೀಕರಣಕ್ಕೆ ಜನರ ಆಗ್ರಹ

Team Udayavani, Oct 9, 2019, 3:41 AM IST

ಹಾಲಾಡಿ: ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ, ಕಟ್ಟೆಮಕ್ಕಿಯಿಂದ ಹೊಗೆಮನೆಗೆ ಹೋಗುವ ರಸ್ತೆ 2 ದಶಕ ಕಳೆದರೂ, ಇನ್ನೂ ಡಾಮರು ಭಾಗ್ಯ ಮಾತ್ರ ಸಿಕ್ಕಿಲ್ಲ. ಮಳೆಗಾಲದಲ್ಲಿ ಕೆಸರುಮಯ, ಬೇಸಗೆಯಲ್ಲಿ ಧೂಳುಮಯ ರಸ್ತೆಯಿಂದಾಗಿ ಈ ಭಾಗದ ಜನ ಹೈರಾಣಾಗಿ ಹೋಗಿದ್ದಾರೆ.

ಕಟ್ಟೆಮಕ್ಕಿಯಿಂದ ಹೊಗೆಮನೆಗೆ ಸುಮಾರು 1 ಕಿ.ಮೀ.ಗೂ ಹೆಚ್ಚು ದೂರದ ಈ ರಸ್ತೆಗೆ 2 ದಶಕಗಳಿಂದಲೂ ಡಾಮರೀಕರಣವಾಗಬೇಕು ಎನ್ನುವ ಈ ಭಾಗದ ಜನರ ಬೇಡಿಕೆಯಿದೆ. ಸುಮಾರು 25 ವರ್ಷಗಳಿಂದಲೂ ಮಣ್ಣಿನ ರಸ್ತೆಯಾಗಿಯೇ ಇದ್ದರೂ, ಇಲ್ಲಿನ ಜನರ ಬಹು ಕಾಲದ ಬೇಡಿಕೆಗೆ ಮಾತ್ರ ಈವರೆಗೆ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಮನ್ನಣೆಯೇ ನೀಡಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.

ಸಸಿಹಿತ್ಲು, ತೆಂಕಬೆಟ್ಟು, ಹೊಗೆಮನೆಗೆ ಸಂಪರ್ಕ ಕಲ್ಪಿಸುತ್ತಿದ್ದು, ಸುಮಾರು 25 ಕ್ಕಿಂತಲೂ ಹೆಚ್ಚಿನ ಮನೆಯಿದೆ. ಶಾಲಾ ವಾಹನಗಳು, ಇತರೆ ವಾಹನಗಳು ಕೂಡ ಸಂಚರಿಸುತ್ತವೆ. ಸುಮಾರು 30 ಮಂದಿ ಶಾಲಾ – ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿದ್ದಾರೆ.

ಧೂಳುಮಯ ರಸ್ತೆ
ಸಾರ್ವಜನಿಕ ಸಾರಿಗೆ ಸಂಪರ್ಕ ಇಲ್ಲದ ಕಾರಣ ಈ ಭಾಗದ ಜನರು, ಮಕ್ಕಳು ನಡೆದುಕೊಂಡೇ ಹೋಗುವುದು ಹೆಚ್ಚು. ಮಳೆಗಾಲದಲ್ಲಿ ಮಣ್ಣಿನ ರಸ್ತೆಯಿಂದಾಗಿ ಚರಂಡಿಯೂ ಇಲ್ಲದ ಕಾರಣ ರಸ್ತೆಯಲ್ಲಿಯೇ ನೀರು ಹರಿದು ಕೆಸರುಮಯವಾಗಿದ್ದರೆ, ಬೇಸಿಗೆ ಕಾಲದಲ್ಲಿ ಧೂಳುಮಯ ವಾಗಿರುವುದರಿಂದ ದ್ವಿಚಕ್ರ, ರಿಕ್ಷಾ ಸೇರಿ ದಂತೆ ವಾಹನ ಸವಾರರು, ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

ಭರವಸೆ ಮಾತ್ರ
ಕಳೆದ 5-6 ವರ್ಷಗಳಿಂದಲೂ ಜನಪ್ರತಿನಿಧಿಗಳು ಈ ರಸ್ತೆಗೆ ಡಾಮರೀಕರಣಕ್ಕೆ ಅನುದಾನ ಮೀಸಲಿರಿಸಲಾಗಿದೆ ಎನ್ನುತ್ತಾರೆ. ಆದರೆ ಇದು ಕೇವಲ ಭರವಸೆಯಾಗಿಯೇ ಇದೆ. ಇನ್ನೂ ಈಡೇರುವ ಲಕ್ಷಣ ಮಾತ್ರ ಕಂಡು ಬಂದಿಲ್ಲ. ಶಂಕರನಾರಾಯಣ ಗ್ರಾ.ಪಂ., ಪ್ರತಿ ಗ್ರಾಮಸಭೆಯಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ