ತೆಂಗು ರೋಗ ವೀಕ್ಷಿಸಿದ ಅಧಿಕಾರಿಗಳು
Team Udayavani, Mar 20, 2019, 1:00 AM IST
ಕುಂದಾಪುರ: ಹೆಮ್ಮಾಡಿಯ ಸಂತೋಷ ನಗರದಲ್ಲಿ ಕಂಡುಬಂದ ತೆಂಗಿನ ವಿಚಿತ್ರ ರೋಗ ವೀಕ್ಷಿಸಲು ಮಂಗಳವಾರ ತೋಟಗಾರಿಕಾ ಇಲಾಖಾಧಿಕಾರಿಗಳು ಭೇಟಿ ನೀಡಿದ್ದಾರೆ.
ಇಲ್ಲಿನ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ ಅವರು ಹೆಮ್ಮಾಡಿ ಸಂತೋಷ ನಗರದ ರಹೀಂ ಅವರಲ್ಲಿಗೆ ಭೇಟಿ ನೀಡಿದ್ದು ಸತ್ತುಬಿದ್ದ ಮರಗಳನ್ನು, ರೋಗಪೀಡಿತ ಮರಗಳನ್ನು ನೋಡಿದ್ದಾರೆ.
ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿಯೂ ಕಂಡುಬರುವಂತಹ ಮಾದರಿಯಲ್ಲಿ ಈ ರೋಗ ಲÒಣ ಇಲ್ಲದ ಕಾರಣ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರಕ್ಕೆ ಮಾಹಿತಿ ನೀಡಿ ಅಲ್ಲಿನ ವಿಜ್ಞಾನಿಗಳನ್ನು ಕರೆಸಿ ಅವರಿಂದ ಪರಿಶೀಲನೆ ನಡೆಸಿ ಪರಿಹಾರ ಒದಗಿಸುವುದಾಗಿ ಹೇಳಿದ್ದಾರೆ.
ಹೆಮ್ಮಾಡಿ ಪರಿಸರದಲ್ಲಿ ತೆಂಗಿನ ಮರಗಳಿಗೆ ವಿಚಿತ್ರ ರೋಗ ಕಾಣಿಸಿಕೊಂಡಿದೆ. ಪರಿಣಾಮ ಎರಡು ತಿಂಗಳಲ್ಲಿ ಸಾಲು ಸಾಲು ಮರಗಳು ನೆಲಕ್ಕುರುಳಿವೆ. ಇದಕ್ಕೆ ಔಷಧಿ ಏನೆಂದು ತಿಳಿಯದೇ ತೆಂಗು ಬೆಳೆದವರು ಕಂಗಾಲಾಗಿದ್ದಾರೆ.
ಹೆಮ್ಮಾಡಿಯ ಸಂತೋಷ ನಗರದ ಬಳಿ ರಹೀಂ ಎಂಬವರ ಐದರಷ್ಟು ಮರಗಳು ಈಗಾಗಲೇ ಈ ರೋಗಕ್ಕೆ ಬಲಿಯಾಗಿದೆ ಎಂದು ಉದಯವಾಣಿ “ಹೆಮ್ಮಾಡಿ: ತೆಂಗಿನ ಮರಗಳಿಗೆ ¬ಬಂತು ವಿಚಿತ್ರ ರೋಗ!’ ಎಂದು ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀಕೃಷ್ಣಮಠ: ಕೃಷ್ಣಾಷ್ಟಮಿ ಉತ್ಸವ, ವಿಶೇಷ ಪೂಜೆ, ಅರ್ಘ್ಯ ಪ್ರದಾನ
ಫ್ಲ್ಯಾಟ್ ನಿಂದ ಚಿನ್ನಾಭರಣ ಕಳವು; ಆರೋಪಿಗಳ ಸೆರೆ
ಸಿದ್ದರಾಮಯ್ಯ ಅವರು ಸೆಲ್ಯೂಲರ್ ಜೈಲಿಗೆ ಒಮ್ಮೆ ಹೋಗಿ ಬರಬೇಕು: ಸಚಿವ ಸುನಿಲ್ ಕುಮಾರ್
ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ ಆರ್ ಪಾಟ್ಕರ್ ರಾಜಿನಾಮೆ
ಕಿರು ಆಹಾರ ಸಂಸ್ಕರಣೆ ಉದ್ಯಮ ಘಟಕ ಆರಂಭಕ್ಕೆ ಸಾಲ ಸೌಲಭ್ಯ: ತಿರಸ್ಕೃತ ಅರ್ಜಿಗಳೇ ಹೆಚ್ಚು !
MUST WATCH
ಹೊಸ ಸೇರ್ಪಡೆ
ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ 9 ಮಂದಿ ಹಿಂದೂ ಕಾರ್ಯಕರ್ತರ ವಿರುದ್ದ ಎಫ್ಐಆರ್
ಶಾಲಾ ಬಸ್ -ಕ್ಯಾಂಟರ್ ಅಪಘಾತ :ಇಬ್ಬರು ಚಾಲಕರು ಸಾವು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಭಲೇ ದ್ಯಾಮಣ್ಣ.. :1ಕ್ವಿಂಟಲ್ 53 ಕೆ.ಜಿ.ಭಾರ ಎತ್ತಿ ಶಕ್ತಿ ಪ್ರದರ್ಶನದಲ್ಲಿ ಸೈ ಎನಿಸಿದ ಯುವಕ
ಲಾರಿಗೆ ಕಾರು ಢಿಕ್ಕಿ: ತಂದೆ, ಮಗಳು ಸಾವು; ಮಗು ಗಂಭೀರ
ಮಥುರಾದ ಬಂಕೆ ಬಿಹಾರಿ ಮಂದಿರದಲ್ಲಿ ನೂಕುನುಗ್ಗಲು : ಇಬ್ಬರು ಸಾವು, ನಾಲ್ವರಿಗೆ ಗಾಯ