ಉಡುಪಿ: ಕೃಷಿಗೆ ಶರಣಾದ ಮುಂಬಯಿ ಪತ್ರಕರ್ತ, ಹೊಟೇಲ್‌ ಉದ್ಯಮಿ


Team Udayavani, Mar 18, 2022, 8:00 AM IST

ಕೃಷಿಗೆ ಶರಣಾದ ಮುಂಬಯಿ ಪತ್ರಕರ್ತ, ಹೊಟೇಲ್‌ ಉದ್ಯಮಿ

ಕಟಪಾಡಿ: ಕೊರೊನಾ ಸೋಂಕು ಕಾರಣದಿಂದ ಮುಂಬಯಿಯಿಂದ ಊರಿಗೆ ಮರಳಿದ ಪತ್ರಕರ್ತ, ಹೊಟೇಲ್‌ ಉದ್ಯಮಿಯೊಬ್ಬರು ಕೃಷಿಯಲ್ಲಿ ತೊಡಗಿ ಪ್ರಯೋಗಶೀಲನಾಗಿದ್ದಾರೆ. ಇದರಿಂದಾಗಿ ಆಹಾರದಲ್ಲಿ ಸ್ವಾವಲಂಬಿಯಾಗಬೇಕೆಂಬ ಒಟ್ಟಾರೆ ಆಶಯಕ್ಕೆ ಇಂಬು ಸಿಕ್ಕಿದಂತಾಗಿದೆ.

ಮೂಲತಃ ಕಟಪಾಡಿ ಮಟ್ಟು ನಿವಾಸಿ ಹರೀಶ್‌ ರಾಜು ಪೂಜಾರಿ ಮುಂಬಯಿಯಲ್ಲಿ ಸ್ಟಾರ್‌ ಡಸ್ಟ್‌ ಪತ್ರಿಕೆಯ ಸಂಪಾದಕರಾಗಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಬಳಿಕ ಮುಲುಂಡ್‌(ವೆಸ್ಟ್‌)ನ ಮಾಲೊಂದರಲ್ಲಿ  20 ವರ್ಷ ಕಾಲ ಬನಾನ ಲೀಫ್‌ ಫಾಸ್ಟ್‌ ಫುಡ್‌ ಮಾಲಕರಾಗಿದ್ದರು. ಕೊರೊನಾ ಮಹಾಮಾರಿಯ ಸಂದರ್ಭ ಹೊಟೇಲ್‌ ಉದ್ಯಮವು ಕೈ ಕೊಟ್ಟಿದ್ದು, ಕಳೆದ 6 ತಿಂಗಳ ಹಿಂದೆ ಹುಟ್ಟೂರಿಗೆ ಮರಳಿದರು.

ಬದುಕು ಕಟ್ಟಿಕೊಳ್ಳಲು ಕೃಷಿಯನ್ನು ನೆಚ್ಚಿಕೊಂಡರು. ಹಿರಿಯರ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಹೀರೆಕಾಯಿ, ಸೌತೆಕಾಯಿ, ಸೋರೆಕಾಯಿ, ಮಟ್ಟುಗುಳ್ಳ ಸಹಿತ ಇತರೆ  ಬೆಳೆಗಳನ್ನು ಬೆಳೆಸಿದ್ದಾರೆ. ಕೃಷಿ ಕೂಲಿ ಕಾರ್ಮಿಕರನ್ನು ಅವಲಂಬಿಸದೆ ಸ್ವತಃ ತಾನೇ ಗದ್ದೆಗಿಳಿದು ಕೆಲಸ ಮಾಡುತ್ತಾರೆ. ಸಹೋದರನ ಮಾರ್ಗದರ್ಶನದಲ್ಲಿ ಬಾಲ್ಯದಲ್ಲಿ ತಾತನಿಂದ ಕಲಿತಿದ್ದ ಕೃಷಿಯ ಜತೆಗೆ ಆಧುನಿಕ ಕೃಷಿಯ ಬಗ್ಗೆ  ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಪಡೆದು ಅವುಗಳನ್ನು ಕೃತಿರೂಪಕ್ಕೆ ಇಳಿಸುತ್ತಿದ್ದಾರೆ.

ಸಾವಯವ ತರಕಾರಿ ಬೆಳೆ :

ಇಲ್ಲಿ ಬೆಳೆಯುವ  ಬೆಳೆಗಳಿಗೆ ಸಾವಯವ ಗೊಬ್ಬರವನ್ನು  ಹೆಚ್ಚಾಗಿ ಕೋಳಿ ಗೊಬ್ಬರ ಮತ್ತು ಈ(ನೀ)ರುಳ್ಳಿ ಸಿಪ್ಪೆಯ ಗೊಬ್ಬರವನ್ನು ಬಳಸುತ್ತಾರೆ. ಈರುಳ್ಳಿ ಸಿಪ್ಪೆ ಮತ್ತು ಕೋಳಿ ಗೊಬ್ಬರವನ್ನು ನೀರಿದ್ದ  ಡ್ರಮ್‌ನಲ್ಲಿ ಸುಮಾರು 48 ತಾಸುಗಳ ಕಾಲ ನೆನೆಹಾಕಿ ಅದರ ನೀರನ್ನು ಗದ್ದೆಗೆ ಕೊಡುತ್ತಾರೆ. ಸ್ಥಳೀಯವಾಗಿ ಮಾರುಕಟ್ಟೆಯನ್ನು ಕಂಡು ಕೊಂಡಿದ್ದು ಉತ್ತಮ ಆದಾಯ ಬರಬಹುದು ಎಂಬ ನಿರೀಕ್ಷೆ ಇದೆ.

ಸೀಡ್ಲಿಂಗ್‌ ಗನ್‌ ಬಳಸಿ ಬೆಂಡೆ ಬಿತ್ತನೆ :

ಕೋಟೆಯ ಕಜಕಡೆಯ ಹೊಳೆಯ ಬಳಿಯ ಗದ್ದೆಯನ್ನು  ಸಿದ್ಧಪಡಿಸಿ ಪ್ರಥಮ ಪ್ರಯತ್ನ ಎಂಬಂತೆ ವಾಣಿಜ್ಯ ಬೆಳೆಯಾಗಿ 12 ಇಂಚು ಉದ್ದ ಬೆಳೆಯುವ ಬೆಂಡೆಯ ಬೀಜವನ್ನು ಬಿತ್ತಲಾಗಿದೆ. ಪ್ರಥಮ ಬಾರಿಗೆ ಒಂದು ಹಿಡಿ ಗೊಬ್ಬರ ಮತ್ತು ಬೆಂಡೆಯ ಬೀಜವನ್ನು ಸೇರಿಸಿ ಸ್ಟೀಲ್‌ ಪೈಪ್‌ ಮೂಲಕ ಸಿದ್ಧಪಡಿಸಲಾಗಿದೆ. ಸೀಡ್ಲಿಂಗ್‌ ಗನ್‌ ಪೈಪ್‌ ಒಳಕ್ಕೆ ಹಾಕಿ ಸಿದ್ಧಪಡಿಸಲಾದ ಗದ್ದೆಯಲ್ಲಿ ಊರಿ ಟ್ರಿಗರ್‌ ಒತ್ತುವ ಮೂಲಕ ನಾಟಿ ಮಾಡಲಾಗುತ್ತದೆ. ಬಿತ್ತನೆ ಬೀಜದ ಜತೆಯೇ ಗೊಬ್ಬರವು ಉಳಿದುಕೊಳ್ಳಲಿದೆ. ಪ್ಲಾಸ್ಟಿಕ್‌ ಹಾನಿಕರ ಎಂದು ಮಲಿcಂಗ್‌ ಶೀಟ್‌ ಬಳಸುತ್ತಿಲ್ಲ. 50 ಸೆಂಟ್ಸ್‌ ಸ್ಥಳದಲ್ಲಿ ಎರಡೂವರೆ ಸಾವಿರ ಬೀಜ ಬಿತ್ತನೆ ಮಾಡಲಾಗಿದ್ದು, ಕನಿಷ್ಠ 4 ಟನ್‌ ಬೆಂಡೆ ಉತ್ಪಾದನೆಯ ಮೂಲಕ ಸುಮಾರು ಮೂರು ಲಕ್ಷ ರೂ.ಗೂ ಅಧಿಕ  ಆದಾಯ ಗಳಿಸುವ ಗುರಿ ಇರಿಸಿ ಕೊಂಡಿದ್ದಾರೆ.

ಬರಡಾಗಿದ್ದ  ಕೃಷಿ ಗದ್ದೆಯಲ್ಲೀಗ ಹಸುರು:

ಹರೀಶ್‌ ರಾಜು ಪೂಜಾರಿ ಬಲು ಅಪರೂಪ ವೆಂಬಂತೆ  ಕೃಷಿ ಮೂಲಕ ಸ್ವಾವಲಂಬಿಯಾಗುತ್ತಿದ್ದಾರೆ. ಬರಡಾಗಿದ್ದ  ಕೃಷಿ ಗದ್ದೆಗಳು ಮತ್ತೆ ಹಸುರಾಗಿ ಕಂಗೊಳಿಸುವಂತಾಗಿದೆ.

ಸೀರೆಯೇ ಭದ್ರ ಕಾವಲು :

ಫಸಲು ಕೊಡುವ ಸಮಯದಲ್ಲಿ ನವಿಲು, ಮುಳ್ಳುಹಂದಿ ಸಹಿತ ಇತರ ಪ್ರಾಣಿಗಳಿಂದ ಉಪಟಳ ಆಗದಂತೆ ಗದ್ದೆಯ ನಾಲ್ಕೂ ಬದಿಗಳಲ್ಲಿ ಹಳೆಯ ಸೀರೆಗಳನ್ನು ಅಳವಡಿಸಿ ಬೆಳೆಯನ್ನು ರಕ್ಷಿಸಲಾಗುತ್ತಿದೆ.

ವಿಜಯ ಆಚಾರ್ಯ ಉಚ್ಚಿಲ

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

Manipal ಕೌಶಲ ಅಭಿವೃದ್ಧಿ ಕೇಂದ್ರ -ಭುವನೇಂದ್ರ ಕಾಲೇಜು ಒಡಂಬಡಿಕೆ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

S. Jaishankar: ಎ.19 ರಂದು ಕೇಂದ್ರ ಸಚಿವ ಜೈಶಂಕರ್ ಉಡುಪಿಗೆ ಭೇಟಿ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.