Udayavni Special

90 ಮನೆಗಳಿಗೆ ಒಂದೇ ಸರಕಾರಿ ಬಾವಿ…!

Team Udayavani, May 24, 2018, 6:00 AM IST

2305kdpp1.jpg

ಕುಂದಾಪುರ: 90 ಮನೆಗಳಿಗೆ ಒಂದೇ ಒಂದು ಸರಕಾರಿ ಬಾವಿ. ಒಂದು ಬೋರ್‌ವೆಲ್‌ ಕೊರೆಯಿಸಿದರೂ ಅದರಲ್ಲಿ ನೀರಿಲ್ಲ. 7-8 ಮನೆಗಳಲ್ಲಿ ಸ್ವಂತ ಬಾವಿಗಳಿದ್ದರೂ, ಅದರಲ್ಲಿ ಹೆಚ್ಚಿನವು ಬತ್ತಿ ಹೋಗಿದೆ. ಇದು ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಭಗತ್‌ನಗರ ಹಾಗೂ ಖಾರ್ವಿಕೆರೆ ಗ್ರಾಮಸ್ಥರ ನೀರಿನ ಬವಣೆ. 

ಬಾವಿ ವಾರದೊಳಗೆ  ಬತ್ತುವ ಸಂಭವ
ಈ ಭಾಗದಲ್ಲಿ ಒಂದೆರಡು ಮಳೆಯಾಗಿದ್ದರೂ ನೀರಿನ ಸಮಸ್ಯೆ ತಪ್ಪಿಲ್ಲ. ಖಾರ್ವಿಕೆರೆಯಲ್ಲಿರುವ ಪಂಚಾಯತ್‌ ಅಧೀನದ ಒಂದು ಬಾವಿಯಿಂದ 25 ಸಾವಿರ ಲೀಟರ್‌ ನೀರಿನ ಸಾಮರ್ಥ್ಯವಿರುವ ಟ್ಯಾಂಕ್‌ಗೆ ಹರಿಸಲಾಗುತ್ತಿದೆ. ಇಲ್ಲಿಂದ ಹೆಚ್ಚೆಂದರೆ ಅರ್ಧ ಗಂಟೆ ನೀರು ಸಿಗುತ್ತದೆ. ಆ ಬಾವಿಯಲ್ಲಿಯೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ವಾರದೊಳಗೆ ಮಳೆಯಾಗದಿದ್ದರೆ ಅದು ಕೂಡ ಬತ್ತಿ ಹೋಗುವ ಸಂಭವವಿದೆ.  

ಮನೆಗೆ 220 ಲೀಟರ್‌ ನೀರು
ಭಗತ್‌ನಗರದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ನಲ್ಲಿ 25 ಸಾವಿರ ಲೀಟರ್‌ ನೀರಿನ ಸಾಮರ್ಥ್ಯವಿದ್ದರೂ, ಅದರಲ್ಲಿ ಕೇವಲ 20 ಸಾವಿರ ಲೀಟರ್‌ ನೀರು ಮಾತ್ರ ತುಂಬುತ್ತಿದೆ. ಇಲ್ಲಿರುವ 90 ಮನೆಗಳಿಗೆ ನಿತ್ಯ 220 ಲೀಟರ್‌ ನೀರು ಮಾತ್ರ ಸಿಗುತ್ತಿದೆ. ಅದು ಕೂಡ ಅರ್ಧ ಗಂಟೆ ಸಿಗುವ ನೀರಲ್ಲಿ ಕೆಲವರಿಗೆ 30 ಕೊಡ ನೀರು ಸಿಕ್ಕರೆ, ಇನ್ನೂ ಕೆಲವರಿಗೆ 10 ಕೊಡಪಾನ ಮಾತ್ರ ಸಿಗುತ್ತಿದೆ. 
 
2 ದಿನಕ್ಕೆ 8 ಕೊಡ 
ನೀರಿನ ಸಮಸ್ಯೆ ಗಂಭೀರವಿದೆಯೆಂದು ಪಂ.ಟ್ಯಾಂಕರ್‌ ನೀರಿನ ಪೂರೈಕೆಗೆ ಮುಂದಾಗಿದ್ದರೂ, 2 ದಿನಕ್ಕೊಮ್ಮೆ ಕೇವಲ 8 ಕೊಡ ನೀರು ಮಾತ್ರ ಸಿಗುತ್ತಿದೆ. ನಳ್ಳಿ ನೀರು ಅರ್ಧಗಂಟೆಗಿಂತ ಜಾಸ್ತಿ ಇರುವುದಿಲ್ಲ. ಟ್ಯಾಂಕರ್‌ ನೀರಿಂದ 8ಕ್ಕಿಂತ ಹೆಚ್ಚು ಕೊಡ ಸಿಗುತ್ತಿಲ್ಲ. ಇದು ಯಾವುದಕ್ಕೂ ಸಾಕಾಗುವುದಿಲ್ಲ ಎನ್ನುವುದು ಗ್ರಾಮಸ್ಥರ ಅಳಲು. 

ಟ್ಯಾಂಕರ್‌ ನೀರಿಗೆ ಭಾರೀ ಬೇಡಿಕೆ
ಪಂಚಾಯತ್‌ನಿಂದ ಕೊಡುವ ಅಲ್ಪ ಪ್ರಮಾಣದ ನೀರು ಸಾಕಾಗದೇ ಇರುವುದರಿಂದ ಈಗ ಖಾಸಗಿ ಟ್ಯಾಂಕರ್‌ ನೀರಿಗೆ ಭಾರೀ ಬೇಡಿಕೆಯಿದೆ. ಆದರೆ ಅದು ತುಂಬಾ ದುಬಾರಿಯೂ ಆಗುತ್ತಿದೆ. ಸಾವಿರ ಲೀಟರ್‌ ನೀರಿಗೆ 350 ರೂ. ವ್ಯಯಿಸಬೇಕಾಗಿದೆ. 

ಬೋರ್‌ವೆಲ್‌ಗೆ ಪ್ರಯತ್ನ
ಬಾವಿ ಹಾಗೂ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ ಬೋರ್‌ವೆಲ್‌ ಕೊರೆಯಿಸಲು ತಾ.ಪಂ., ತಾಲೂಕು ಕಚೇರಿಗೆ ಪತ್ರ ಬರೆಯಲಾಗಿದೆ. ಚುನಾವಣೆ ನೀತಿ ಸಂಹಿತೆಯಿದ್ದುದರಿಂದ ಆಗಿರಲಿಲ್ಲ. ಈಗ ಆದ್ಯತೆ ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. 
– ಪಾರ್ವತಿ, ಹೊಸಾಡು ಗ್ರಾ.ಪಂ. ಪಿಡಿಒ

ದುಡ್ಡುಕೊಟ್ಟು  ನೀರು
ಟ್ಯಾಂಕರ್‌ ನೀರು 2 ದಿನಕ್ಕೊಮ್ಮೆ ಕೊಡುತ್ತಾರೆ. ಅದು ಕೂಡ ಬಂದರೆ ಬಂತು. ಪಂಚಾಯತ್‌ನಿಂದ ಕೊಡುವ ನಳ್ಳಿ ನೀರು ಕುಡಿಯಲು ಕೂಡ ಆಗುವುದಿಲ್ಲ. ಟ್ಯಾಂಕ್‌ ನೀರು ಕರೆಂಟ್‌ ಇಲ್ಲದಿದ್ದರೆ ಅದು ಕೂಡ ಸಿಗುವುದಿಲ್ಲ. ನಾವು ಕುಡಿಯುವ ನೀರಿಗೆ ದುಡ್ಡು ಕೊಟ್ಟು ತರಿಸುತ್ತಿದ್ದೇವೆ.  
– ಪ್ರಕಾಶ್‌, ಖಾರ್ವಿಕೆರೆ ನಿವಾಸಿ 

– ಪ್ರಶಾಂತ್‌ ಪಾದೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹಳ್ಳಿ ರೈತನ ಮಗಳಿಗೆ ಏಳು ಸರಕಾರಿ ಹುದ್ದೆಗಳ ಅವಕಾಶ!

ಹಳ್ಳಿ ರೈತನ ಮಗಳಿಗೆ ಏಳು ಸರಕಾರಿ ಹುದ್ದೆಗಳ ಅವಕಾಶ!

ಐಪಿಎಲ್ 2020: ಮಯಾಂತಿ ಜಾಗಕ್ಕೆ ಬಂದ ಆಸೀಸ್ ಬೆಡಗಿ ನೆರೋಲಿ ಮೆಡೋಸ್ ಹಿನ್ನಲೆ ಗೊತ್ತಾ?

ಐಪಿಎಲ್ 2020: ಮಯಾಂತಿ ಜಾಗಕ್ಕೆ ಬಂದ ಆಸೀಸ್ ಬೆಡಗಿ ನೆರೋಲಿ ಮೆಡೋಸ್ ಹಿನ್ನಲೆ ಗೊತ್ತಾ?

ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ: ನಾಲ್ವರ ಬಂಧನ 14.45 ಲಕ್ಷ ಮೌಲ್ಯದ ಸೊತ್ತು ವಶ

ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ: ನಾಲ್ವರ ಬಂಧನ 14.45 ಲಕ್ಷ ಮೌಲ್ಯದ ಸೊತ್ತು ವಶ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

ಮಣಿಪಾಲ: ರಾತ್ರಿ ವೇಳೆ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ!

ಮಣಿಪಾಲ: ರಾತ್ರಿ ವೇಳೆ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ!

ರಾಯಚೂರಿನಲ್ಲಿ ಮುಂದುವರಿದ ವರುಣಾರ್ಭಟ; ಬದುಕು ಅಸ್ತವ್ಯಸ್ತ

ರಾಯಚೂರಿನಲ್ಲಿ ಮುಂದುವರಿದ ವರುಣಾರ್ಭಟ; ಬೆಳೆ ನಾಶ, ಬದುಕು ಅಸ್ತವ್ಯಸ್ತ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ: ನಾಲ್ವರ ಬಂಧನ 14.45 ಲಕ್ಷ ಮೌಲ್ಯದ ಸೊತ್ತು ವಶ

ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ: ನಾಲ್ವರ ಬಂಧನ 14.45 ಲಕ್ಷ ಮೌಲ್ಯದ ಸೊತ್ತು ವಶ

ಮಣಿಪಾಲ: ರಾತ್ರಿ ವೇಳೆ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ!

ಮಣಿಪಾಲ: ರಾತ್ರಿ ವೇಳೆ ಬೈಕ್ ಸವಾರರನ್ನು ಅಡ್ಡಗಟ್ಟಿ ಚಾಕು ತೋರಿಸಿ ದರೋಡೆ!

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಆರ್ಥಿಕ ನೆರವು ಯಾಚನೆ; ಪೊಲೀಸರ ಹೆಸರಲ್ಲಿ ವಂಚನೆ

6 ತಿಂಗಳ ಬಳಿಕ ಭಕ್ತರಿಗೆ ತೆರೆಯಲಿದೆಯೇ ಶ್ರೀಕೃಷ್ಣಮಠ?

6 ತಿಂಗಳ ಬಳಿಕ ಭಕ್ತರಿಗೆ ತೆರೆಯಲಿದೆಯೇ ಶ್ರೀಕೃಷ್ಣಮಠ?

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ಹಳ್ಳಿ ರೈತನ ಮಗಳಿಗೆ ಏಳು ಸರಕಾರಿ ಹುದ್ದೆಗಳ ಅವಕಾಶ!

ಹಳ್ಳಿ ರೈತನ ಮಗಳಿಗೆ ಏಳು ಸರಕಾರಿ ಹುದ್ದೆಗಳ ಅವಕಾಶ!

ಐಪಿಎಲ್ 2020: ಮಯಾಂತಿ ಜಾಗಕ್ಕೆ ಬಂದ ಆಸೀಸ್ ಬೆಡಗಿ ನೆರೋಲಿ ಮೆಡೋಸ್ ಹಿನ್ನಲೆ ಗೊತ್ತಾ?

ಐಪಿಎಲ್ 2020: ಮಯಾಂತಿ ಜಾಗಕ್ಕೆ ಬಂದ ಆಸೀಸ್ ಬೆಡಗಿ ನೆರೋಲಿ ಮೆಡೋಸ್ ಹಿನ್ನಲೆ ಗೊತ್ತಾ?

ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ: ನಾಲ್ವರ ಬಂಧನ 14.45 ಲಕ್ಷ ಮೌಲ್ಯದ ಸೊತ್ತು ವಶ

ಇನ್ಸುಲೇಟರ್ ವಾಹನದಲ್ಲಿ ಗಾಂಜಾ ಸಾಗಾಟ: ನಾಲ್ವರ ಬಂಧನ 14.45 ಲಕ್ಷ ಮೌಲ್ಯದ ಸೊತ್ತು ವಶ

bng-tdy-3

ಕೋವಿಡ್ ಸೋಂಕಿತರ ಸಾವು ತಡೆಗೆ ಚರ್ಚೆ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.