ಸ್ಥಳಾವಕಾಶವಿಲ್ಲದೆ ಬಳಲುತ್ತಿರುವ ಪಡುಬಿದ್ರಿ ಗ್ರಂಥಾಲಯ

Team Udayavani, Nov 8, 2019, 5:17 AM IST

ಪಡುಬಿದ್ರಿ: ಶಾಲೆಗಳಂತೆಯೇ ಜ್ಞಾನದ ಆಗರವಾಗಿ ಗ್ರಂಥಾಲಯವೂ ಒಂದೂರಿಗೆ ಅಷ್ಟೇ ಮುಖ್ಯ. ಇದೇ ಗ್ರಂಥಾಲಯ ಜನರ ಕೈಗೆಟಕುವಂತಿರಬೇಕು. ಹಲವು ವರ್ಷಗಳ ಹಿಂದೆ ಗ್ರಾ. ಪಂ. ಕಟ್ಟಡದ ನೆಲ ಅಂತಸ್ತಿನಲ್ಲಿದ್ದ ಗ್ರಂಥಾಲಯವನ್ನು 10 ವರ್ಷಗಳ ಹಿಂದೆ ಪೇಟೆಯ ಪ್ರವಾಸಿ ಬಂಗ್ಲೆಗೆ ಸ್ಥಳಾಂತರಿಸಲಾಯಿತು. 8 ವರ್ಷಗಳ ಹಿಂದೆ ಅಲ್ಲಿಂದ ಸ್ಥಳಾಂತರಿಸಿ ಮಾರುಕಟ್ಟೆಯ ಗ್ರಾ. ಪಂ.ನ ವಾಣಿಜ್ಯ ಮಳಿಗೆಯ ಕಟ್ಟಡದ ಮೇಲಂತಸ್ತಿನಲ್ಲಿ ಅವಕಾಶ ಕಲ್ಪಿಸಲಾಯಿತು.

ಹಿರಿಯ ನಾಗರಿಕರೇ ಹೆಚ್ಚಾಗಿ ಬಳಸಿಕೊಳ್ಳುವ ಗ್ರಂಥಾಲಯ ಮಾಳಿಗೆ ಯನ್ನೇರಿದಾಗ ಗ್ರಂಥಾಲಯಕ್ಕೆ ಬಂದು ಹೋಗುವವರ ಮತ್ತು ಓದುವವರ ಸಂಖ್ಯೆ ಕುಂಠಿತವಾಗತೊಡಗಿತು. ವಾರದ ಸಂತೆ ದಿನ, ಮಂಗಳವಾರವಂತೂ ಅಲ್ಲಿನ ಶಬ್ದ ಮಾಲಿನ್ಯದಿಂದಲೇ ಗ್ರಂಥಾಲಯವನ್ನು ಮುಚ್ಚಲೇಬೇಕಾದ ಅನಿವಾರ್ಯತೆ ಹಾಗೂ ಮಳೆಗಾಲದಲ್ಲಿ ಗ್ರಂಥಾಲಯದ ಒಳಗೆ ನೀರು ಸುರಿಯತೊಡಗಿ ಮುಂದೆ ಮಾಡಿನ ಸಿಮೆಂಟ್‌ ಶೀಟಿಗೆ ಹಾನಿಯಾದಾಗ ಅನಿವಾರ್ಯವಾಗಿ ಇದನ್ನು ಪಂಚಾಯತ್‌ ಇರುವಲ್ಲಿಗೇ ವಾಪಾಸು ಬರಗೊಡಲಾಯಿತು.

ಸುಮಾರು 6,235 ಪುಸ್ತಕಗಳು, 558 ಸದಸ್ಯರನ್ನು ಹೊಂದಿರುವ ಗ್ರಾ. ಪಂ. ಗ್ರಂಥಾಲಯದಲ್ಲಿ ಒಂದು ಹಂತದಲ್ಲಿ ದಿನವಹಿ 20ಕ್ಕೂ ಅಧಿಕ ಮಂದಿ ಓದಲು ಆಗಮಿಸುತ್ತಿದ್ದರೆ ಈಗ ಬೆರಳೆಣಿಕೆ ಮಂದಿಯಷ್ಟೇ ಗ್ರಂಥಾಲಯಕ್ಕೆ ಓದಲು ಆಗಮಿಸುತ್ತಾರೆ.

ಶಾಶ್ವತ ವ್ಯವಸ್ಥೆಯಾಗಬೇಕು
ಗ್ರಂಥಾಲಯಕ್ಕೆ ಕಟ್ಟಡದ ಸಮಸ್ಯೆ ನೀಗುವ ನಿಟ್ಟಿನಲ್ಲಿ ನೂತನ ಪಂಚಾ¿åತ್‌ ಕಟ್ಟಡದಲ್ಲೇ ಸ್ಥಳಾವಕಾಶ ನೀಡಬೇಕಾದುದು ವಾಸ್ತವ. ಆದರೆ ಗ್ರಂಥಾಲಯಕ್ಕೆ ಗ್ರಾ. ಪಂ. ಕಚೇರಿ ಕಟ್ಟಡದಲ್ಲಿಯೇ ಅವಕಾಶ ಕಲ್ಪಿಸಲು ಒಳಗೊಳಗೆನೇ ಅಪಸ್ವರವೂ ಕಾಣಿಸಹತ್ತಿದೆ.

ಗ್ರಂಥಾಲಯಕ್ಕೆ ಅನುದಾನದ ಕೊರತೆಯಿಂದ ಕೇವಲ ಒಂದು
ದಿನಪತ್ರಿಕೆ (ಉದಯವಾಣಿ) ಯನ್ನಷ್ಟೇ ಕೊಂಡುಕೊಳ್ಳಲಾಗುತ್ತಿದೆ. ಉಳಿದ ದಿನ ಪತ್ರಿಕೆಗಳು, ಪಾಕ್ಷಿಕ, ಮಾಸಿಕಗಳಿಗೂ ಇಲ್ಲಿ ಅವಕಾಶಗಳನ್ನು ಮಾಡಿಕೊಡಬೇಕಿದೆ. ಸದ್ಯ ತಾತ್ಕಾಲಿಕ ನೆಲೆಯನ್ನು ಕಂಡುಕೊಂಡಿರುವ ಪಡುಬಿದ್ರಿ ಗ್ರಂಥಾಲಯಕ್ಕೆ ಶಾಶ್ವತ ವ್ಯವಸ್ಥೆಯಾಗಬೇಕು.

ಈಗಲೂ ಮೂಟೆಗಟ್ಟಲೆ ಪುಸ್ತಕಗಳು ಗ್ರಂಥಾಲಯಕ್ಕೆ ಬಂದಿದ್ದರೂ ಬಿಡಿಸಲಾಗದ ಗಂಟಲ್ಲಿ ಇವುಗಳಿವೆ. ಓದುಗರಿಗೆ ಅನುಕೂಲವಾಗುವ ರೀತಿಯಲ್ಲಿ ಬದಲಾವಣೆಗಳಾ ಗಬೇಕಿರುವುದು ಅನಿವಾರ್ಯ.

ಗ್ರಂಥಾಲಯ ಗ್ರಾ. ಪಂ. ಅಧೀನಕ್ಕೆ
ಗ್ರಾ. ಪಂ. ನ ನೂತನ ಕಟ್ಟಡದಲ್ಲಿ ಗ್ರಂಥಾಲಯ ಕಚೇರಿಗೂ ಗ್ರಾಮಕರಣಿಕರ ಕಚೇರಿಯನ್ನು ವಿಭಾಗಿಸಿ ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯ ಸರಕಾರ ಗ್ರಂಥಾಲಯ ಇಲಾಖೆಯ ಸುಪರ್ದಿಯಲ್ಲಿದ್ದ ಗ್ರಂಥಾಲಯಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಈಗಾಗಲೇ ಗ್ರಾ. ಪಂ. ಅಧೀನಕ್ಕೆ ವಹಿಸಿದೆ.
– ಪಂಚಾಕ್ಷರಿ ಸ್ವಾಮಿ ಕೆರಿಮಠ,
ಪಡುಬಿದ್ರಿ ಗ್ರಾ. ಪಂ. ಪಿಡಿಒ.

-ಆರಾಮ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ