ಲಕ್ಷಾಂತರ ವಿದ್ಯಾರ್ಥಿಗಳ ವಿದ್ಯಾದಾಹ ನೀಗಿಸಿದ ಶಾಲೆಗೀಗ 157ರ ಸಂಭ್ರಮ

ಪಾದೂರು ಯು.ಬಿ.ಎಂ.ಸಿ ಹಿರಿಯ ಪ್ರಾಥಮಿಕ ಶಾಲೆ

Team Udayavani, Dec 2, 2019, 5:45 AM IST

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಕಾಪು: ಜರ್ಮನಿಯ ಕ್ರೈಸ್ತ ಮಿಶನರಿ ದೊರೆಗಳು 1862ರಲ್ಲಿ ಪಾದೂರಿನಲ್ಲಿ ಸ್ಥಾಪಿಸಿದ ಯುನೈಟೆಡ್‌ ಬಾಸೆಲ್‌ ಮಿಷನ್‌ ಚರ್ಚ್‌ (ಯು.ಬಿ.ಎಂ.ಸಿ) ಹಿರಿಯ ಪ್ರಾಥಮಿಕ ಶಾಲೆಯು 157 ವರ್ಷಗಳ ಸುದೀರ್ಘ‌ ಇತಿಹಾಸವನ್ನು ಹೊಂದಿದ್ದು, 2012ರಲ್ಲಿ ಶತಮಾನೋತ್ತರ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡ ಸಂಭ್ರಮದಲ್ಲಿದೆ.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ವಿದ್ಯಾಭ್ಯಾಸದ ಅರಿವು ಇರದ ಗ್ರಾಮೀಣ ಪರಿಸರದ ಜನರಲ್ಲಿ ಶಿಕ್ಷಣದ ಕ್ರಾಂತಿ ಮೂಡಿಸಿದ ಪಾದೂರು ಯು.ಬಿ.ಎಂ.ಸಿ ಶಾಲೆಯು ಬಂಗ್ಲೆ ಶಾಲೆ ಎಂಬ ಹೆಸರಿಗೂ ಖ್ಯಾತಿಯಾಗಿದೆ. ಬ್ರಿಟಿಷರ ಕಾಲದಲ್ಲಿ ಇದ್ದ ಇನ್‌ಸ್ಪೆಕ್ಷನ್‌ ಬಂಗ್ಲೆ ಮುಂದೆ ಚರ್ಚ್‌ ಶಾಲೆಯಾಗಿ ಪರಿವರ್ತಿತಗೊಂಡಿದ್ದು, ಲಕ್ಷಾಂತರ ವಿದ್ಯಾ ರ್ಥಿಗಳ ಜ್ಞಾನದ ದಾಹವನ್ನು ತೀರಿಸಿದ ಅಕ್ಷರ ಕೇಂದ್ರವಾಗಿದೆ. ಮಜೂರು ಗ್ರಾಮದ ಪಾದೂರು ಗ್ರಾಮದಲ್ಲಿರುವ ಈ ಶಾಲೆಯು ಕಾಪು ತಾಲೂಕಿನ ಅತೀ ಹಿರಿಯ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪಠ್ಯೇತರ ಚಟುವಟಿಕೆಯಲ್ಲೂ ಚುರುಕು
1862ರಲ್ಲಿ ಶಾಲೆ ಸ್ಥಾಪನೆಯಾದಾಗ 1ರಿಂದ 5ನೇ ತರಗತಿಗಳಿದ್ದವು. ಬಳಿಕ 1950ರಿಂದ 1960ರ ಅವಧಿಯಲ್ಲಿ ಆಗಿನ ಮುಖ್ಯೋಪಾಧ್ಯಾಯರಾಗಿದ್ದ ಪಾದೂರು ವಾಸು ಶೆಟ್ಟಿ ಅವರ ಪರಿಶ್ರಮದಿಂದ ಕಿರಿಯ ಪ್ರಾಥಮಿಕ ಶಾಲೆಯಿಂದ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತಿಗೇರಿತು. ಶಾಲೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ, ಆಟೋಟ ಸ್ಪರ್ಧೆಗಳು, ಯೋಗ ತರಗತಿ ಮುಂತಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ನಿಯಮಿತವಾಗಿ ತೊಡಗಿಸಿಕೊಳ್ಳಲು ಶಿಕ್ಷಕಿಯರು ಸತತವಾಗಿ ತರಬೇತುಗೊಳಿಸುತ್ತಿದ್ದಾರೆ. ಪಠ್ಯೇತರ ಕಾರ್ಯಕ್ರಮಗಳಲ್ಲಿ ಆಡಳಿತ ಮಂಡಳಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪಾದೂರು ರೋಟರಿ ಗ್ರಾಮೀಣ ದಳ, ಮಹಿಳಾ ಮಂಡಳಿ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳು ಪ್ರೋತ್ಸಾಹಿಸಿ ನೆರವನ್ನು ನೀಡುತ್ತಾ ಬರುತ್ತಿದ್ದಾರೆ.

40 ವಿದ್ಯಾರ್ಥಿಗಳು
ಪ್ರಸ್ತುತ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 40 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಆಲ್ಫೆ†ಡ್‌ ಸೋನ್ಸ್‌, ವಾಸು ಶೆಟ್ಟಿ ಪಾದೂರು, ಐರಿಸ್‌ ಕುಂದರ್‌, ಕೃಷ್ಣಮೂರ್ತಿ ಭಟ್‌, ಚಂದ್ರಗುಪ್ತ ಡೇವಿಡ್‌, ಎಂ. ಸಿ. ಕುಂದರ್‌ ಮೊದಲಾದವರು ಮುಖ್ಯ ಶಿಕ್ಷಕರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶೈಲಿ ಪ್ರೇಮ ಕುಮಾರಿ ಅವರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೆಮ್ಮೆಯ ಹಳೆ ವಿದ್ಯಾರ್ಥಿಗಳು
ಹೇರೂರು ಅಬ್ಬೆಟ್ಟುಗುತ್ತು ಡಾ| ಎನ್‌.ಎಸ್‌ ಶೆಟ್ಟಿ (ಎಂ.ಡಿ.ಎಫ್‌.ಎ.ಸಿ.ಎಸ್‌.), ಮಂಗಳೂರು ವಿವಿಯ ಸೆನೆಟ್‌ ಸದಸ್ಯ ಪ್ರೊ| ಪಿ. ಶ್ರೀಪತಿ ತಂತ್ರಿ, ಮುಂಬಯಿ ಹೈಕೋರ್ಟ್‌ ನ ವಕೀಲರಾದ ದಿ| ಆನಂದ ವಿ. ಶೆಟ್ಟಿ, ರತ್ನಾಕರ ವಿ. ಶೆಟ್ಟಿ, ಸಂಗೀತ ವಿದ್ವಾನ್‌ ದಿ| ನಾರಾಯಣ ಐತಾಳ್‌ ಪಾದೂರು, ಡಾ| ಹರಿಪ್ರಸಾದ್‌ ಐತಾಳ್‌, ಅಮೇರಿಕಾದ ಇಂಜಿನಿಯರ್‌ ಅಂಡೆಮಾರುಗುತ್ತು ಮನೋಹರ್‌ ಶೆಟ್ಟಿ, ಸಿ.ಎ ರಾಧಾಕೃಷ್ಣ ಉಪಾಧ್ಯಾಯ ಬೆಂಗಳೂರು, ಹೊಟೇಲ್‌ ಉದ್ಯಮಿಗಳಾದ ಮಾಧವ ಶೆಟ್ಟಿ ಹೊಸಮನೆ, ಶಾಂತರಾಜ ಶೆಟ್ಟಿ ವಳದೂರು, ಭಾಸ್ಕರ ಶೆಟ್ಟಿ ವಳದೂರು, ಕಿರುತೆರೆ ನಟ ಕಾರ್ತಿಕ್‌ ಸಾಮಗ ಹೆಮ್ಮೆಯ ಹಳೆ ವಿದ್ಯಾರ್ಥಿಗಳು.

ಕಳೆದ 35 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದೇªನೆ. ಶಾಲೆಯನ್ನು ಉಳಿಸುವಲ್ಲಿ ಸತತ ಪರಿಶ್ರಮ ಪಡುತ್ತಿರುವ ಶಾಲಾಭಿವೃದ್ಧಿ ಸಮಿತಿ, ಶಾಲಾ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ನಿರಂತರ ಸಹಕಾರ ಅವಿಸ್ಮರಣೀಯವಾದುದು.
-ಶೈಲಿ ಪ್ರೇಮಾ ಕುಮಾರಿ, ಮುಖ್ಯೋಪಾಧ್ಯಾಯಿನಿ ಯು.ಬಿ.ಯಂ.ಸಿ. ಹಿ.ಪ್ರಾ. ಶಾಲೆ, ಪಾದೂರು

ನಾನು ಶತಮಾ ನೋತ್ತರ ಸುವರ್ಣ ವರ್ಷ ವನ್ನು ಪೂರೈಸಿರುವ ಈ ಶಾಲೆಯ ಹಳೇ ವಿದ್ಯಾರ್ಥಿ ಎನ್ನಲು ಹೆಮ್ಮೆಯಾಗುತ್ತಿದೆ. ಶಿಸ್ತು, ಪಠ್ಯೇತರ ಚಟುವಟಿಕೆ, ಗುಣ ಮಟ್ಟದ ಶಿಕ್ಷಣ ಶಾಲೆಯ ಉಳಿವಿಗೆ ಸಾಕ್ಷಿಯಾಗಿದೆ. ಶಾಲೆ ಯನ್ನು ಭವಿಷ್ಯಕ್ಕೂ ಉಳಿಸಿಕೊಳ್ಳಲು ಸಂಪೂರ್ಣ ಸಹಕಾರ ನೀಡುತ್ತೇವೆ.
-ಡಾ| ಎನ್‌.ಎಸ್‌. ಶೆಟ್ಟಿ ಅಬ್ಬೆಟ್ಟುಗುತ್ತು,
ಹಳೆ ವಿದ್ಯಾರ್ಥಿ

-ರಾಕೇಶ್‌ ಕುಂಜೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌-ಜನವರಿ ತಿಂಗಳ ಅವಧಿಯಲ್ಲಿ ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ)ಯ ಮೇಲೆ ಚಿನ್ನದ ಆಮದು ಶೇ.9ರಷ್ಟು ಕುಸಿದು ಸುಮಾರು...

  • ಜಗಳೂರು: ಸಾರ್ವಜನಿಕ ಉದ್ಯಾನವನ ಮತ್ತು ರಸ್ತೆ ಮಧ್ಯೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ತೆರವು ಕಾರ್ಯಾಚರಣೆಯನ್ನು ಭಾನುವಾರ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಶಹಾಪುರ: ಶಾಲಾ ದಿನಗಳಲ್ಲಿ ಮಕ್ಕಳಿಗೆ ಶಿಸ್ತು, ಸಂಯಮ ಹಾಗೂ ರಾಷ್ಟ್ರ ಪ್ರಜ್ಞೆ ಅರಿವು ಮಾಡಿಕೊಡುವ ಕರ್ನಾಟಕ ಪೊಲೀಸ್‌ ಇಲಾಖೆ ಯೋಜನೆಯೇ ಎಸ್‌ಪಿಸಿ ತುಂಬಾ ಉಪಯುಕ್ತವಾದದು...

  • ಕಲಬುರಗಿ: ನಮಗೆ ಪೆಟ್ಟು ಬಿದ್ದ ತಕ್ಷಣ "ಅಮ್ಮ' ಎನ್ನುತ್ತೇವೆ ಹೊರತು, "ಅಂಟಿ' ಅನ್ನಲ್ಲ. ಅಮ್ಮ ಎನ್ನುವ ಪದ ಹೃದಯದಿಂದ ಬರುವಂತದ್ದು, ಹಾಗೆ ಕನ್ನಡ ಭಾಷೆ ಕಣ- ಕಣದಲ್ಲಿ...