ಉಕ್ಕಿ ಹರಿಯಿತು ಜನಸಾಗರ… ಕಿರಿದಾಯಿತು ಶ್ರೀಕೃಷ್ಣ ನಗರಿ!

Team Udayavani, Nov 27, 2017, 9:07 AM IST

27-5.jpg

ಉಡುಪಿ: ಕಣ್ಣು ಹಾಯಿಸಿದಷ್ಟು ದೂರಕ್ಕೂ ಕೇಸರಿ ಧ್ವಜಧಾರಿಗಳು. ದಶ ದಿಕ್ಕುಗಳಲ್ಲಿಯೂ ಉತ್ಸಾಹ, ಜೈಕಾರ, ಉದ್ಘೋಷ ದೊಂದಿಗೆ ಹರಿದು ಬಂದ ಜನಸಾಗರದ ಎದುರು ಪೊಡವಿಗೊಡೆಯನ ನಾಡೇ ಕಿರಿದಾಗಿ ಹೋಯಿತು !

ನಡುನೆತ್ತಿಯಿಂದ ನೇಸರ ಜಾರುತ್ತಿದ್ದಂತೆಯೇ ಉಡುಪಿಯ ಐತಿಹಾಸಿಕ ಸ್ಥಳ ಜೋಡುಕಟ್ಟೆ ಕೇಸರಿಮಯವಾಗಿ ಲಕ್ಷ ಹಿಂದೂ ಬಾಂಧವರ ಸಮಾಗಮಕ್ಕೆ ಸಾಕ್ಷಿಯಾಯಿತು. ಉಡುಪಿಯ ಭವ್ಯ ಇತಿಹಾಸದ ಪುಟದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡಬಹುದಾದ ಸನ್ನಿವೇಶವೊಂದು ಹಿಂದೂ ಸಮಾಜೋತ್ಸವದ ಶೋಭಾಯಾತ್ರೆಯ ರೂಪದಲ್ಲಿ ಸೃಷ್ಟಿಯಾಯಿತು.

ಸರಿಯಾಗಿ 2.30ರ ವೇಳೆಗೆ ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್‌ಜಿ ಅವರಿಂದ ಚಾಲನೆ ಪಡೆದು ಕೊಂಡ ಭವ್ಯ ಶೋಭಾಯಾತ್ರೆ ಸಾವಿರ ಭಗವಾಧ್ವಜಧಾರಿಗಳಿಂದ ತುಂಬಿ ಕೊಂಡಿತು. ಮುಂಚೂಣಿಯಲ್ಲಿದ್ದ ಸುಧರ್ಮ ರಥವನ್ನು ಅನು ಸರಿಸಿಕೊಂಡು ಸಾಗಿದ ಕಲಶ ಹೊತ್ತ ಮಹಿಳೆಯರು, ಜಿಲ್ಲಾ ಭಜನ ಮಂಡಳಿಗಳ ಒಕ್ಕೂಟದ ನೇತೃತ್ವದಲ್ಲಿ ಭಜನ ತಂಡಗಳ 1,500ಕ್ಕೂ ಅಧಿಕ ಮಹಿಳಾ ಸದಸ್ಯರು ಸೇರಿದಂತೆ 2,000ದಷ್ಟು ಸದಸ್ಯರು ಕೇಸರಿ ಪೇಟ, ಪಂಚೆ, ಸೀರೆ, ಶಾಲುಗಳಿಂದ ಗಮನ ಸೆಳೆದರು. ದಾರಿಯುದ್ದಕ್ಕೂ ಕುಣಿತದೊಂದಿಗೆ ಭಜನೆ ಹಾಡಿದರು. ವಿಹಿಂಪ ಮುಖಂಡರು ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಕೇರಳದ ಚೆಂಡೆ, ನಾಸಿಕ್‌ ಬ್ಯಾಂಡ್‌, ತಾಸೆ, ಕೊಂಬು ಕಹಳೆ, ತಮ್ಕಿ, ಶಂಖ, ಜಾಗಟೆ ಸದ್ದು ಹಿಂದೂಜಾಗೃತಿಯನ್ನು ಬಡಿ ದೆಬ್ಬಿಸುವಂತಿತ್ತು. ಸಾಧ್ವಿ ರಿಥಂಬರ, ಯೋಗಿ ಆದಿತ್ಯನಾಥ, ಛತ್ರಪತಿ ಶಿವಾಜಿ ಮೊದ ಲಾದವರ ಚಿತ್ರಗಳನ್ನು ಒಳಗೊಂಡ ಸ್ತಬ್ಧಚಿತ್ರ, ರಾಮ, ಲಕ್ಷ್ಮಣರನ್ನು ತನ್ನ ಕೈಗಳಲ್ಲಿ ಎತ್ತಿ ಹಿಡಿದ ಹನುಮಂತನ ಸ್ತಬ್ಧ ಚಿತ್ರ, ಶಿವಾಜಿ ಮಹಾರಾಜ್‌, ಪೂತನಿ ವೇಷಧಾರಿ ಗಳನ್ನೊಳಗೊಂಡ ಸ್ತಬ್ಧಚಿತ್ರ ಗಳು ಗಮನ ಸೆಳೆದವು. ಮುಸ್ಲಿಂ ಬಾಂಧವ ರಿಂದ ಸೇರಿದಂತೆ ವಿವಿಧೆಡೆ ಹೊಟೇಲು, ಸಂಘ- ಸಂಸ್ಥೆಗಳ ವತಿಯಿಂದ ಅಲ್ಲಲ್ಲಿ ಉಚಿತ ತಂಪುಪಾನೀಯ ವ್ಯವಸ್ಥೆ ಮಾಡಲಾಗಿತ್ತು.

ಸಂತರ ಸಾಥ್‌
ಕೆಲವು ಸಂತರು ಜೋಡುಕಟ್ಟೆಯಲ್ಲೇ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರೆ ಅನೇಕರು “ಧರ್ಮಸಂಸದ್‌’ ಸ್ಥಳವಾದ ಕಲ್ಸಂಕದಲ್ಲಿ ಸೇರಿದರು. ಮಿಕ್ಕುಳಿದವರು ಸಮಾಜೋತ್ಸವ ಸ್ಥಳಕ್ಕೆ ಆಗಮಿಸಿದರು. ಪೇಜಾವರ ಹಿರಿಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಗಾಲಿಕುರ್ಚಿಯಲ್ಲೇ ಸಾಗಿ ಬಂದರು. ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥರು ಅಶ್ವಾರೋಹಿಯಾಗಿ ಬಂದರು. 

ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ, ಮಹಡಿಗಳ ಮೇಲೆ ಕಾತರದಿಂದ ಕಾಯುತ್ತಿದ್ದ ಜನತೆ ಜನರಾಶಿ ಕಂಡು ಬೆರಗಾದರು. ಸರಿ ಸುಮಾರು 5 ಕಿ.ಮೀ. ಸಾಗಿದ ಶೋಭಾ ಯಾತ್ರೆ ಇಡೀ ಉಡುಪಿಯನ್ನೇ ತನ್ನತ್ತ ಕೇಂದ್ರೀಕರಿಸಿಕೊಂಡಿತು.

ಆಬಾಲವೃದ್ಧರ ಉತ್ಸಾಹ, ಉಲ್ಲಾಸ
ಯುವಕ ಯುವತಿಯರೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಾದರೂ ಮಕ್ಕಳು, ಹಿರಿಯರು ಸೇರಿ ದಂತೆ ಬಹುತೇಕ ಎಲ್ಲ ವಯೋಮಾನದವರೂ ಶೋಭಾ ಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಮಹಿಳೆ ಯರ ಸಂಖ್ಯೆ ಕೂಡ ಅಧಿಕವಾಗಿತ್ತು. “ಬಜರಂಗ್‌…ಬಜರಂಗ್‌’, “ಜೈ ಜೈ ಹನುಮಾನ್‌…’ ಮೊದಲಾದ ಡಿ.ಜೆ ಹಾಡು ಗಳಿಗೆ ಯುವಕ ಯುವತಿಯರು ಹೆಜ್ಜೆ ಹಾಕಿದರು. ಶೋಭಾ ಯಾತ್ರೆಯ ಹಾದಿಯಲ್ಲಿ ಸಾವಿರ ಸಾವಿರ ಸಂಖ್ಯೆ ಯಲ್ಲಿ  ಭಗವಾಧ್ವಜಗಳನ್ನು ವಿತರಿಸಲಾಯಿತು.

ಸಾಗಿದಷ್ಟು   ಸಾಲು 
ಜೋಡುಕಟ್ಟೆಯಿಂದ ಶಿರಿಬೀಡು ವರೆಗೆ ಒಂದೇ ರಸ್ತೆಯಲ್ಲಿ, ಅಲ್ಲಿಂದ ಮುಂದಕ್ಕೆ ಎಂಜಿಎಂ ಮೈದಾನ ವರೆಗೆ ಎರಡೂ ವಿಶಾಲ ರಸ್ತೆಗಳಲ್ಲಿ ಶೋಭಾಯಾತ್ರೆ ಸಾಗಿತು. ಶೋಭಾಯಾತ್ರೆಯ ತುದಿಭಾಗ ಮೈದಾನ ತಲುಪಿದರೂ ಅದರ ಕೊನೆ ಮಾತ್ರ ಜೋಡುಕಟ್ಟೆಯಲ್ಲೇ ಉಳಿದಿತ್ತು. ಅಷ್ಟುದ್ದದ ಸಾಲು ಭವ್ಯ ಶೋಭಾಯಾತ್ರೆಯದ್ದಾಗಿತ್ತು.

ನಾವೆಲ್ಲ  ಒಂದು, ನಾವೆಲ್ಲ  ಹಿಂದೂ
“ಧರ್ಮಸಂಸದ್‌’ ಅಸ್ಪೃಶ್ಯತೆ ವಿರುದ್ಧ ಸಮರ ಸಾರುವ ಸಂದೇಶ ಹೊರಡಿಸಿದೆ. ಅಂತೆಯೇ ಶೋಭಾಯಾತ್ರೆಯಲ್ಲಿಯೂ ಸಮಾನತೆಯ ಘೋಷಗಳು ಮೊಳಗಿದವು. “ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು’ ಎನ್ನುತ್ತಾ ಯುವಪಡೆ ಮುನ್ನುಗ್ಗುತ್ತಿತ್ತು. ಇದರ ಜತೆಗೆ “ರಾಮನ ಪಾದದ ಮೇಲಾಣೆ ಮಂದಿರ ನಿರ್ಮಾಣ ಅಲ್ಲೇನೆ’, “ಹಿಂದೂ ಎನ್ನಲು ಭಯವೇಕೆ?’, “ಬೋಲೋ ಭಾರತ್‌ ಮಾತಾಕಿ ಜೈ’, “ಕಟ್ಟುವೆವು ಕಟ್ಟುವೆವು ರಾಮಮಂದಿರ ಕಟ್ಟುವೆವು’ ಎಂಬ ಘೋಷಣೆಗಳು ಮುಗಿಲು ಮುಟ್ಟುವಂತಿತ್ತು. ಕೆಲವೊಂದು ಯುವಕರ ಗುಂಪುಗಳು ಪಾಕಿಸ್ಥಾನದ ವಿರುದ್ಧವೂ ದನಿ ಎತ್ತಿದವು.

ಹಿಂದುತ್ವ, ರಾಷ್ಟ್ರೀಯತೆ, ಸೌಹಾರ್ದ, ಸ್ವಚ್ಛತೆ
ಹಿಂದುತ್ವದ ಘೋಷಣೆ ದಟ್ಟವಾಗಿತ್ತು. ಶೋಭಾಯಾತ್ರೆ ಹಾದಿ ಯಲ್ಲಿ ಅಳವಡಿಸಿದ ಬ್ಯಾನರ್‌ಗಳಲ್ಲಿ ರಾಷ್ಟ್ರೀಯತೆ ಮತ್ತು ಪರಿಸರ ಸಂರಕ್ಷಣೆ ಯನ್ನು ಕೂಡ ಉಲ್ಲೇ ಖೀಸ ಲಾಗಿತ್ತು. ಮುಸ್ಲಿಂ ಬಾಂಧವರು ತಂಪು ಪಾನೀಯ ನೀಡುವ ಮೂಲಕ ಸೌಹಾರ್ದದ ಬೆಸುಗೆಯಾಯಿತು. ಶೋಭಾಯಾತ್ರೆ ಆರಂಭ  ವಾಗುವ ಮೊದಲು ದಾರಿಯುದ್ದಕ್ಕೂ ನೀರು ಚಿಮುಕಿಸಿ ಸ್ವತ್ಛಗೊಳಿಸ ಲಾಯಿತು. ಶೋಭಾಯಾತ್ರೆ ಸಾಗಿದ ಕೂಡಲೇ ರಸ್ತೆಯ ಕಸಗಳನ್ನು ಹೆಕ್ಕಿ ಸ್ವತ್ಛಗೊಳಿಸಲಾಯಿತು.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

12-

Gangolli: ರಿಕ್ಷಾ-ಕಾರು ಢಿಕ್ಕಿ

8-shirva

Shirva: ವಾಕಿಂಗ್‌ ವೇಳೆ ಕುಸಿದು ಬಿದ್ದು ಸಾವು

5-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.