ಪಡುಬಿದ್ರಿ : ಪೆಟ್ರೋಲ್ ಬಂಕ್ ಮ್ಯಾನೇಜರ್ ಸಾವು
Team Udayavani, Jul 5, 2022, 12:32 AM IST
ಪಡುಬಿದ್ರಿ : ಮಣಿಪಾಲ ಸರಳೇಬೆಟ್ಟು ನಿವಾಸಿ, ಬಡಾ ಎರ್ಮಾಳಿನ ಬುಧಗಿ ಪೆಟ್ರೋಲ್ ಬಂಕ್ ಮ್ಯಾನೇಜರ್ ಮಹೇಶ ಕುಮಾರ ಜಿ. ಸಾಲಿಯಾನ್ (58) ಅವರು ಪೆಟ್ರೋಲ್ ಬಂಕಿನ ಕಚೇರಿ ನಿವಾಸದಲ್ಲಿ ಸೋಮವಾರ ಮೃತಪಟ್ಟಿದ್ದಾರೆ.
ಅವರಿಗೆ ಉಸಿರಾಟದ ತೊಂದರೆ ಇತ್ತು. ಅವರು ಕಳೆದೆರಡು ವರ್ಷಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ರವಿವಾರ ಮಧ್ಯರಾತ್ರಿಯ ವೇಳೆ ಮೂತ್ರ ವಿಸರ್ಜನೆ ಮಾಡಿ ಬಂದು ಮಲಗಿದ್ದರು. ಮುಂಜಾನೆ ಅವರ ಸಹೋದ್ಯೋಗಿ ಚೇತನ್ ಅವರು ಎದ್ದು ಗಮನಿಸಿದಾಗ ಮಹೇಶ ಕುಮಾರ್ ಉಸಿರಾಡುವ ಸ್ಥಿತಿಯಲ್ಲಿರಲಿಲ್ಲ. ತತ್‌ಕ್ಷಣ ಮಾಲಕರಿಗೆ ವಿಷಯ ತಿಳಿಸಿದ ಚೇತನ್, ಬಳಿಕ ಮಹೇಶ್ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಶ್ವಾಸಕೋಶದ ಕಾಯಿಲೆಯಿಂದ ಅಥವಾ ಇನ್ನಾವುದೋ ಕಾಯಿಲೆಯಿಂದ ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ಕಿ ಕಳ್ರು ಕೊರೊನಾ ಕಾಲದಲ್ಲಿ ಮಲಗಿದ್ರಾ?: ಪ್ರಿಯಾಂಕ್
ಮಳೆಗಾಲದ ಆರೋಗ್ಯಕ್ಕೆ ಮನೆ ಮದ್ದು…ಆಯುರ್ವೇದದ ಪಂಚಕರ್ಮ ಚಿಕಿತ್ಸೆಯ ಮಹತ್ವವೇನು?
ಸೊರಬ: ಅಂಗನವಾಡಿ ಕೇಂದ್ರದ ಮೇಲೆ ಉರುಳಿದ ಮರ; ಅದೃಷ್ಟವಶಾತ್ ಮಕ್ಕಳು ಪಾರು
ಬೆಳ್ಳಿ ಗೆದ್ದ ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿವ ಡಾ.ನಾರಾಯಣಗೌಡ ಅಭಿನಂದನೆ
ಮಾರ್ಕೋನಹಳ್ಳಿ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ : ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್