ಪರ್ಕಳ: ಕಮರಿಗೆ ಉರುಳಿದ ಕೋಳಿ ಸಾಗಾಟದ ಪಿಕಪ್ ವಾಹನ
Team Udayavani, Nov 9, 2020, 2:08 PM IST
ಉಡುಪಿ: ಕೋಳಿ ಸಾಗಾಟ ಮಾಡುವ ಪಿಕಪ್ ವಾಹನವೊಂದು ಕಮರಿಗೆ ಉರುಳಿಬಿದ್ದ ಘಟನೆ ಇಲ್ಲಿಗೆ ಸಮೀಪದ ಪರ್ಕಳದಲ್ಲಿ ಸೋಮವಾರ ನಡೆದಿದೆ.
ಆಗುಂಬೆಯಿಂದ ಮಣಿಪಾಲದ ಫಾರ್ಮ್ ಗೆ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವು ಪರ್ಕಳ ದೇವಿ ನಗರದ ಮೊದಲ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ನಾಮಫಲಕದ ಜೊತೆಗೆ ಕಮರಿಗೆ ಉರುಳಿದೆ.
ಇದನ್ನೂ ಓದಿ:ಬಂಟ್ವಾಳ: ಕೋವಿಡ್ ನಿಂದ ಲಕ್ಷಾಂತರ ಹಣ ಬಂದಿದೆ ಎಂದು ನಂಬಿಸಿ ವೃದ್ಧೆಯ ಬಂಗಾರ ದೋಚಿದ ಅನಾಮಿಕ!
ವಾಹನದ ಚಾಲಕ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ. ಕೋಳಿಗಳನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಿ ಕೊಂಡೊಯ್ಯಲಾಗಿದೆ.
ಈ ರಸ್ತೆ ಅಗಲೀಕರಣವಾದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ವೈಜ್ಞಾನಿಕ ರೀತಿಯಲ್ಲಿ ಸರಿಯಾದ ಪರಿಹಾರವನ್ನು ಸಂಬಂಧಪಟ್ಟ ಇಲಾಖೆ ಕಂಡುಕೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.