ಪ್ರಭಾಕರ ಆಚಾರ್ಯರ “ಧ್ವನಿ ಆ್ಯಂಡ್ ಎಪಿಫನಿ’ ಕೃತಿ ಬಿಡುಗಡೆ
Team Udayavani, Mar 11, 2018, 6:50 AM IST
ಉಡುಪಿ: ಮಣಿಪಾಲ ಯುನಿವರ್ಸಿಟಿ ಪ್ರಸ್ ಹೊರತಂದ 123ನೇ ಪುಸ್ತಕ ಆಂಗ್ಲ ಪ್ರಾಧ್ಯಾಪಕ ಪ್ರಭಾಕರ ಆಚಾರ್ಯ ಅವರ “ಧ್ವನಿ ಆ್ಯಂಡ್ ಎಪಿಫನಿ’ ಕೃತಿ ಮಾ. 10ರಂದು ಎಂಜಿಎಂ ಕಾಲೇಜಿನ ಧ್ವನ್ಯಾಲೋಕದಲ್ಲಿ ಲೋಕಾರ್ಪಣೆಗೊಂಡಿತು.
ಇದರಲ್ಲಿ ಹನ್ನೆರಡು ಪ್ರಬಂಧಗಳಿವೆ. ಇವುಗಳ ಪೈಕಿ ಏಳು ಪ್ರಬಂಧ ಕವಿತೆಯ ಬಗ್ಗೆ, ಎರಡು ಕಲ್ಪಿತ ಕಥೆಗಳ ಬಗ್ಗೆ , ಮೂರು ಇತರ ವಿಷಯಗಳ ಆಧಾರವಾಗಿವೆ. ಡಿ.ಡಿ. ಕೋಸಂಬಿ ಅವರ ಮಿಥ್ ಆ್ಯಂಡ್ ರಿಯಾಲಿಟಿಯೂ ವಸ್ತುವಾಗಿ ಹೊರಹೊಮ್ಮಿದೆ ಎಂದು ಭಾಷಾ ತಜ್ಞ ಕೆ.ಪಿ. ರಾವ್ ಹೇಳಿದರು.
ಪ್ರಭಾಕರ ಆಚಾರ್ಯ ಅವರ ಎಲ್ಲ ಪ್ರಬಂಧಗಳಲ್ಲೂ ಅಂತರ್ ಸಂಬಂಧವಿದೆ. ಲಯಬದ್ಧವಾದ ಶ್ರುತಿ ಇದೆ. ವಿಚಾರ ವನ್ನು ಸ್ಪಷ್ಟವಾಗಿ ನಿರೂಪಿಸುವ ಅದಮ್ಯ ಶಕ್ತಿ ಇದೆ. ಆಂಗ್ಲ ಭಾಷೆಯಲ್ಲಿ ಉತ್ತಮ ಪ್ರಭುತ್ವ ಸಾಧಿಸಿದ ಕೃತಿಕಾರರ ನಿರೂಪಣೆ ಹೊಸತನವನ್ನು ಹುಡುಕುವ ಹಸಿವು ಕಾಣಿಸುತ್ತದೆ ಎಂದು ಮಣಿಪಾಲ ಎಂಸಿಪಿಎಚ್ನಲ್ಲಿರುವ ಕೆ.ಕೆ. ಹೆಬ್ಟಾರ್ ಕಲಾ ಗ್ಯಾಲರಿಯ ಕ್ಯುರೇಟರ್ ಸೃಜನಾ ಕಾಯ್ಕಿಣಿ ಹೇಳಿದರು.
ಪ್ರೊ| ಪ್ರಭಾಕರ ಆಚಾರ್ಯ ಅವರ ಆಂಗ್ಲ ಬರಹಗಳು ಎಲ್ಲರಿಗೂ ಹೆಮ್ಮೆ ತಂದಿವೆ. ಭಾಷೆಯ ಮೇಲೆ ಅಪಾರ ಹಿಡಿತ ಹೊಂದಿದ್ದ ಅವರ ಪ್ರಬಂಧಗಳು ಅನೇಕರಿಗೆ ಪ್ರೇರಣೆ ನೀಡಿವೆ ಎಂದು ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಸಂಧ್ಯಾ ನಂಬಿಯಾರ್ ಹೇಳಿದರು. ಮಣಿಪಾಲ ವಿ.ವಿ. ಪ್ರಕಾಶನದ ಗ್ರೇಸಿ ಸಂಝಾತ್ಸಮ್ ಸ್ವಾಗತಿಸಿ, ಸೋಹಿನಿ ರಾಜ್ಯಂಗ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ