ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ;ಒಂದೆಡೆ ನಮಾಜ್‌-ಇನ್ನೊಂದೆಡೆ ಪೂಜೆ

Team Udayavani, Jun 26, 2017, 11:48 AM IST

Srikrishna-U-Vani-photo.jpg

ಉಡುಪಿ: ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಮ್ಮ ಮೂರನೆಯ
ಪರ್ಯಾಯದಲ್ಲಿ (1984-85) ರಾಜಾಂಗಣದಲ್ಲಿ ಈದ್‌ ಹಬ್ಬದ ಪ್ರಯುಕ್ತ ಸೌಹಾರ್ದ ಸಮಾವೇಶವನ್ನು ನಡೆಸಿದ್ದರೆ
ಈಗ ಐದನೆಯ ಪರ್ಯಾಯದಲ್ಲಿ ಇದೇ ಪ್ರಥಮ ಬಾರಿಗೆ ಈದ್‌ ಉಪಾಹಾರ ಕೂಟವನ್ನು ಶನಿವಾರ ಏರ್ಪಡಿಸಿದರು.

ಪೇಜಾವರ ಶ್ರೀಗಳು ಏನೇ ಮಾಡಿದರೂ ಅದು ಐತಿಹಾಸಿಕವಾಗಿರುತ್ತದೆ. ನಾನು ರಾಜ್ಯ ಸರಕಾರದ ಪ್ರತಿನಿಧಿಯಾಗಿ ಶ್ರೀಗಳವರನ್ನು ಅಭಿನಂದಿಸುತ್ತೇನೆ ಎಂದು ರಾಜ್ಯ ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫ‌ೂರ್‌ ಹೇಳಿದರು. ಇದೊಂದು ಐತಿಹಾಸಿಕ ಘಟನೆ. ಜಗದೊಡೆಯ ಸೃಷ್ಟಿಕರ್ತ ಕೊನೆಯ ಉಪವಾಸದ ದಿನ ಈ ಘಟನೆಯನ್ನು ಆಗುವಂತೆ ಮಾಡಿದ್ದಾನೆ. ಪೇಜಾವರ ಮಠಾಧೀಶರು ಮತ್ತು ಕರಾವಳಿಯ ಎಲ್ಲ ಖಾಝಿಗಳು
ಸೇರಿ ಶಾಂತಿ ನೆಲೆಸುವಂತೆ ಮಾಡಬೇಕು, ಕರಾವಳಿಯನ್ನು ರಕ್ಷಿಸಬೇಕು ಎಂದು ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ
ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ ಹೇಳಿದರು.

ಸರ್ವೇ ಭವಂತು ಸುಖಿನಃ
“ಸರ್ವೇ ಭವಂತು ಸುಖೀನಃ…’ (ಅರ್ಥ: ಎಲ್ಲರೂ ಆರೋಗ್ಯದಿಂದಿರಬೇಕು, ಎಲ್ಲರೂ ದುರಾಸೆಯಿಂದ
ಮುಕ್ತರಾಗಿರಬೇಕು, ಸೌಹಾರ್ದದಿಂದ ಬದುಕಬೇಕು, ರೋಗಮುಕ್ತರಾಗಿರಬೇಕು) ಎಂಬ ಶ್ಲೋಕವನ್ನು
ಹೇಳುವ ಮೂಲಕ ಪೇಜಾವರ ಶ್ರೀಗಳು ಆಶೀರ್ವಚನ ಆರಂಭಿಸಿದರು. ಜಗತ್ತನ್ನು ಸೃಷ್ಟಿಸಿದ ದೇವರು ಒಬ್ಬನೇ.
ಒಬ್ಬರು ನಮಸ್ಕಾರವೆಂದರೆ, ಇನ್ನೊಬ್ಬರು ನಮಾಜ್‌  ಎನ್ನುತ್ತಾರೆ. ದೇಶದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದ
ನೆಲೆಗೊಳ್ಳಬೇಕು ಎಂದರು.

ಶ್ರೀಕೃಷ್ಣ ಮಠಕ್ಕೆ ಮುತ್ತಿಗೆ ಹಾಕುತ್ತೇವೆಂದಾಗ ಮೊದಲು ಇದರ ವಿರುದ್ಧ ಹೇಳಿಕೆ ನೀಡಿದವರು ಮುಸ್ಲಿಮರು
ಎಂಬುದನ್ನು ಶ್ರೀಗಳು ಸ್ಮರಿಸಿದರು. ಪೇಜಾವರ ಕಿರಿಯ ಶ್ರೀಗಳು ಉಪಸ್ಥಿತರಿದ್ದರು. ಅಂಜುಮನ್‌ ಮಸೀದಿಯ
ಮುಖ್ಯಸ್ಥ ಮಹಮ್ಮದ್‌ ಶೀಶ್‌, ಇಮಾಮ್‌ ಇನಾಯತುಲ್ಲಾ, ಮುಂದಾಳುಗಳಾದ ಅಬುಬಕ್ಕರ್‌ ವೆನಿಲ್ಲಾ, ಸಂಘಟಕ
ಆರಿಫ್, ಅಬ್ದುಲ್‌ ರೆಹಮಾನ್‌ ಮಣಿಪಾಲ, ಅಬೂಬಕರ್‌ ಪರ್ಕಳ ಉಪಸ್ಥಿತರಿದ್ದರು. ಬಿಜೆಪಿ ಮುಂದಾಳು ಗುರ್ಮೆ
ಸುರೇಶ್‌ ಶೆಟ್ಟಿ ವಿಷಯ ತಿಳಿದು ಭೇಟಿ ನೀಡಿದರು. 

ಈದ್‌ ಉಪಾಹಾರದ ಮೆನು
ಉಪವಾಸ ಬಿಡುವಾಗ ವಿವಿಧ ಹಣ್ಣುಗಳು, ಒಣಹಣ್ಣುಗಳಿದ್ದರೆ ಬಳಿಕ ಉಪಾಹಾರದಲ್ಲಿ ತುಪ್ಪದ ಅನ್ನ ( ರೈಸ್‌), ಮೊಸರು ಅವಲಕ್ಕಿ, ಮೋಹನ ಲಾಡು, ಚಕ್ಕುಲಿ, ಕೀರು ಪಾಯಸ, ಗೋಳಿಬಜೆ, ಆದ್ರಾìನಕ್ಷತ್ರವಾದ ಕಾರಣ
ಹುರುಳಿ ಧಾನ್ಯದೊಂದಿಗೆ (ಕುಡು) ಆದ್ರಾ ಸೊಪ್ಪಿನ (ಮೊನ್ನಾಯ್‌ ಸೊಪ್ಪು) ಸಾರು ಇತ್ಯಾದಿ ಬಗೆಗಳಿದ್ದವು.

ಒಂದೆಡೆ ನಮಾಜ್‌- ಇನ್ನೊಂದೆಡೆ ಪೂಜೆ
ಮುಸ್ಲಿಂ ಬಂಧುಗಳು ಅನ್ನಧರ್ಮ ಸಭಾಂಗಣದಲ್ಲಿ ಉಪವಾಸವನ್ನು ಮುಗಿಸಿದ ಬಳಿಕ ಉಡುಪಿ ಅಂಜುಮಾನ್‌ ಮಸೀದಿ ಇಮಾಮ್‌ ಇನಾಯತುಲ್ಲಾ ನೇತೃತ್ವದಲ್ಲಿ ಈದ್‌ ನಮಾಜ್‌ ನಡೆಸಿದರು. ಇದೇ ವೇಳೆ ಶ್ರೀಕೃಷ್ಣ ಮಠದಲ್ಲಿ ಪೇಜಾವರ ಶ್ರೀಗಳು ಚಾಮರಸೇವೆಯನ್ನು ನಡೆಸುತ್ತಿದ್ದರು.

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.