ಪ್ರಧಾನಿಯೇ ಜನಸಾಮಾನ್ಯರಿಗೆ ಪ್ರೇರಣೆ: ಪ್ರಕಾಶ್‌

ಸ್ವಚ್ಛ ಭಾರತದ ಕನಸು ಹೇಗೆ ನನಸಾದೀತು?: ಕಾರ್ಯಾಗಾರ

Team Udayavani, Jun 20, 2019, 6:11 AM IST

ಬೆಳ್ಮಣ್‌: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ ಉಡುಪಿ ಮತ್ತು ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್‌ ಕ್ಲಬ್‌ ಇದರ ಸಹಯೋಗದಲ್ಲಿ ಸ್ವಚ್ಛ ಭಾರತದ ಕನಸು ಹೇಗೆ ನನಸಾದೀತು? ಎಂಬ ವಿಷಯದ ಕುರಿತು ಕಾರ್ಯಾಗಾರ ಬುಧವಾರ ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್‌ ನಾಯ್ಕ ಮಾಹಿತಿ ನೀಡಿ, ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವ ಉದ್ದೇಶದಿಂದ ದೇಶಾದ್ಯಂತ ಸ್ವತ್ಛ ಭಾರತ ಅಭಿಯಾನ ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಪ್ರಧಾನ ಮಂತ್ರಿಗಳೇ ಮುಂದಾಗಿ ಕಸಬರಿಕೆ ಹಿಡಿದು ಗುಡಿಸಲು ಮಂದಾಗಿರುವುದು ಜನಸಾಮಾನ್ಯರನ್ನೂ ಪ್ರೇರೇಪಿಸಿದೆ ಎಂದರು.

ಫ್ರೆಂಡ್ಸ್‌ ಕ್ಲಬ್‌ನ ಅಧ್ಯಕ್ಷ ನಂದಳಿಕೆ ರಾಜೇಶ್‌ ಕೋಟ್ಯಾನ್‌, ಕಾಲೇಜಿನ ಪ್ರಾಂಶುಪಾಲ ಸುದರ್ಶನ್‌ ವೈ. ಎಸ್‌., ಫೌÅಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಸವಿತಾ, ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್‌ ಶೆಟ್ಟಿ, ಉಡುಪಿ ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ವಿಲ್ಫೆ†ಡ್‌ ಡಿ’ಸೋಜಾ, ನೆಹರೂ ಯುವ ಕೇಂದ್ರದ ತಾಲೂಕು ಸಂಯೋಜಕ ಉದಯ ಮರಾಠಿ, ಸಂಘದ ಸಂಚಾಲಕ ಅಬ್ಬನಡ್ಕ ಸಂದೀಪ್‌ ವಿ. ಪೂಜಾರಿ, ಸ್ಥಾಪಕಾಧ್ಯಕ್ಷ ವಿಟuಲ ಮೂಲ್ಯ, ಕಾರ್ಯದರ್ಶಿ ಪ್ರಶಾಂತ್‌ ಪೂಜಾರಿ ಕೋಶಾಧಿ ಕಾರಿ ಹರಿಪ್ರಸಾದ್‌ ಆಚಾರ್ಯ ಅಬ್ಬನಡ್ಕ, ಮಾಜಿ ಕಾರ್ಯದರ್ಶಿ ಅಬ್ಬನಡ್ಕ ಸತೀಶ್‌ ಪೂಜಾರಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ