Udayavni Special

ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ: ಉಡುಪಿ ಶೇ.98ರಷ್ಟು ಸಾಧನೆ

ಗ್ರಾಮೀಣ ಭಾಗದ ಯುವಜನತೆಯಲ್ಲಿ ಆಸಕ್ತಿ ; ನಾಲ್ಕು ಪಟ್ಟು ಗುರಿ ಹೆಚ್ಚಳ

Team Udayavani, Nov 16, 2019, 5:20 AM IST

tt-13

ಉಡುಪಿ: ಜಿಲ್ಲೆಯ ಅವಕಾಶ ವಂಚಿತ ನಿರುದ್ಯೋಗಿಗಳಿಗೆ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ ವರದಾನವಾಗಿ ಪರಿಮಿಸಿದೆ. 2018-19ನೇ ಸಾಲಿನಲ್ಲಿ ಉಡುಪಿ ಪ್ರಧಾನಮಂತ್ರಿ ಕೌಶಲ ಕೇಂದ್ರ ಶೇ. 98ರಷ್ಟು ಗುರಿ ಸಾಧಿಸಿದ್ದು, ಗ್ರಾಮೀಣ ಭಾಗದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

ಉಡುಪಿಗೆ 3,000 ಗುರಿ
ತಾಂತ್ರಿಕ ಸುಧಾರಣೆಗಳಿಂದಾಗಿ ಮುಂದೆ ಉದ್ಯೋಗ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಯುವಜನರಿಗೆ ಉದ್ಯೋಗಕ್ಕೆ ಅಗತ್ಯವಿರುವ ಕೌಶಲಗಳನ್ನು ನೀಡುವ ದೃಷ್ಟಿಯಿಂದ ಕೇಂದ್ರ ಸರಕಾರ ಪ್ರಸ್ತಕ ಸಾಲಿನಲ್ಲಿ ಉಡುಪಿ ಪ್ರಧಾನಮಂತ್ರಿ ಕೌಶಲ ಕೇಂದ್ರಕ್ಕೆ 3,000 ಯುವಕ-ಯುವತಿಯರಿಗೆ ಕೌಶಲ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸುವ ಗುರಿಯನ್ನು ನೀಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಗುರಿ ಪ್ರಮಾಣ 4ಪಟ್ಟು ಏರಿಕೆಯಾಗಿದೆ.

ಶೇ. 98ರಷ್ಟು ಸಾಧನೆ
ಮಣಿಪಾಲ ಲಕ್ಷ್ಮೀಂದ್ರ ನಗರದ ಪ್ರಧಾನಮಂತ್ರಿ ಕೌಶಲ ಕೇಂದ್ರ 2018-19ನೇ ಸಾಲಿನಲ್ಲಿ ಶೇ.98ರಷ್ಟು ಸಾಧನೆ ಮಾಡಿದೆ. ಕಳೆದ ಸಾಲಿನಲ್ಲಿ 700 ಜನರಿಗೆ ತರಬೇತಿ ನೀಡುವ ಗುರಿ ನೀಡಿದ್ದು, 644 ಯುವಜನರು ತರಬೇತಿ ಪಡೆದುಕೊಂಡಿದ್ದಾರೆ. ಅವರಲ್ಲಿ 217 ಮಂದಿ ಸಣ್ಣ ಕೈಗಾರಿಕೆ, 122 ಬ್ಯೂಟಿಶಿಯನ್‌, 116 ಜನ ಕಿರಿಜೂನಿಯರ್‌ ಸಾಫ್ಟ್ ವೇರ್‌ ಡೆವಲಪರ್, 120 ಐಟಿ ಹಾಗೂ 57ಜನ ಹಾರ್ಡ್‌ವೇರ್‌ ಕ್ಷೇತ್ರ ಆಯ್ಕೆ ಮಾಡಿದ್ದಾರೆ. ಸುಮಾರು 12 ಜನರು ತರಬೇತಿಯನ್ನು ಅರ್ಧದಲ್ಲಿ ನಿಲ್ಲಿಸಿದ್ದಾರೆ.

ಈ ಕೇಂದ್ರದಲ್ಲಿ ಬ್ಯೂಟಿಶಿಯನ್‌,ಸಾಫ್ಟ್ವೇರ್‌ ಡೆವಲಪಿಂಗ್‌, ಐಟಿ ಹೆಲ್ಪ್ ಡೆಸ್ಕ್, ಕಂಪ್ಯೂಟಿಂಗ್‌ ಮತ್ತು ನೆಟ್‌ವರ್ಕಿಂಗ್‌, ಬ್ಯಾಂಕಿಂಗ್‌, ಫೈನಾನ್ಸ್‌, ಇನ್ಶೂರೆನ್ಸ್‌, ರೀಟೈಲ್ಸ್‌ ಸೇರಿದಂತೆ 8 ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಕೌಶಲ ಕೇಂದ್ರದ ನಿರ್ವಹಣೆಯನ್ನು ರೂಮನ್‌ ಸಂಸ್ಥೆ ವಹಿಸಿಕೊಂಡಿದೆ. ಭ್ಯರ್ಥಿಗಳಿಗೆ ತರಬೇತಿ ಪಡೆಯುವವರಿಗೆ ತಿಂಗಳಿಗೆ 1,000 ರೂ.ನಂತೆ ಪ್ರಯಾಣ ಭತ್ಯೆ ಸಿಗಲಿದೆ.

ಗ್ರಾಮೀಣ ಭಾಗದ ಯುವ ಜನರು ಹೆಚ್ಚು
ಕಾರ್ಕಳ, ಕುಂದಾಪುರ, ಉಡುಪಿ, ಬ್ರಹ್ಮಾವರ ಸೇರಿದಂತೆ ವಿವಿಧ ಪ್ರದೇಶದಿಂದ ಯುವಜನರು ಈ ಕೇಂದ್ರಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅದರಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಸುಮಾರು 390 ಗಂಟೆಗಳ ತರಬೇತಿ ಇರಲಿದೆ. ನಿತ್ಯ ತಲಾ 2 ಗಂಟೆ ಪ್ರಾಯೋಗಿಕ ಹಾಗೂ ಥಿಯರಿ ತರಗತಿಗಳಿವೆ. ಶೇ. 90ರಷ್ಟು ಕಡ್ಡಾಯ ಹಾಜರಾತಿ ಹಾಗೂ ಕೇಂದ್ರ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು, ಇಲ್ಲವಾದರೆ ಅಭ್ಯರ್ಥಿಗಳು ಮರುಪರೀಕ್ಷೆ ಎದುರಿಸಬೇಕು.

ಉಚಿತ ತರಬೇತಿ
18ರಿಂದ 35ರೊಳಗಿನ ವಯೋಮಿತಿಯ ಹಾಗೂ ಎಸ್‌ಎಸ್‌ಎಲ್‌ಸಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಂದ್ರದಲ್ಲಿ ಉಚಿತ ತರಬೇತಿ ಇರಲಿದೆ. ಆಸಕ್ತರು ಕೇಂದ್ರವನ್ನು ಅಥವಾ www.rooman.com/pmkvy/ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಬ್ಯಾಚ್‌ ಆಧಾರದ ಮೇಲೆ ತರಗತಿ ಪ್ರಾರಂಭವಾಗಲಿದೆ.

ಯುವ ಜನತೆಗೆ ಅವಕಾಶ
ಗ್ರಾ.ಪಂ.ನಿಂದ ಹಿಡಿದು ವಿವಿಧ ಸ್ತರದ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಯುವಕ-ಯುವತಿಯರನ್ನು ಗುರುತಿಸಿ ಪ್ರಧಾನಮಂತ್ರಿ ಕೌಶಲ ವಿಕಾಸ ಕೇಂದ್ರಕ್ಕೆ ತರಬೇತಿ ಪಡೆಯಲು ಕಳುಹಿಸಬೇಕು.
-ಶೋಭಾ ಕರಂದ್ಲಾಜೆ, ಸಂಸದೆ ಉಡುಪಿ-ಚಿಕ್ಕಮಗಳೂರು

ಪ್ರಾಯೋಗಿಕ ತರಬೇತಿ
ಜಿಲ್ಲೆಯ ಗ್ರಾಮೀಣ ಭಾಗದ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
-ರಾಘವೇಂದ್ರ ರಾವ್‌, ಪ್ರಧಾನ ಮಂತ್ರಿ ಕೌಶಲ ವಿಕಾಸ ಕೇಂದ್ರದ ಮುಖ್ಯಸ್ಥ. ಉಡುಪಿ

ತೃಪ್ತಿ ಕುಮ್ರಗೋಡು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಸಿದ್ಧ

ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಸಿದ್ಧ

ಸಮರ್ಪಕ ದಾಸ್ತಾನು ಜಾಲ ಬಲಗೊಳ್ಳಬೇಕು ; ಸರಕಾರ ಏನು ಮಾಡಬೇಕು?

ಸಮರ್ಪಕ ದಾಸ್ತಾನು ಜಾಲ ಬಲಗೊಳ್ಳಬೇಕು ; ಸರಕಾರ ಏನು ಮಾಡಬೇಕು?

ವಿಪತ್ತು ನಿಧಿ ಮಿತಿ ಹೆಚ್ಚಳ

ವಿಪತ್ತು ನಿಧಿ ಮಿತಿ ಹೆಚ್ಚಳ

ಆರ್ಥಿಕ ಪುನರುತ್ಥಾನದಲ್ಲಿ ಭಾರತದ ಪಾತ್ರ ಹಿರಿದು

ಆರ್ಥಿಕ ಪುನರುತ್ಥಾನದಲ್ಲಿ ಭಾರತದ ಪಾತ್ರ ಹಿರಿದು

ಕಾಶಿಯ ಜನರು ಸ್ಫೂರ್ತಿಯ ಸೆಲೆ ; ವಾರಾಣಸಿ NGOಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ

ಕಾಶಿಯ ಜನರು ಸ್ಫೂರ್ತಿಯ ಸೆಲೆ ; ವಾರಾಣಸಿ NGOಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

ಸುರಕ್ಷಿತ ಪ್ರಯಾಣ ಸಾಧ್ಯವಾದರಷ್ಟೇ ದೇಶಿ ಕ್ರಿಕೆಟ್‌: ಗಂಗೂಲಿ

ಚಿನ್ನದ ಬೆಲೆ ದಾಖಲೆ ಏರಿಕೆ

ಚಿನ್ನದ ಬೆಲೆ ದಾಖಲೆ ಏರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ

ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ

ಬಿರುಸಿನ ಕೃಷಿ ಕಾರ್ಯಕ್ಕೆ ಯಂತ್ರಗಳ ನೆರವು

ಬಿರುಸಿನ ಕೃಷಿ ಕಾರ್ಯಕ್ಕೆ ಯಂತ್ರಗಳ ನೆರವು

ಜೀವನೋಪಾಯ, ಹವ್ಯಾಸಕ್ಕಾಗಿ ಹೊಳೆ -ಸಮುದ್ರ ತೀರದಲ್ಲಿ ನಡೆಯುತ್ತಿದೆ ಮೀನಿಗೆ ಗಾಳ

ಜೀವನೋಪಾಯ, ಹವ್ಯಾಸಕ್ಕಾಗಿ ಹೊಳೆ -ಸಮುದ್ರ ತೀರದಲ್ಲಿ ನಡೆಯುತ್ತಿದೆ ಮೀನಿಗೆ ಗಾಳ

ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು

ಬೆಂಗಳೂರಿಗೆ ಸಂಚರಿಸಲು ಬಸ್‌ಗಳ ಹಿಂದೇಟು

ಉಡುಪಿಗೆ ಜಿಲ್ಲೆ ಹಡಿಲು ಮುಕ್ತಕ್ಕೆ ಪ್ರಯತ್ನ: ಡಿಸಿ

ಉಡುಪಿಗೆ ಜಿಲ್ಲೆ ಹಡಿಲು ಮುಕ್ತಕ್ಕೆ ಪ್ರಯತ್ನ: ಡಿಸಿ

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavaniಹೊಸ ಸೇರ್ಪಡೆ

ಅಭಿವೃದ್ಧಿ ಕಾಣದ ಕೊರುಂದೂರು-ಮಜ್ಜಗುಡ್ಡೆ ರಸ್ತೆ

ಅಭಿವೃದ್ಧಿ ಕಾಣದ ಕೊರುಂದೂರು-ಮಜ್ಜಗುಡ್ಡೆ ರಸ್ತೆ

kovid-bbmp

ಕೋವಿಡ್‌ 19 ನಿರ್ವಹಣೆಗೆ ಅಷ್ಟ ದಿಕ್ಪಾಲಕರು

orike-rahasya

ಸೋರಿಕೆ ರಹಸ್ಯದ ಹಿಂದೆ ಆಪರೇಟರ್‌ಗಳು?

ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಸಿದ್ಧ

ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್‌ ಸಿದ್ಧ

ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ

ಕಾಣಿಯೂರು ಶ್ರೀಗಳಿಂದ ಗೋಮಾತೆಗೆ ಅಭಿವಾದನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.