ಅಪರಾಧ ಸಾಬೀತು; ನಾಳೆ ಶಿಕ್ಷೆ ಪ್ರಕಟ  

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ

Team Udayavani, Apr 11, 2019, 6:14 AM IST


ಉಡುಪಿ: ಅಪ್ರಾಪ್ತ ವಯಸ್ಕ ಯುವತಿಯೋರ್ವಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪೆರಂಪಳ್ಳಿಯ ಅರುಣ ಆಚಾರಿ(32) ಯ ಅಪರಾಧ ಸಾಬೀತಾಗಿದೆ ಎಂದು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯ ಘೋಷಿಸಿದೆ.

ಅರುಣ ಆಚಾರಿ 2016ರ ಜು.16ರಂದು ಬೆಳಗ್ಗೆ 8.30ರ ವೇಳೆಗೆ ಶಾಲೆಗೆ ಹೊರಟಿದ್ದ ತನ್ನ ಪರಿಚಯದ ವ್ಯಕ್ತಿಯ ಮಗಳು, ಅಪ್ರಾಪ್ತ ವಯಸ್ಸಿನ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಮಣಿಪಾಲದ ಲಾಡ್ಜ್ವೊಂದಕ್ಕೆ ಕರೆದೊಯ್ದಿದ್ದ. ಆತನ ಮೇಲೆ ಸಂಶಯ ಉಂಟಾಗಿ ಲಾಡ್ಜ್ನವರು ರೂಮ್‌ ನೀಡಲು ನಿರಾಕರಿಸಿದ್ದರು. ಅನಂತರ ಇನ್ನೊಂದು ಲಾಡ್ಜ್ಗೆ ಬಾಲಕಿಯನ್ನು ಕರೆದೊಯ್ದಿದ್ದ. ಅಲ್ಲಿಯೂ ರೂಮ್‌ ನೀಡಲು ನಿರಾಕರಿಸಲಾಯಿತು. ಅನಂತರ ಆರೋಪಿ ಬಾಲಕಿಯನ್ನು ಪೆರಂಪಳ್ಳಿಯ ತನ್ನ ಮನೆಗೆ ಕರೆತಂದು ಅತ್ಯಾಚಾರವೆಸಗಿದ್ದ. ಬಾಲಕಿ ಸ್ವಲ್ಪ ಮಂದ ಬುದ್ಧಿಯವಳಾಗಿದ್ದಳು. ಈ ಬಗ್ಗೆ ಬಾಲಕಿಯ ತಂದೆ ಮಣಿಪಾಲ ಠಾಣೆಯಲ್ಲಿ ದೂರು ನೀಡಿದ್ದರು. ಪೋಕೊÕà ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ಕಲಂನಡಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್‌ ವೃತ್ತ ನಿರೀಕ್ಷಕರಾಗಿದ್ದ ಸಂಪತ್‌ ಕುಮಾರ್‌ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಜಿಲ್ಲಾ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. 30 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಲಾಗಿತ್ತು. ವಾದ ಆಲಿಸಿದ ವಿಶೇಷ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿ.ಎಂ.ಜೋಷಿ ಅವರು ಅಪರಾಧ ಸಾಬೀತಾಗಿರುವುದಾಗಿ ಎ.10ರಂದು ಪ್ರಕಟಿಸಿದರು. ಶಿಕ್ಷೆಯ ಪ್ರಮಾಣವನ್ನು ಎ.12ರಂದು ಪ್ರಕಟಿಸುವುದಾಗಿ ಘೋಷಿಸಿದರು. ಸರಕಾರದ ಪರವಾಗಿ ಜಿಲ್ಲಾ ವಿಶೇಷ ಸರಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ