Udayavni Special

ಮಳೆ ಪ್ರಮಾಣ ಇಳಿಕೆ: 8 ಮೀನುಗಾರರ ರಕ್ಷಣೆ; ಗುಡ್ಡ ಕುಸಿತ


Team Udayavani, Aug 16, 2018, 2:40 AM IST

jayamala-15-8.jpg

ಮಂಗಳೂರು/ಉಡುಪಿ: ಕರಾವಳಿಯಲ್ಲಿ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಇಳಿಮುಖವಾಗಿದೆ. ಮಂಗಳೂರು ನಗರದಲ್ಲಿ ಸಂಜೆ, ರಾತ್ರಿ ವೇಳೆಗೆ ಉತ್ತಮ ಮಳೆಯಾಗಿತ್ತು. ಆಳಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ದೋಣಿಯೊಂದು ನಿಯಂತ್ರಣ ತಪ್ಪಿ ತೋಟ ಬೆಂಗ್ರೆ ದಡ ಸೇರಿದ್ದು ಇದರಲ್ಲಿದ್ದ ಎಂಟು ಮೀನುಗಾರರನ್ನು ಕೋಸ್ಟ್‌ ಗಾರ್ಡ್‌ ರಕ್ಷಿಸಿದೆ. ಮಾಣಿ-ಮೈಸೂರು ಹೆದ್ದಾರಿಯ ಮಡಿಕೇರಿ ಸನಿಹದ ಮದೆನಾಡು, ಜೋಡುಪಾಲ ಬಳಿ ರಸ್ತೆಗೆ ಗುಡ್ಡ ಕುಸಿದು ವಾಹನ ಸಂಚಾರ ಸ್ಥಗಿತಗೊಂಡಿದ್ದು, ಬುಧವಾರವೂ ಹೆದ್ದಾರಿಯಲ್ಲಿ ವಾಹನ ಸಂಚಾರ ಮೊಟಕುಗೊಂಡಿತ್ತು.

ಕಿನ್ನಿಗೋಳಿ ಕಟೀಲಿನ ತಗ್ಗು ಪ್ರದೇಶ ಜಲಾವೃತವಾಗಿದೆ. ಅತ್ತೂರು ಬೈಲು ಮಹಾಗಣಪತಿ ಮಂದಿರಕ್ಕೆ ಸಂಚರಿಸುವ ರಸ್ತೆ ಸಂಪರ್ಕ ಕಡಿದಿದೆ. ಎಡಪದವು ಮಯ್ನಾರಬೆಟ್ಟಿನ ಕುಸುಮಾ ಅವರ ಮನೆಯ ಮೇಲೆ ಮಂಗಳವಾರ ತೆಂಗಿನ ಮರ ಬಿದ್ದು ಮನೆ ಜಖಂಗೊಂಡಿದೆ. ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಬುಧವಾರ ಮಧ್ಯಾಹ್ನ ಗುಡ್ಡ ಕುಸಿದು ಹೆದ್ದಾರಿ ರಸ್ತೆ ಮೇಲೆ ಬಿದ್ದು, ಸುಮಾರು ಒಂದೂವರೆ ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಯಿತು.

ಫಲ್ಗುಣಿ ನದಿ ಉಕ್ಕಿ ಹರಿದಿದ್ದು, ಗುರುಪುರ ಕೈಕಂಬದ ಕಾಜಿಲ ಸಮೀಪದ ಪಟ್ಲ ಸಾಧೂರು ಎಂಬಲ್ಲಿ ನೆರೆ ಹಾವಳಿ ಉಂಟಾಗಿದೆ. ಮಂಗಳವಾರ ರಾತ್ರಿ ವೇಣೂರಿನ ಫಲ್ಗುಣಿ ನದಿ ಅಪಾಯದ ಮಟ್ಟದಲ್ಲಿ ಹರಿದು ವೇಣೂರು ಚರ್ಚ್‌ ಬಳಿ ರಸ್ತೆ ಮುಳುಗಡೆಗೊಂಡಿತು. ಉಪ್ಪಿನಂಗಡಿಯಲ್ಲಿ ನೇತ್ರಾವತಿ, ಕುಮಾರಧಾರಾ ಮೈದುಂಬಿ ಹರಿಯುತ್ತಿದೆ.

ವಳಾಲು: ಗುಡ್ಡ ಕುಸಿದು ಹೆದ್ದಾರಿ ಸಂಚಾರಕ್ಕೆ ತಡೆ
ಉಪ್ಪಿನಂಗಡಿ:
ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲಿನಲ್ಲಿ ಬುಧವಾರ ಮಧ್ಯಾಹ್ನ ಗುಡ್ಡ ಕುಸಿದು ಹೆದ್ದಾರಿ ಮೇಲೆ ಬಿದ್ದು ಸುಮಾರು ಒಂದೂವರೆ ತಾಸು ವಾಹನ ಸಂಚಾರಕ್ಕೆ ತಡೆ ಉಂಟಾಯಿತು. ಗುಡ್ಡ ಕುಸಿದ ಭಾಗದಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಿರ್ವಹಿಸುತ್ತಿರುವ ಎಲ್‌.ಆ್ಯಂಡ್‌.ಟಿ. ಸಂಸ್ಥೆ ಮಣ್ಣು ತೆರವು ಮಾಡಿತು.

ಮಂಗಳೂರು ಡಿಪೋದಿಂದ 54 ಬಸ್‌ ಸ್ಥಗಿತ
ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಡಿಪೋದಿಂದ ಬೆಂಗಳೂರಿಗೆ ತೆರಳುವ 46 ಬಸ್‌, ಮೈಸೂರಿಗೆ ತೆರಳುವ 7 ಕೆಎಸ್ಸಾರ್ಟಿಸಿ ಬಸ್‌ ಗಳನ್ನು ಬುಧವಾರ ಕೂಡ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಾಧಿಕಾರಿ ದೀಪಕ್‌ ಕುಮಾರ್‌ ಅವರು ‘ಉದಯವಾಣಿ’ಗೆ ಪ್ರತಿಕಿಯಿಸಿ ‘ಒಟ್ಟು 54 ಬಸ್‌ ಗಳನ್ನು ಸ್ಥಗಿತಗೊಳಿಸಲಾಗಿದೆ. ಬೆಂಗಳೂರು, ಮೈಸೂರಿಗೆ ತೆರಳುವಂತಹ ಪ್ರಯಾಣಿಕರ ಸಂಖ್ಯೆ ಕೂಡ ಕಡಿಮೆ ಇದೆ. ಈಗಾಗಲೇ ಸ್ಥಗಿತಗೊಂಡ ಬಸ್‌ ಗಳಲ್ಲಿ ಪ್ರಯಾಣಿಕರು ಸೀಟು ಕಾಯ್ದಿರಿಸಿಕೊಂಡಿದ್ದರೆ ಅಂತಹವರಿಗೆ ಶೇ. 100ರಷ್ಟು ಹಣ ಮರುಪಾವತಿ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ukraine military plane crash

ಈಶಾನ್ಯ ಉಕ್ರೇನ್: ರಕ್ಷಣಾ ವಿಮಾನ ದುರಂತದಲ್ಲಿ 22 ಜನರ ಸಾವು

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Anushka-Sharma

ಗಾವಸ್ಕರ್‌ ಹೇಳಿಕೆಗೆ ಅನುಷ್ಕಾ ಕಿಡಿ

ಡ್ರಗ್ಸ್‌ ಚಾಟ್‌ ಗ್ರೂಪ್‌ಗೆ ದೀಪಿಕಾ ಅಡ್ಮಿನ್‌!

ಡ್ರಗ್ಸ್‌ ಚಾಟ್‌ ಗ್ರೂಪ್‌ಗೆ ದೀಪಿಕಾ ಅಡ್ಮಿನ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ಯುವಕನ ಕೊಚ್ಚಿಕೊಲೆ

ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ರೌಡಿಶೀಟರ್ ನ ಕೊಚ್ಚಿಕೊಲೆ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

Kudನನಸಿನತ್ತ ಗಂಗೊಳ್ಳಿ -ಕುಂದಾಪುರ ಸೇತುವೆ ಕನಸು

ನನಸಿನತ್ತ ಗಂಗೊಳ್ಳಿ -ಕುಂದಾಪುರ ಸೇತುವೆ ಕನಸು

ಶ್ರೀಕೃಷ್ಣ ಮಠಕ್ಕೆ ಪಾರಂಪರಿಕ ಹೊಸ ರೂಪ

ಶ್ರೀಕೃಷ್ಣ ಮಠಕ್ಕೆ ಪಾರಂಪರಿಕ ಹೊಸ ರೂಪ

MUST WATCH

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣಹೊಸ ಸೇರ್ಪಡೆ

ukraine military plane crash

ಈಶಾನ್ಯ ಉಕ್ರೇನ್: ರಕ್ಷಣಾ ವಿಮಾನ ದುರಂತದಲ್ಲಿ 22 ಜನರ ಸಾವು

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಕಂದಾಯ ಇಲಾಖೆಗೆ ಡೀಮ್ಡ್ ಅರಣ್ಯ ಸ್ಥಳ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ಮಕ್ಕಳಿಗೆ ದೊರೆಯದ ಬಿಸಿಯೂಟದ ಬೇಳೆ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.