ಓದಿದ್ದು  ಪದವಿಯನ್ನು, ಮಾಡಿದ್ದು ಹೈನು, ಜೇನು!


Team Udayavani, Mar 18, 2019, 12:30 AM IST

s-20.jpg

ಕುಂದಾಪುರ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ ಬಳಿಕ ಉದ್ಯೋಗ ಕೈಹಿಡಿದು ಕರೆದರೂ ಬದಿಗೊತ್ತಿ ಕೃಷಿಯನ್ನು ನಂಬಿ ಬದುಕು ಕಟ್ಟಿಕೊಂಡ ಸಾಧಕ ಕಾಳಾವರ ಸಮೀಪದ ಆಸೋಡಿನ ರವಿರಾಜ ಶೆಟ್ಟಿ ಅವರು.

ಕೃಷಿ ಸೆಳೆತ
ನಿವೃತ್ತ ಜಿಲ್ಲಾ ನ್ಯಾಯಾಧೀಶ ಸೌಕೂರು ನಾರಾಯಣ ಶೆಟ್ಟಿ ಅವರ ಪುತ್ರ ರವಿರಾಜ ಅವರ ಹಿರಿಯ ಸಹೋದರ ಬೆಂಗಳೂರು ಡೆಂಟಲ್‌ ಕಾಲೇಜಿನ ಡೀನ್‌ ಹಾಗೂ ಪ್ರಾಚಾರ್ಯರಾಗಿದ್ದರು. ಆದರೆ ರವಿರಾಜರಿಗೆ ಮಾತ್ರ ಕೃಷಿಯ ಸೆಳೆತ ಉಂಟಾಗಿ ಊರಿಗೆ ಬಂದು ಕೃಷಿ ಮಾಡಬೇಕೆಂದು ಮನಸಾದವರೇ ಕೋಳಿ ಫಾರಂ ತೆರೆದರು. 40 ಸಾವಿರ ಕೋಳಿ ಸಾಕಿದರು. ಈಗಲೂ ಇವರ ನಂದಿ ಪೌಲ್ಟ್ರಿ ಫಾರಂನಲ್ಲಿ 15 ಸಾವಿರ ಬ್ರಾಯ್ಲರ್‌ ಕೋಳಿಗಳಿವೆ. ಇದರ ಜತೆಗೆ ಆರಂಭಿಸಿದ್ದೇ ಹೈನುಗಾರಿಕೆ ಮತ್ತು ಜೇನು ಸಾಕಾಣೆ.

ಹೈನುಗಾರಿಕೆ
ಈಗ 32 ಎಚ್‌ಎಫ್ ತಳಿಯ ಹಸುಗಳಿವೆ. 15ರಷ್ಟು ಕರುಗಳಿವೆ. ಪ್ರತೀ ಹಸುವೂ ದಿನಕ್ಕೆ 30-35 ಲೀ. ಹಾಲು ಕೊಡುತ್ತದೆ. ಇವಕ್ಕೆ ಆಹಾರ ಕೊಡಲು, ನೀರು ಕೊಡಲು ಸುವ್ಯವಸ್ಥಿತ ಹಟ್ಟಿ ರಚಿಸಿದ್ದಾರೆ. ಇನ್ನೊಂದು ಹಟ್ಟಿ ರಚನೆ ನಡೆಯುತ್ತಿದ್ದು ದಿನಕ್ಕೆ 1 ಸಾವಿರ ಲೀ. ಹಾಲು ಉತ್ಪಾದಿಸುವ ಗುರಿ ಹೊಂದಿದ್ದಾರೆ. ಕೃತಕ ಗರ್ಭಧಾರಣೆ ಉತ್ತಮವಲ್ಲ ಎಂದು ಬಲರಾಮ ಎಂಬ ಗೂಳಿಯನ್ನು ಕೋಲಾರದಿಂದ ಖರೀದಿಸಿ ಸಾಕಿದ್ದಾರೆ. ಪಶು ಆಹಾರಕ್ಕಾಗಿ 4 ಎಕರೆಯಲ್ಲಿ ಹುಲ್ಲು ಬೆಳೆಸುತ್ತಿದ್ದಾರೆ. ಜತೆಗೆ ಅಡಿಕೆ ಹಾಳೆ ಕತ್ತರಿಸಿ ಹಾಕುತ್ತಾರೆ. ಕೋಕೋಗೆ ಬೆಲೆ ಇಲ್ಲದಿದ್ದರೆ ತಲೆಬಿಸಿ ಇಲ್ಲ, ಹಸುಗಳಿಗೆ ದಷ್ಟಪುಷ್ಟವಾಗಲು ಅದೇ ಪೌಷ್ಠಿಕ ಆಹಾರ ಎನ್ನುತ್ತಾರೆ.

ಸುಧಾರಿತ ವ್ಯವಸ್ಥೆ
ಸುಧಾರಿತ ವ್ಯವಸ್ಥೆಯಲ್ಲಿ ರಾಸುಗಳಿಗೆ ಫ್ಯಾನು, ಸೆಖೆಗೆ ಮೈಮೇಲೆ ಬೀಳುವಂತೆ ಶವರ್‌ ನೀರು, ಹಾಲು ಕರೆಯುವಾಗ ಮೆಲುದನಿಯಲ್ಲಿ ಸಂಗೀತ ಕೇಳಿಸುವ ವ್ಯವಸ್ಥೆ ಮಾಡಿದ್ದಾರೆ. ಸ್ವಯಂಚಾಲಿತವಾಗಿ ಕುಡಿಯುವ ನೀರು, ನೀರು ಹೆಚ್ಚಾದಾಗ ಮರಳಿ ಹೋಗುವ ವ್ಯವಸ್ಥೆ, ಹಟ್ಟಿ ತೊಳೆದ ನೀರು ತೋಟಕ್ಕೆ ಹನಿ ನೀರಾವರಿ ಮೂಲಕ ಬಿಡುವ ವ್ಯವಸ್ಥೆ, ರಾಸುಗಳ ಮೇಲ್ವಿಚಾರಕನಿಗೆ ಹಟ್ಟಿಯ ಬದಿಯಲ್ಲಿಯೇ ಪ್ರತ್ಯೇಕ ಕೊಠಡಿಯೂ ಇದೆ. ಇಷ್ಟು ಹಸುಗಳಿದ್ದ ಮೇಲೆ ಗೋಬರ್‌ ಅನಿಲ ಬೇಕೇ ಬೇಕಲ್ಲ. ಅದೂ ಇದೆ.  ಇಂತಹ ಇಲ್ಲಿನ ಸಕಲ ಸುಸಜ್ಜಿತ ವ್ಯವಸ್ಥೆಯನ್ನು  ವೀಕ್ಷಿಸಲು ರಾಜ್ಯದ ನಾನಾ ಭಾಗದಿಂದ ರೈತರು ಬಂದು ಮಾಹಿತಿ ಪಡೆದು ಹೋಗಿ ಯಶಸ್ವಿ ಹೈನುಗಾರರಾದ ಉದಾಹರಣೆಗಳಿವೆ. 

ಹಸುಗಳಿಗೆ ವ್ಯಾಯಾಮ
ಸುಮಾರು ಒಂದೆಕರೆ ಖಾಲಿ ಪ್ರದೇಶದಲ್ಲಿ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಅಷ್ಟೂ ಹಸುಗಳನ್ನು ಅಡ್ಡಾಡಲು ಬಿಡಲಾಗುತ್ತದೆ. ಇದರಿಂದ ಅವುಗಳಿಗೆ ವ್ಯಾಯಾಮ ಆಗುತ್ತದೆ, ಅವುಗಳು ಓಡಾಡಿದ ಗದ್ದೆ ಫ‌ಲವತ್ತಾಗಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರವಿರಾಜ ಶೆಟ್ಟರು.

ಕಾರ್ಮಿಕರ ಕೊರತೆ‌
ಸುಮಾರು 30 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿರುವ ಶೆಟ್ಟರಿಗೆ ಸಹಜವಾಗಿ ಕಾರ್ಮಿಕರ ಸಮಸ್ಯೆ ಇದೆ. ಸಾಕಷ್ಟು ಯಂತ್ರಾಧಾರಿತ ಕೃಷಿ ಇದ್ದರೂ 20ಕ್ಕಿಂತ ಅಧಿಕ ಮಂದಿ ಅರೆಕಾಲಿಕ ಕಾರ್ಮಿಕರಿದ್ದಾರೆ. ಕಾರ್ಮಿಕರಿಲ್ಲದೇ ರೇಶ್ಮೆಯಂತಹ ಕೃಷಿಯನ್ನು ನಿಲ್ಲಿಸಿದ್ದಾರೆ. ನೂರಾರು ಹಣ್ಣುಹಂಪಲಿನ ಗಿಡಗಳು, 120 ಕ್ವಿಂ.ಭತ್ತ, 4 ಸಾವಿರ ಅಡಿಕೆ ಮರ, ತೆಂಗು, ಕಾಳುಮೆಣಸು ಎಂದು ವೈವಿಧ್ಯ ಕೃಷಿ ಮಾಡಿದ್ದರೂ 40 ವರ್ಷಗಳಿಂದ ರಾಸಾಯನಿಕ ಬಳಸಿಲ್ಲ. ಶುದ್ಧ ಸಾವಯವ. ಸುಡುಮಣ್ಣು, ಕೋಳಿಗೊಬ್ಬರ, ಹಟ್ಟಿಗೊಬ್ಬರವೇ ಬಳಸಿ ಮಾರ್ಗದರ್ಶಿ ಸಾವಯವ ಸಾಧಕರಾಗಿದ್ದಾರೆ. 

 ಪ್ರಾಣಿಪ್ರಿಯ
ರವಿರಾಜ ಶೆಟ್ಟರು ಪ್ರಾಣಿಪ್ರಿಯ. ಮೊದಲು ಜಿಂಕೆ, ಕಾಡುಹಂದಿ, ಲವ್‌ಬರ್ಡ್ಸ್‌ ಮೊದಲಾದವನ್ನು ಸಾಕುತ್ತಿದ್ದರು. ಅನಂತರ ಅವುಗಳನ್ನು ಇಲಾಖೆಗೆ ನೀಡಿ, ಈಗ ನೂರಾರು ಪಾರಿವಾಳಗಳನ್ನು ಸಾಕುತ್ತಿದ್ದಾರೆ. 

ಪ್ರಶಸ್ತಿಗಳ ಬೆನ್ನತ್ತಿಲ್ಲ
ಯಾವುದೇ ಪ್ರಶಸ್ತಿಗಳ ಬೆನ್ನತ್ತದ ಇವರು ಅಸೋಡು ಹಾಲು ಉತ್ಪಾದಕ ಸಂಘದ ಸ್ಥಾಪಕ ಅಧ್ಯಕ್ಷ, ಕಾಳಾವರ ಶ್ರೀ ಕಾಳಿಂಗ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ 5 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಕೈಗೊಳ್ಳುತ್ತಿದ್ದಾರೆ.  

ನಿಶ್ಚಿತ ಬೆಲೆ ಬೇಕು
ಕೃಷಿ ಉತ್ಪನ್ನಗಳಿಗೆ ನಿಶ್ಚಿತ ಬೆಲೆ ಇಲ್ಲ. ನಾವು ಕೊಳ್ಳುವ ಎಲ್ಲ ವಸ್ತುಗಳಿಗೂ ನಿಗದಿತ ಬೆಲೆ ಇದೆ. ಆದರೆ ನಾವು ಉತ್ಪಾದಿಸಿದಾಗ ಅದಕ್ಕೆ ಸ್ಥಿರವಾದ ಬೆಲೆ ಇಲ್ಲದ ಕಾರಣ ಕೃಷಿಕ ಅತಂತ್ರನಾಗುತ್ತಾನೆ. ರೈತ ಬೆಳೆದ ಫ‌ಸಲು ಕೈಗೆ ದೊರೆಯುವಂತಾಗಬೇಕು. 
ರವಿರಾಜ ಶೆಟ್ಟಿ ಅಸೋಡು,,ಪ್ರಗತಿಪರ ಕೃಷಿಕ

ಟಾಪ್ ನ್ಯೂಸ್

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ಘಟನೆ

ರಸ್ತೆ ಕುಸಿದು ಸ್ಕೂಟರ್ ಸಮೇತ ಗುಂಡಿಗೆ ಬಿದ್ದ ವಿದ್ಯಾರ್ಥಿಗಳು : ಲುಧಿಯಾನದಲ್ಲಿ ನಡೆದ ಘಟನೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

ನಮ್ಮ ಬೆಳ್ಳೆ -ಸ್ವತ್ಛ ಬೆಳ್ಳೆ ಅಭಿಯಾನ

ಬೆಳ್ಳೆ: ಸ್ವಚ್ಛ ಗ್ರಾಮದತ್ತ ವಿದ್ಯಾರ್ಥಿಗಳ ಚಿತ್ತ

ಕಾಪು‌ ಬೀಚ್ ನಲ್ಲಿ ಕನ್ನಡಕ್ಕಾಗಿ ನಾವು ಗೀತ ಗಾಯನ ಕಾರ್ಯಕ್ರಮ ಸಂಪನ್ನ

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದೇಶ

ಕನ್ನಡ ರಾಜ್ಯೋತ್ಸವ ವಿಶೇಷ – ಕನ್ನಡ ಗೀತ ಗಾಯನ

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

ಪಡುಬಿದ್ರಿ: ಜಾನುವಾರು ಅಕ್ರಮ ಸಾಗಾಟ; ಇಬ್ಬರ ಬಂಧನ

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಇನ್ಸ್ಟಾ ಗ್ರಾಂ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಇನ್ಸ್ಟಾ ಗ್ರಾಂನಲ್ಲಿ ಮದುವೆ ಫೋಟೋ ಡಿಲೀಟ್‌ ಮಾಡಿದ ಸಮಂತಾ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಅಹ್ಮದಾಬಾದ್‌ ಪ್ರಾಂಚೈಸಿಗೆ ಬೆಟ್ಟಿಂಗ್‌ ನಂಟು: ಲಲಿತ್‌ ಮೋದಿ ಆರೋಪ

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಪ್ರಬಲ ಜಾತಿಗಳಿಗೆ 2ಎ ಮೀಸಲಾತಿ ನೀಡದಿರಿ:ಕೆ.ಎಂ. ರಾಮಚಂದ್ರಪ್ಪ

ಲಾರಿ ಮತ್ತು  ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

ಲಾರಿ ಮತ್ತು ಬೈಕ್ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.