ಕಟಪಾಡಿ : ದೇವಸ್ಥಾನಕ್ಕೆಂದು ಹೋದ ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ
Team Udayavani, May 16, 2022, 10:46 PM IST
ಕಟಪಾಡಿ : ರಿಯಲ್ ಎಸ್ಟೇಟ್ ಉದ್ಯಮಿ, ಕಟಪಾಡಿ ನಿವಾಸಿ ಪ್ರಕಾಶ್ ರಾವ್ (46) ಮೇ 9ರಿಂದ ನಾಪತ್ತೆಯಾಗಿದ್ದಾರೆ.
ಕಟಪಾಡಿಯ ತನ್ನ ಮನೆಯಿಂದ ಹೊರಟು ಬಾರ್ಕೂರು ಗರಿಕೆ ಮಠ ದೇವಸ್ಥಾನಕ್ಕೆಂದು ಹೋಗಿದ್ದ ಅವರು ವಾಪಸು ಮನೆಗೆ ಬಾರದೆ ಕಾಣೆಯಾಗಿದ್ದು, ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿವಾಹಿತರಾಗಿರುವ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಉರುಟು ಮುಖ, ಕಪ್ಪು ಮೈಬಣ್ಣ, ಸಾಮಾನ್ಯ ಮೈಕಟ್ಟು ಹೊಂದಿರುವ ಅವರು, ನೀಲಿ ಬಣ್ಣದ ಟೀ ಶರ್ಟ್, ಕಂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಹಿಂದಿ, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ.
ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ 0820-2551033 ದೂರವಾಣಿಯನ್ನು ಸಂಪರ್ಕಿಸುವಂತೆ ವಿನಂತಿಸಿದ್ದಾರೆ.
ಇದನ್ನೂ ಓದಿ : ಎಸೆಸೆಲ್ಸಿ ಅನಂತರ ಮುಂದೇನು? ವಿದ್ಯಾರ್ಥಿಗಳ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿದ ಕಾರ್ಯಕ್ರಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಟ್ಲ: ಬದನಾಜೆಯ ಬಸ್ ತಂಗುದಾಣದಲ್ಲಿ ರಕ್ತದ ಕಲೆ; ಕುಡಿದು ಬಿದ್ದಿರುವ ವ್ಯಕ್ತಿಯದೆಂದು ಶಂಕೆ
ಬಿಜೆಪಿ ಸೇದಿ ಎಸೆದ ಬೀಡಿ ಇದ್ದಂತೆ: ಇಬ್ರಾಹಿಂ
ಭಾರತದಲ್ಲಿ 24ಗಂಟೆಯಲ್ಲಿ 14,506 ಕೋವಿಡ್ ಪ್ರಕರಣ ದೃಢ; ಸಕ್ರಿಯ ಪ್ರಕರಣ ಹೆಚ್ಚಳ
ಎರಡು ಸಾವಿರ ಅಗ್ನಿಶಾಮಕ ಹುದ್ದೆಗಳ ಭರ್ತಿ: ಗೃಹ ಸಚಿವ ಆರಗ ಜ್ಞಾನೇಂದ್ರ
ಸಂಪಾಜೆ ಭೂಕಂಪ ಪೀಡಿತ ಪ್ರದೇಶದ ಮನೆಗಳಿಗೆ ಸಹಾಯಕ ಕಮಿಷನರ್ ಗಿರೀಶ್ ನಂದನ್ ಭೇಟಿ