ಹಂಪ್ಸ್ಗಳಿಗೆ ರಿಫ್ಲೆಕ್ಟರ್ ಅಳವಡಿಕೆಯಾಗಲಿ
Team Udayavani, Mar 28, 2019, 6:30 AM IST
ಉಡುಪಿ: ಬಲಾಯಿಪಾದೆ ಬಳಿಯಿಂದ ಉಡುಪಿಯತ್ತ ಆಗಮಿಸುವ ರಾ.ಹೆ.ಯ ಸರ್ವೀಸ್ ರಸ್ತೆಗೆ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಮೇಲ್ಸೇತುವೆ ಬಳಿ ರಸ್ತೆಗೆ ಹಂಪ್ ಅಳವಡಿಸಿದ್ದು, ಯಾವುದೇ ರಿಫ್ಲೆಕ್ಟರ್ ಅಥವಾ ಬಣ್ಣ ಬಳಿಯದೇ ಇದ್ದ ಕಾರಣದಿಂದ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಂಪ್ ಇರುವಿಕೆಯನ್ನು ರಾತ್ರಿ ವೇಳೆ ವಾಹನ ಚಾಲಕರು ಸ್ಪಷ್ಟವಾಗಿ ಗುರುತಿಸುವಂತಾಗಲು ಸಂಬಂಧಪಟ್ಟವರು ಯಾವುದೇ ಕ್ರಮವನ್ನು ಅನುಸರಿಸಿಲ್ಲ. ಇದರಿಂದಾಗಿ ಹಲವು ವಾಹನಗಳು ಅಪಘಾತಕ್ಕೊಳಗಾಗಿದ್ದು, ಅನಂತರ ಸ್ಥಳೀಯರೇ ಹಂಪ್ಗೆ ಬಣ್ಣ ಬಳಿದಿ¨ªಾರೆ. ಸಂಬಂಧಪಟ್ಟವರು ಈ ಹಂಪ್ಗೆ ರಿಫ್ಲೆಕ್ಟರ್ ಅಳವಡಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು
ಮಾಡಿಕೊಡಬೇಕಿದೆ.