ಪ್ರಾದೇಶಿಕ ಭಾಷೆ ಅವನತಿ; ಜಗತ್ತು ಬರಿದು-ಆತಂಕ


Team Udayavani, Aug 29, 2017, 8:55 AM IST

pradeshika-bhashe.jpg

ಉಡುಪಿ: ಪ್ರಾದೇಶಿಕ ಭಾಷೆಗಳೊಂದಿಗೆ ಸುಂದರವಾದ ಸಾಂಸ್ಕೃತಿಕ ನೆಲೆಗಟ್ಟು, ಮಜಲುಗಳು ಇವೆ. ಪ್ರಾದೇಶಿಕ ಭಾಷೆ ಅವನತಿ ಯಾದರೆ ಅದರೊಂದಿಗೆ ಸಾಂಸ್ಕೃತಿಕ ಸಂಪತ್ತು ಹುದುಗಿ ಹೋಗಿ ಜಗತ್ತು ಬರಿದಾಗುವ ಆತಂಕವಿದೆ ಎಂದು ಚಲನಚಿತ್ರ ನಿರ್ದೇಶಕ, ನಟ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಹೇಳಿದರು.

ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಕ್ಲಿಲ್‌ ಇಂಡಿಯಾ ತಂಡದ ಸಹಯೋಗದಲ್ಲಿ ಮಣಿಪಾಲದ ಗಂಗೂಬಾಯಿ ಹಾನಗಲ್‌ ಆಡಿಟೋರಿಯಂನಲ್ಲಿ ಆ. 28ರಂದು ನಡೆದ “ಭಾಷಾ ರಾಜಕೀಯ ಮತ್ತು ಶಿಕ್ಷಣ ಮಾಧ್ಯಮ: ಬಹುಭಾಷ್ಯತ್ವದ ಸವಾಲುಗಳು’ ಎನ್ನುವ ಸಂವಾದ ದಲ್ಲಿ ಅವರು ಮಾತನಾಡಿದರು.

ಭಾಷೆಯಲ್ಲಿ ಅಭಿವ್ಯಕ್ತಿ ಅಡಕವಾಗಿದೆ. ಜಗತ್ತಿನ ಎಲ್ಲ ವಿಷಯಗಳು ಕನ್ನಡದಲ್ಲೇ ಸಿಗುವಂತಾಗಬೇಕು. ಆಂಗ್ಲ ಶಾಲೆಗಳಿಗೆ ಕನ್ನಡವೆಂದರೆ ತಾತ್ಸಾರ ಮನೋಭಾವ ಇದೆ ಎಂದು ಹೇಳಿದ ಚಂದ್ರಶೇಖರ್‌, ಕನ್ನಡದಲ್ಲಿ ರುವ ನಾಡಗೀತೆ, ರೈತಗೀತೆಯನ್ನು ಎಷ್ಟು ಆಂಗ್ಲಮಾಧ್ಯಮ ಶಾಲೆಗಳಲ್ಲಿ ಹಾಡಲಾಗುತ್ತಿದೆ ಎಂದರು.

ಭಾಷೆ ಇಂಗ್ಲಿಷ್‌; ಕನ್ನಡ ಮಾಧ್ಯಮವಾಗಲಿ
ಸಾಹಿತಿ ಡಾ| ನಾ. ಸೋಮೇಶ್ವರ ಅವರು ಮಾತನಾಡಿ, ಕರ್ನಾಟಕದಲ್ಲಿ ಶೇ. 68.5 ಮಂದಿಯ ಮಾತೃಭಾಷೆ ಕನ್ನಡವೇ ಆಗಿದೆ. ಮಿಕ್ಕುಳಿದವು ಆಯಾ ಪ್ರಾಂತವಾರು ಸ್ಥಳೀಯ ಭಾಷೆ ಆಗಿದೆ. ಆದರೂ ಅವರ 2ನೇ ಭಾಷೆ ಕನ್ನಡವಾಗಿದೆ. ಆದುದರಿಂದ ಕನ್ನಡಕ್ಕೆ ಮೊದಲ ಆದ್ಯತೆ ಸದಾ ಇರಬೇಕು. 1ರಿಂದ 10ರ ವರೆಗೆ ಶಿಕ್ಷಣ
ಮಾತೃಭಾಷೆಯಲ್ಲಿದ್ದರೆ ಮಾತ್ರ ಮಕ್ಕಳಿಗೆ ಬೇಗನೆ ಮನನ ಮಾಡಿಕೊ ಳ್ಳಲು ಸಾಧ್ಯವಾಗುತ್ತದೆ ಎಂದರು.

ವ್ಯವಸ್ಥಿತ ಭಾಷಾ ನೀತಿಯೇ ಇಲ್ಲ
ಉಡುಪಿಯ ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಮಹಾಬಲೇಶ್ವರ ರಾವ್‌ ಮಾತನಾಡಿ, ಕರ್ನಾಟಕದಲ್ಲಿ ವ್ಯವಸ್ಥಿತವಾದ ಭಾಷಾ ನೀತಿ ಇಲ್ಲದೆ ಕನ್ನಡ ಕಂಪಿಸುತ್ತಲಿದೆ. ದೋಷಪೂರಿತವಾದ ನೀತಿಯಿಂದಾಗಿ ಗೊಂದಲವಾಗಿದೆ. ಭಾಷೆ ಮತ್ತು ಸಂಸ್ಕೃತಿಗೆ ನಿಕಟ ಸಂಪರ್ಕವಿದೆ. ಇಂಗ್ಲಿಷ್‌ ಮೂಲಕ ಕನ್ನಡ ಉಳಿಸುತ್ತೇವೆಂದು ಹೇಳಿದರೆ ಅದು ಸಾಧ್ಯವಿಲ್ಲ. ಆಡಳಿತ ಮತ್ತು ಶಿಕ್ಷಣ ಎರಡರಲ್ಲೂ ಕನ್ನಡ ಭಾಷೆ ಇರಬೇಕು. ಕನ್ನಡಕ್ಕೆ ಸರಕಾರಗಳೇ ಮಾರಣಾಂತಿಕ ಹೊಡೆತ ನೀಡುತ್ತ ಲಿದೆ. ಮಾತೃಭಾಷೆ ಶಿಕ್ಷಣಕ್ಕೆ ಒತ್ತು ಕೊಡಲಾಗಿಲ್ಲ. ಮನೆ ಭಾಷೆಯೇ ತರಗತಿ ಭಾಷೆಯಾ ಗಿರಬೇಕು ಎಂದವರು ಹೇಳಿದರು.

ಮಣಿಪಾಲ ವಿ.ವಿ. ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ವರದೇಶ್‌ ಹಿರೇಗಂಗೆ, ಮಂಗಳೂರು ವಿವಿ ನಿವೃತ್ತ ಉಪನ್ಯಾಸಕಿ ಭುವನೇಶ್ವರಿ ಹೆಗಡೆ ಅವರು ಮಾತನಾಡಿದರು.

ಎಸ್‌ಎಂಎಸ್‌ ಆಂಗ್ಲಮಾಧ್ಯಮ ಶಾಲೆ ಪ್ರಾಂಶುಪಾಲೆ ಅಭಿಲಾಷಾ ಹಂದೆ ಉಪಸ್ಥಿತರಿದ್ದರು.
ನೀತಾ ಇನಾಮ್‌ದಾರ್‌ ಸ್ವಾಗತಿಸಿದರು. ರೇವತಿ ನಾಡಿಗೇರ್‌ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ: ಅಮಿತ್‌ ಶಾ ಭರವಸೆ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ವರ್ಗಾವರ್ಗಿ ನಿರಾತಂಕ; ಅಕ್ಟೋಬರ್‌ 25ರಿಂದ ಶಿಕ್ಷಕರ ವರ್ಗಕ್ಕೆ ಪರಿಷ್ಕೃತ ವೇಳಾಪಟ್ಟಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆ

ಉಡುಪಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಮಳೆ

ಭತ್ತ ಖರೀದಿ ಕೇಂದ್ರ: ಪ್ರಸ್ತಾವನೆಗೆ ಡಿಸಿ ಸೂಚನೆ

ಭತ್ತ ಖರೀದಿ ಕೇಂದ್ರ: ಪ್ರಸ್ತಾವನೆಗೆ ಡಿಸಿ ಸೂಚನೆ

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

ಬಾಡಿಗೆ ನಿಯಂತ್ರಿಸಿದರಷ್ಟೇ ಭತ್ತ ಕೃಷಿ ಕಾರ್ಯ ಮುಂದುವರಿಕೆ ಸಾಧ್ಯ

ಪ್ರವಾಸಿ ಕ್ಷೇತ್ರಗಳ ವರ್ಚುವಲ್‌ 3ಡಿ ಸಿದ್ಧಪಡಿಸಿ: ಡಿಸಿ

ಪ್ರವಾಸಿ ಕ್ಷೇತ್ರಗಳ ವರ್ಚುವಲ್‌ 3ಡಿ ಸಿದ್ಧಪಡಿಸಿ: ಡಿಸಿ

ಕಾರ್ಕಳ: ಬೀದಿನಾಯಿ ನಿಯಂತ್ರಣಕ್ಕೆ ಆರ್ಥಿಕ ಕೊರತೆ!

ಕಾರ್ಕಳ: ಬೀದಿನಾಯಿ ನಿಯಂತ್ರಣಕ್ಕೆ ಆರ್ಥಿಕ ಕೊರತೆ!

MUST WATCH

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

ಹೊಸ ಸೇರ್ಪಡೆ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋವಿಡ್‌ ಪರಿಣಾಮ: ಜೀವಿತಾವಧಿ ಇಳಿಕೆ

ಕೋವಿಡ್‌ ಪರಿಣಾಮ: ಜೀವಿತಾವಧಿ ಇಳಿಕೆ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

14 ವರ್ಷಗಳ ಬಳಿಕ ಬೆಂಕಿಪೊಟ್ಟಣ ದುಬಾರಿ!

14 ವರ್ಷಗಳ ಬಳಿಕ ಬೆಂಕಿಪೊಟ್ಟಣ ದುಬಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.