- Sunday 15 Dec 2019
ಕಳೆದ ಐದು ವರ್ಷಗಳ ಸಮಸ್ಯೆಗೆ ಮುಕ್ತಿ
ಮೂಡಬೆಟ್ಟು: ಪ್ರಾ. ಆ. ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಣಿ ನೇಮಕ
Team Udayavani, Apr 5, 2019, 6:30 AM IST
ಕಟಪಾಡಿ: ಆರು ಹಾಸಿಗೆ ಸವಲತ್ತು ಹೊಂದಿರುವ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯಾಧಿಕಾರಿಣಿಯಾಗಿ ಡಾ|
ಶೈನಿ ಅವರನ್ನು ಖಾಯಂ ಆಗಿ ನೇಮಕಾತಿಗೊಳಿಸುವ ಮೂಲಕ ಕಳೆದ ಸುಮಾರು 5 ವರ್ಷಗಳಿಗಿಂತಲೂ ಇದ್ದ ಸಮಸ್ಯೆ ನಿವಾರಣೆಯಾದಂತಾಗಿದೆ.
ಸಾರ್ವಜನಿಕರಿಗೆ ಸಮಸ್ಯೆ
ಕಟಪಾಡಿ, ಕೋಟೆ, ಉದ್ಯಾವರ, ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯಲ್ಲಿರುವ
ಮೂಡಬೆಟ್ಟು, ಕೋಟೆ, ಮಟ್ಟು, ಏಣಗುಡ್ಡೆ, ಬೊಳೆj, ಗುಡ್ಡೆಅಂಗಡಿ, ಪಿತ್ರೋಡಿ, ಕುರ್ಕಾಲು ಸಹಿತ ಒಟ್ಟು 8 ಆರೋಗ್ಯ ಉಪಕೇಂದ್ರ ಒಳಗೊಂಡಿ ರುವ ಈ ಪ್ರಾ. ಆರೋಗ್ಯ ಕೇಂದ್ರದಲ್ಲಿ ಇದ್ದ ಖಾಯಂ ವೈದ್ಯಾಧಿಕಾರಿ ಡೆಪ್ಯುಟೇಷನ್ ಮೂಲಕ ಖಾಲಿ ಉಳಿದಿದ್ದ ಅನಂತರದಲ್ಲಿ ಕಳೆದ ಸುಮಾರು
5 ವರ್ಷಗಳಿಂದಲೂ ಪ್ರಭಾರ ವೈದ್ಯಾಧಿಕಾರಿಗಳು ಕರ್ತವ್ಯ ನಿಭಾಯಿಸುತ್ತಿದ್ದರು. ಸಕಾಲದಲ್ಲಿ ವೈದ್ಯಾಧಿಕಾರಿ ಇಲ್ಲಿ ಲಭ್ಯವಾಗದೆ ರೋಗಿಗಳು, ಸರಕಾರಿ ಯೋಜನೆ ಪಡೆಯಲು ಸಾರ್ವ ಜನಿಕರಿಗೆ ಸಮಸ್ಯೆ ತಲೆದೋರಿತ್ತು. ಇದೀಗ ಒಟ್ಟು 36,160 ಜನಸಂಖ್ಯೆ ಹೊಂದಿರುವ ಈ ಆರೋಗ್ಯ ಕೇಂದ್ರಕ್ಕೆ ಪರಿಣಿತ ವೈದ್ಯಾಧಿಕಾರಿಣಿಯೋರ್ವರ ಖಾಯಂ ನೇಮಕಾತಿ ಇವೆಲ್ಲಕ್ಕೂ ಮುಕ್ತಿ ನೀಡಿದೆ.
ಮುನ್ನೆಚ್ಚರಿಕೆ – ಜನಜಾಗೃತಿ
ಇವರು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜನಜಾಗೃತಿ ಮೂಡಿಸುವ ಮೂಲಕ ತನ್ನ ವ್ಯಾಪ್ತಿಯಲ್ಲಿ ಆರೋಗ್ಯ ವಾಗಿರಿಸಲು ಪ್ರಯತ್ನಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಮಳೆಗಾಲಕ್ಕೂ ಮುನ್ನವೇ ಸೂಕ್ತ ಕ್ರಮ
ಕಳೆದ ಬಾರಿ ಉದ್ಯಾವರದ ಪಿತ್ರೋಡಿ ಭಾಗದಲ್ಲಿ ಕಂಡುಬಂದ ಮೆಲಿಯೋಯಿಡೊಸಿಸ್, ಕಟಪಾಡಿ ಭಾಗದಲ್ಲಿ ಕಂಡು ಬಂದ ಶಂಕಿತ ಡೆಂಗ್ಯೂ ಜ್ವರ ಮತ್ತೆ ಪುನರಾವರ್ತನೆಯಾಗದಂತೆ ಮಳೆಗಾಲಕ್ಕೂ ಮುನ್ನವೇ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಎಂಟು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಓರ್ವ ಕಿರಿಯ ಪುರುಷ ಆರೋಗ್ಯ ಸಹಾಯಕ, ಓರ್ವ ಫಾರ್ಮಾಸಿಸ್ಟ್ , ಓರ್ವ ಶುಶ್ರೂಷಕಿ, ಪ್ರ.ದ.ಸಹಾಯಕ, ಓರ್ವ ಕಿ.ವೈ.ಪ್ರ. ಟೆಕ್ನಾಲಜಿಸ್ಟ್ ಹಾಗೂ ಗ್ರೂಪ್ ಡಿ. ಸಹಾಯಕರ ಮೂಲಕ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕರ್ತವ್ಯ ನಿಭಾಯಿಸಲು ಸಾಕಷ್ಟು ಅನುಕೂಲವಾಗಲಿದೆ. ಕಿರಿಯ ಪುರುಷ ಆರೋಗ್ಯ ಸಹಾಯಕರ ನಾಲ್ಕು ಹುದ್ದೆ ಸದ್ಯ ಖಾಲಿ ಇದೆ ಎಂದು ಮಾಹಿತಿ ನೀಡಿದರು.
ಕ್ಷಯ ರೋಗ ಪತ್ತೆ ಸಹಾಯ
ಆರು ಬೆಡ್ ಸವಲತ್ತು ಹೊಂದಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್, ಫಾರ್ಮಸಿ, ಹೊರರೋಗಿ, ಒಳರೋಗಿಗಳ ಸೂಕ್ತ ಆರೈಕೆ, ಇದೀಗ ಕ್ಷಯರೋಗ ಪತ್ತೆ ಕೂಡ ಇಲ್ಲಿಯೇ ಸಾಧ್ಯವಾಗುತ್ತಿದ್ದು, ಸರಕಾರಿ ಯೋಜನೆಗಳಿಗಾಗಿ ಫಲಾನುಭವಿಗಳ ಅಲೆದಾಟಕ್ಕೆ ಮುಕ್ತಿ ದೊರೆತಂತಾಗಿದೆ.
ಆರೋಗ್ಯ ಮಾಹಿತಿ ನೀಡಲು ಯೋಜನೆ
ಆಶಾ ಕಾರ್ಯಕರ್ತೆಯರು, ಸ್ಥಳೀಯ ಗ್ರಾ.ಪಂ., ಆರೋಗ್ಯ ಸಹಾಯಕಿಯರ ಉತ್ತಮ ಸಹಕಾರದಿಂದ ಆರೋಗ್ಯ ಮಾಹಿತಿ ನೀಡಲು ಯೋಜನೆ ರೂಪಿಸ ಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮಳೆಗಾಲಕ್ಕೂ ಮುನ್ನವೇ ಲಾರ್ವಾ ಸರ್ವೇ, ಜಾಗೃತಿ ಜಾಥಾ, ಕರಪತ್ರ ಹಂಚುವಿಕೆ, ಆರೋಗ್ಯ ಶಿಬಿರ, ಬಿ.ಪಿ.-ಶುಗರ್ ತಪಾಸಣೆ ಸಹಿತ ಎನ್‌ಸಿಡಿ ಶಿಬಿರಗಳ ಮೂಲಕ ಆರೋಗ್ಯ ಜಾಗೃತಿಗಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಬೀದಿ ಬದಿ ಆಹಾರ ಬಳಕೆಯ, ಸ್ವತ್ಛತೆಯ ಬಗ್ಗೆ ಗ್ರಾ.ಪಂ. ಸಹಕಾರದೊಂದಿಗೆ ಸೂಕ್ತ ಗಮನಹರಿಸಲಾಗುತ್ತದೆ. ಇರುವ ಎಲ್ಲ ಎಂಟೂ ಆರೋಗ್ಯ ಉಪ ಕೇಂದ್ರಗಳು ಚಟುವಟಿಕೆ ನಿರತವಾಗಿರುವಂತೆ ಕಾಯ್ದುಕೊಳ್ಳಲಾಗುತ್ತದೆ .
-ಡಾ| ಶೈನೀ, ವೈದ್ಯಾಧಿಕಾರಿ, ಮೂಡಬೆಟ್ಟು ಪಾ. ಆರೋಗ್ಯ ಕೇಂದ್ರ
ಈ ವಿಭಾಗದಿಂದ ಇನ್ನಷ್ಟು
-
ಮಣಿಪಾಲ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೀಗ ಕಂಬಳದ ಕಹಳೆಯದ್ದೇ ಸದ್ದು. ಪ್ರತಿ ಶನಿವಾರ ಒಂದಲ್ಲ ಒಂದು ಕಡೆ ಕಂಬಳ ನಡೆಯುತ್ತಿದೆ. ಅಂತೆಯೇ ಡಿಸೆಂಬರ್ 14 ಮತ್ತು...
-
ಹೆಬ್ರಿ: ಈ ಬಾರಿ ಕಾರ್ಕಳ ಕ್ಷೇತ್ರದ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಮಿಷನ್ -100 ಕಾರ್ಯಕ್ರಮದ ಅಂಗವಾಗಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ...
-
ಕುಂದಾಪುರ: ಬೆಳೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಲಾಭದಾಯಕ ಬೆಲೆ ನಿಗದಿಪಡಿಸಿ, ಕಟಾವಿಗೆ ಮೊದಲೇ ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರಗಳನ್ನು ತೆರೆಯಬೇಕು...
-
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷೆಯನ್ನು ಸುಧಾರಿಸಲು ಮತ್ತು ಉಡುಪು ಕೈಗಾರಿಕೆಯ ಅವಕಾಶ ಬಳಸಿಕೊಳ್ಳುವ ಮೊದಲ ಪ್ರಾಜೆಕ್ಟ್ಗೆ ಸಿಡ್ನಿಯ ಯುಎನ್ಎಸ್ಡಬ್ಲ್ಯು-...
-
ಉಡುಪಿ: ಇತರರೊಂದಿಗೆ ಹೊಂದಾಣಿಕೆ ಮಾಡುವಾಗ ನಮ್ಮತನ, ನಮ್ಮ ವೈಶಿಷ್ಟéಗಳನ್ನು ಬಿಡಬಾರದು ಎಂದು ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಕಿವಿಮಾತು...
ಹೊಸ ಸೇರ್ಪಡೆ
-
ಸುರತ್ಕಲ್: ಕೇಂದ್ರ ಸರಕಾರ ಫಾಸ್ಟ್ ಟ್ಯಾಗ್ ಕಡ್ಡಾಯ ಮುಂದೂಡಿದ್ದು ಶೇ 60ಕ್ಕೂ ಅ ಕ ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲ. ಹೀಗಾಗಿ ಸುರತ್ಕಲ್ ಟೋಲ್ಕೇಂದ್ರದಲ್ಲಿ...
-
ಮಡಿಕೇರಿ: ರಾಷ್ಟ್ರದಲ್ಲಿ ಶೇ.35 ರಷ್ಟು ಯುವಜನರಿದ್ದು, ಯುವ ಜನರಿಂದ ದೇಶದ ಅಭಿವೃದ್ಧಿ ಸಾಧ್ಯ. ಜೊತೆಗೆ ರಾಷ್ಟ್ರದ ಚಿತ್ರಣವನ್ನು ಬದಲಾಯಿಸುವ ಶಕ್ತಿ ಯುವಜನರಿಗಿದೆ...
-
ಗ್ವಾಲಿಯರ್: ನಿಮಗೆ ಗನ್ ಲೈಸೆನ್ಸ್ ಬೇಕೇ? ಹಾಗಿದ್ದರೆ, ಗೋಶಾಲೆಯಲ್ಲಿರುವ ಹಸುಗಳಿಗೆ 10 ಹೊದಿಕೆಗಳನ್ನು ದೇಣಿಗೆ ನೀಡಿ! ಇಂಥದ್ದೊಂದು ನಿಯಮ ಮಧ್ಯಪ್ರದೇಶದ...
-
ಟೋಕಿಯೋ: ತಾಯಿ ಕಾಣದಾದ ತತ್ಕ್ಷಣ ಮಗು ಅಳಲು ಶುರುಮಾಡುತ್ತದೆ. ಒಂದು ನಿಮಿಷವೂ ಬಿಟ್ಟಿರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ತಾಯಿಗೆ ಏನು ಮಾಡಲೂ ಸಾಧ್ಯವಾಗುವುದಿಲ್ಲ....
-
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿರುವುದನ್ನು ವಿರೋಧಿಸಿ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಲ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ...