ಕಂದಾಯ ಇಲಾಖೆ 11- ಇ ನಕ್ಷೆ   5,953 ಅರ್ಜಿ ಬಾಕಿ

ಆಕಾರ ಬಂದ್‌, ಪಹಣಿ, ಸರ್ವೇ ನಂಬರ್‌ ವ್ಯತ್ಯಾಸ

Team Udayavani, Oct 29, 2020, 4:22 AM IST

ಕಂದಾಯ ಇಲಾಖೆ 11- ಇ ನಕ್ಷೆ   5,953 ಅರ್ಜಿ ಬಾಕಿ

ಸಾಂದರ್ಭಿಕ ಚಿತ್ರ

ಉಡುಪಿ: ಭೂಮಿ ಮಾರಾಟ ಹಾಗೂ ಸಾಲ ಪಡೆಯಲು ಸಂಬಂಧಿಸಿದ ಪ್ರಮುಖ ದಾಖಲೆಯಾದ 11 -ಇ ನಕ್ಷೆ ಪಡೆಯಲು ಭೂ ಮಾಲಕರು ಪರದಾಡುತ್ತಿದ್ದಾರೆ.

ಸಾರ್ವಜನಿಕರ ಅಲೆದಾಟ
ಸಾರ್ವಜನಿಕರು 11 -ಇ ನಕ್ಷೆ ಕೋರಿ ಸಹಾಯಕ ಭೂ ದಾಖಲೆ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದಾಗ, ದಾಖಲೆಯಲ್ಲಿ ಆಕಾರ ಬಂದ್‌ ಮತ್ತು ಪಹಣಿ ದಾಖಲೆ ವ್ಯತ್ಯಾಸವಿದ್ದಲ್ಲಿ ಅಥವಾ ಪಹಣಿ ಲೋಪ-ದೋಷ ಇರುವ ಪ್ರಕರಣಗಳಲ್ಲಿ ಸಂಬಂಧಪಟ್ಟ ತಾಲೂಕು ತಹಶೀಲ್ದಾರ್‌ಗೆ
ಕಡತವನ್ನು ವರ್ಗಾಯಿಸಲಾಗುತ್ತದೆ. ಇಂತಹ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ತ್ವರಿತ ಅರ್ಜಿ ವಿಲೇವಾರಿ ಮಾಡದ ಪರಿಣಾಮ ಜನರು 4-5 ವರ್ಷ ಗಳಿಂದ ತಾಲೂಕು ಕಚೇರಿಗಳಿಗೆ ಅಲೆದಾಡುವಂತಾಗಿದೆ.

ಸಮಸ್ಯೆ ಏನು?
ಸರ್ವೇ ನಂಬರ್‌, ಆಕಾರ ಬಂದ್‌, ಪಹಣಿ ವಿಸ್ತೀರ್ಣ ಈ ಮೂರು ದಾಖಲೆಗಳಲ್ಲಿ ಒಂದಕ್ಕೊಂದು ವ್ಯತ್ಯಾಸ ಕಂಡುಬಂದಂತೆ ಅರ್ಜಿಗಳ ವಿಲೇ ವಾರಿಗೆ ತೊಡಕುಂಟಾಗುತ್ತದೆ. ಸಾರ್ವ ಜನಿಕರು “ಇ’ ನಕ್ಷೆಗೂ ಮೊದಲೇ ದಸ್ತಾವೇಜು ಮೂಲಕ ಜಮೀನುಗಳು ವಹಿವಾಟುಗೊಂಡಿರುವಂತಹ ಪ್ರಕರಣದಲ್ಲಿ ಅರ್ಜಿ ವಿಲೇವಾರಿಗೆ ಸಮಸ್ಯೆಯಾಗಿದೆ. “ಇ’ ನಕ್ಷೆಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಕಾರ ಬಂದ್‌ ವಿಸ್ತೀರ್ಣ, ಪಹಣಿ ವಿಸ್ತೀರ್ಣ ಹೆಚ್ಚಾಗಿರುತ್ತದೆ. ಈ ಸಂದರ್ಭ ಪಹಣಿಯ ವಿಸ್ತೀರ್ಣ ಕಡಿತಗೊಳಿಸಲು ಇಲಾಖೆಯಿಂದ ನೋಟಿಸ್‌ ನೀಡಲಾಗುತ್ತದೆ. ಇದಕ್ಕೆ ಒಪ್ಪದ ಪಹಣಿದಾರರು ಆಕ್ಷೇಪಣೆ ಸಲ್ಲಿಸುತ್ತಿರುವುದ ರಿಂದ ಇತ್ಯರ್ಥ ಮಾಡುವುದು ಇಲಾ ಖೆಗೂ ತಲೆನೋವಾಗಿದೆ. ಕಂದಾಯ ಸಂಬಂಧಿತ ಸೇವೆಯಲ್ಲಿ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಆದರೆ ಕಂದಾಯ ವಿಭಾಗದಲ್ಲಿ ಭೂಮಿ, ಕೃಷಿ ಜಮೀನು ಮಾರಾಟಕ್ಕೆ ಸಂಬಂಧಿಸಿ ಪ್ರಮುಖ ದಾಖಲೆಯಾದ 11-ಇ ನಕ್ಷೆ ಪಡೆ ಯಲು ಸಾರ್ವಜನಿಕರಿಗೆ ಸಾಕಷ್ಟು ತೊಡಕುಂಟಾಗಿದೆ.

324 ಅರ್ಜಿ ಮಾತ್ರ ವಿಲೇವಾರಿ
ಜಿಲ್ಲೆಯಲ್ಲಿ 11 – ಇ ನಕ್ಷೆಗೆ ಸಂಬಂಧಿಸಿ ಸೆಪ್ಟಂಬರ್‌ನಲ್ಲಿ ಹೊಸದಾಗಿ 356 ಅರ್ಜಿಗಳು ಸ್ವೀಕೃತವಾಗಿವೆ. ಅದರಲ್ಲಿ ಕಳೆದ ತಿಂಗಳವರೆಗೆ 324 ಅರ್ಜಿಗಳು ವಿಲೇವಾರಿಯಾಗಿ 5,953 ಅರ್ಜಿಗಳು ಬಾಕಿಯಿವೆ. ಆಕಾರ ಬಂದ್‌,  ಪಹಣಿ, ಸರ್ವೇ ನಂಬರ್‌ ವ್ಯತ್ಯಾಸಗಳಿಂದಾಗಿ ಅರ್ಜಿಗಳು ಬಾಕಿ ಇವೆ. ಕುಂದಾಪುರ 1,250, ಉಡುಪಿ 824, ಕಾರ್ಕಳ 710, ಬೈಂದೂರು 1,381, ಬ್ರಹ್ಮಾವರ 717, ಕಾಪು 699, ಹೆಬ್ರಿಯಲ್ಲಿ 372 ಅರ್ಜಿಗಳು ಬಾಕಿ ಇವೆ.

ಆದ್ಯತೆ ಮೇರೆಗೆ ವಿಲೇವಾರಿ
ಸರ್ವೇ ನಂಬರ್‌, ಆಕಾರ ಬಂದ್‌, ಪಹಣಿ ವಿಸ್ತೀರ್ಣ ದಾಖಲೆಗಳಲ್ಲಿ ಒಂದಕ್ಕೊಂದು ವ್ಯತ್ಯಾಸ ಕಂಡುಬಂದಂತಹ ಅರ್ಜಿಗಳ ವಿಲೇವಾರಿಗೆ ಮಾತ್ರ ತೊಡಕುಂಟಾಗಿದೆ. ಆದ್ಯತೆ ಮೇರೆಗೆ ಪ್ರಕರಣ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ
ಸೂಚನೆ ನೀಡಲಾಗಿದೆ.
-ಜಿ.ಜಗದೀಶ್‌, ಜಿಲ್ಲಾಧಿಕಾರಿ, ಉಡುಪಿ.

ಟಾಪ್ ನ್ಯೂಸ್

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತ ಅರ್ಜಿಗಳು : ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಕುರಿತ ಅರ್ಜಿಗಳು :ತೀರ್ಪು ಕಾಯ್ದಿರಿಸಿದ ಹೈಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sdsad

ಕಾರ್ಕಳ : ಖ್ಯಾತ ಜ್ಯೋತಿಷಿ ರಾಜಗೋಪಾಲ್ ಭಟ್ ವಿಧಿವಶ

ಸಿ.ಎ. ಸೈಟ್‌ಗೆ ಸಂಘ-ಸಂಸ್ಥೆಗಳ ನಿರಾಸಕ್ತಿ

ಸಿ.ಎ. ಸೈಟ್‌ಗೆ ಸಂಘ-ಸಂಸ್ಥೆಗಳ ನಿರಾಸಕ್ತಿ

“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’

“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’

ವಿದ್ಯಾಪೋಷಕ್‌ನಿಂದ 74.1 ಲಕ್ಷ ರೂ. ಸಹಾಯಧನ

ವಿದ್ಯಾಪೋಷಕ್‌ನಿಂದ 74.1 ಲಕ್ಷ ರೂ. ಸಹಾಯಧನ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

MUST WATCH

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

udayavani youtube

ಮೃತ ಗೋವುಗಳನ್ನು ವಾಹನಕ್ಕೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದ ಸಿಬ್ಬಂದಿ : ಆಕ್ರೋಶ

udayavani youtube

ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮೈತ್ರಿ ಇಲ್ಲ: ಬಿಎಸ್‌ವೈ

ಹೊಸ ಸೇರ್ಪಡೆ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಎಟಿಎಂ ದರೋಡೆ ಪ್ರಕರಣ: ಅರ್ಧದಷ್ಟು ಕೇಸ್‌ ಬಾಕಿ

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಪಕ್ಷದ ನೂತನ ಕಚೇರಿ ತೆರೆದ ಅಮರೀಂದರ್‌ ಸಿಂಗ್‌

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ಸಂಸತ್‌ ಟಿವಿಯಿಂದ ಹೊರಬಂದ ಶಶಿ ತರೂರ್‌

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

ನಡುರಸ್ತೆಯಲ್ಲಿ ಪತ್ನಿ ಎದುರೇ ರೌಡಿಶೀಟರ್‌ ಕೊಲೆಗೆ ಯತ್ನ : ನಾಲ್ವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.