ವಾಹನಗಳ ಹೊಗೆ ಮಾಲಿನ್ಯ ಹಾವಳಿಗೆ ಬಿಸಿ ಮುಟ್ಟಿಸಿದ ಪರಿಷ್ಕೃತ ದಂಡ!

Team Udayavani, Sep 11, 2019, 5:49 AM IST

ಉಡುಪಿ: ಹೊಗೆ ತಪಾಸಣೆ (ಎಮಿಷನ್‌ ಟೆಸ್ಟ್‌) ಕೇಂದ್ರದಲ್ಲಿ ಭಾರೀ ಸಂಖ್ಯೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯಗಳು ನಗರದಲ್ಲಿ ಸೋಮವಾರ ಕಂಡು ಬಂದಿವೆ.

ಕೇಂದ್ರ ಸರಕಾರ ಮೋಟರ್‌ ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಮುಂದಾಗಿದೆ. ವಾಹನ ತಪಾಸಣೆ ಮಾಡುವ ಸಂದರ್ಭ ಗಣಕೀಕೃತ ಹೊಗೆ ತಪಾಸಣೆ ಕೇಂದ್ರದಲ್ಲಿ ಪರೀಕ್ಷೆ ಮಾಡಿ ಮಾಲಿನ್ಯಕಾರವಲ್ಲ ಎನ್ನುವ ಪ್ರಮಾಣ ಪತ್ರ ಹೊಂದಿರದ ವಾಹನ ಮಾಲಕನಿಗೆ ಭಾರೀ ದಂಡ ವಿಧಿಸಲಾಗುತ್ತಿದೆ.

ದಂಡಕ್ಕೆ ಬೆಚ್ಚಿದ ವಾಹನ ಸವಾರರು

ಪ್ರತಿ ಆರು ತಿಂಗಳಿಗೊಮ್ಮೆ ಗಣಕೀ ಕೃತ ಹೊಗೆ ತಪಾಸಣೆ ಕೇಂದ್ರದಿಂದ ವಾಹನಗಳ ಹೊಗೆ ತಪಾಸಣೆಯಾಗಬೇಕು. ಆದರೆ ಹೆಚ್ಚಿನ ವಾಹನಗಳ ಸವಾರರು ಈ ನಿಯಮವನ್ನು ಪಾಲಿಸುತ್ತಿಲ್ಲ. ಇದೀಗ ನಿಯಮ ಪಾಲಿಸಿದವರಿಗೆ 1,000 ರೂ. ದಂಡ ವಿಧಿಸಲಾಗುತ್ತಿದೆ. 50 ರೂ., 100 ರೂ.ನಲ್ಲಿ ಮುಗಿಯುವ ತಪಾಸಣೆಗೆ ಯಾಕೆ ಭಾರೀ ತಂಡ ಕಟ್ಟಬೇಕು ಎನ್ನುವುದನ್ನು ಅರಿತ ವಾಹನ ಸವಾರರು ಎಮಿಷನ್‌ ಟೆಸ್ಟ್‌ ಕೇಂದ್ರಕ್ಕೆ ಲಗ್ಗೆಯಿಟ್ಟಿದ್ದಾರೆ.

ಸರ್ವರ್‌ ಸಮಸ್ಯೆ

ವಾಹನಗಳ ಎಂಜಿನ್‌ ಸರಿಯಿದ್ದರೆ ಮಾಲಿನ್ಯ ಕಾರಕ ಹೊಗೆ ಇರುವುದಿಲ್ಲ. ಆಗ ಹೊಗೆ ಪರೀಕ್ಷೆ ಒಂದು ನಿಮಿಷದಲ್ಲಿ ಮುಗಿಯುತ್ತದೆ. ಮಾಲಿನ್ಯಕಾರಕವಾಗಿದ್ದರೆ ಮಾತ್ರ ಪರೀಕ್ಷೆಗೆ ಎರಡು-ಮೂರು ನಿಮಿಷಗಳು ಬೇಕಾಗುತ್ತದೆ. ಇದು ಆನ್‌ಲೈನ್‌ ಮೂಲಕ ನಡೆಯುವ ಪ್ರಕ್ರಿಯೆ. ದಂಡಕ್ಕೆ ಬೆಚ್ಚಿದ ಸವಾರರು ಎಲ್ಲ ಕಡೆ ಒಮ್ಮೆಲೆ ವಾಹನಗಳು ಹೊಗೆ ಪರೀಕ್ಷೆಗೆ ಬಂದಿರುವುದರಿಂದ ಸರ್ವರ್‌ ಕೊಂಚ ಸಮಸ್ಯೆ ಉಂಟಾಗಿದೆ.

ವಾಹನಗಳ ಸಂಖ್ಯೆ ಹೆಚ್ಚಳ

ವಾಹನಗಳ ಹೊಗೆ ತಪಾಸಣೆಗೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ ಎರಡು ಬಂದರೆ ಅದೇ ಹೆಚ್ಚಿತ್ತು. ಸೆ. 9ರಂದು ಬಂದ ಶೇ. 80ರಷ್ಟು ವಾಹನಗಳ ಹೊಗೆ ತಪಾಸಣೆ ಪ್ರಮಾಣ ಪತ್ರದ ಅವಧಿ ಮುಕ್ತಾಯವಾಗಿ ತಿಂಗಳಾಗಿತ್ತು. -ಸತೀಶ್‌ ಶೆಟ್ಟಿ, ಎಮಿಷನ್‌ ಟೆಸ್ಟ್‌ ಸೆಂಟರ್‌ ಮಾಲಕ
ಮುಂಚಿತವಾಗಿ ಟೆಸ್ಟ್‌

ನನ್ನ ವಾಹನದ ಹೊಗೆ ತಪಾಸಣೆ ಪ್ರಮಾಣಪತ್ರದ ಅವಧಿ ನಾಳೆಗೆ ಮುಕ್ತಾಯವಾಗುತ್ತದೆ. ಕೆಲಸದ ಒತ್ತಡದಲ್ಲಿ ಮರೆತರೆ ಭಾರೀ ದಂಡ ತೆರಬೇಕಾಗುತ್ತದೆ. ಅದಕ್ಕಾಗಿ ಒಂದು ದಿನ ಮುಂಚಿತವಾಗಿ ಎಮಿಷನ್‌ ಟೆಸ್ಟ್‌ ಕೇಂದ್ರಕ್ಕೆ ಬಂದಿದ್ದೇನೆ.
– ರೂಪಾ,ಉಡುಪಿ
ಅಧಿಕ ದಂಡ ವಿಧಿಸಲು ಆರಂಭಿಸಿರುವುದು ವಾಹನ ಚಾಲಕರಲ್ಲಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮಾಡಿದೆ. ಹೊಗೆ ತಪಾಸಣೆ ಮಾಡದೆ ಇರುವ ವಾಹನಗಳು ಎಮಿಷನ್‌ ಟೆಸ್ಟ್‌ ಕೇಂದ್ರಕ್ಕೆ ಲಗ್ಗೆಯಿಟ್ಟಿವೆ. ಪ್ರಮಾಣ ಪತ್ರವಿಲ್ಲದ ವಾಹನಗಳು ರಸ್ತೆಗೆ ಬರಲು ಹಿಂದೇಟು ಹಾಕುತ್ತಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ