ಕುಂದಾಪುರ: ತೆರಾಲಿ ಪೂರ್ವಭಾವಿ ಭ್ರಾತೃ ಬಾಂಧವ್ಯ ದಿನ


Team Udayavani, Nov 27, 2018, 2:35 AM IST

terali-26-11.jpg

ಕುಂದಾಪುರ: ಉಡುಪಿ ಧರ್ಮ ಪ್ರಾಂತದಲ್ಲೇ ಅತ್ಯಂತ ಪುರಾತನವಾದ, ಪವಿತ್ರ ರೋಜರಿ ಮಾತೆಗೆ ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನಡೆಯುವ ಕೊಂಪ್ರಿ ಆಯ್ತಾರ್‌ ಭ್ರಾತೃ ಬಾಂಧವ್ಯ ದಿನವನ್ನು ಪ್ರಭು ಏಸುವಿನ ದಯೆ ನಮಗೆಲ್ಲರಿಗೂ ಪ್ರೇರಣೆ ಎಂಬ ಧ್ಯೇಯದೊಂದಿಗೆ ಪರಮ ಪ್ರಸಾದದ ಆರಾಧನೆ ರವಿವಾರ ನಡೆಯಿತು.

ಪವಿತ್ರ ರೋಜರಿ ಮಾತಾ ದೇವಾಲಯದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತರು, ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳಗಿಸಿದ ಬಣ್ಣದ ಮೇಣದ ಬತ್ತಿಗಳನ್ನು ಹಿಡಿದುಕೊಂಡು ಭಕ್ತಿ ಗಾಯನ, ಸಂಗೀತ, ಬ್ಯಾಂಡ್‌, ಬಣ್ಣ ಬಣ್ಣದ ಕೊಡೆಗಳೊಡನೆ, ಗಾಯನ ಮಂಡಳಿಯೊಡನೆ ವಿದ್ಯುತ್‌ ದೀಪಗಳ ಅಲಂಕೃತದೊಂದಿಗೆ ಪರಮ ಪ್ರಸಾದದ ಪುರಮೆರವಣಿಗೆಯನ್ನು ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದೊಂದಿಗೆ ಭಕ್ತಿ ಮತ್ತು ಶಿಸ್ತಿನಿಂದ ನಡೆಸಲಾಯಿತು. ಅನಂತರ ಸಂತ ಮೇರಿಸ್‌ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನಡೆಯಿತು.

ಧಾರ್ಮಿಕ ವಿಧಿಯನ್ನು ನಡೆಸಿದ ಗಂಗೊಳ್ಳಿ ಚರ್ಚ್‌ನ ಧರ್ಮಗುರು ಫಾ| ಆಲ್ಬರ್ಟ್‌ ಕ್ರಾಸ್ತಾ, ನನಗೆ ಯಜ್ಞ ಬಲಿಯಲ್ಲ, ನನಗೆ ಬೇಕು ದಯೆ, ಕ್ಷಮೆ, ಇತರರು ಕಷ್ಟದಲ್ಲಿರುವಾಗ ನೆರವಾಗುವುದು, ಉಪವಾಸ ಇದ್ದವರಿಗೆ ಉಣ್ಣಲು ಕೊಡುವುದು, ಬಟ್ಟೆ ಇಲ್ಲದಿದವರಿಗೆ ಬಟ್ಟೆ ಕೊಡುವುದು, ರೋಗಿಗಳನ್ನು, ಪಾಪಿಗಳನ್ನು ಪ್ರೀತಿಸುವುದು ನಮಗೆ ಯೇಸು ಹೇಳಿಕೊಟ್ಟ ಬೋಧನೆಗಳು. ಇದನ್ನೆಲ್ಲ ಪಾಲಿಸುವ ಇತರರನ್ನು ಪ್ರೀತಿಸುವ ಈ ಜಗತ್ತಿನಲ್ಲಿರುವ ನಾವು ಎಲ್ಲರೂ ಒಟ್ಟುಗೂಡಿ ಬಾಳ್ಳೋಣ ಎಂದು ಅವರು ಸಂದೇಶ ನೀಡಿ ಪರಮ ಪ್ರಸಾದದ ರೂಪದಲ್ಲಿರುವ ಏಸುವಿನ ಆಶೀರ್ವಾದವನ್ನು ನೀಡಿದರು.

ಈ ಧಾರ್ಮಿಕ ವಿಧಿಯ ನೆರವೇರಿಕೆಯಲ್ಲಿ ಕುಂದಾಪುರ ರೋಜರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಫಾ|ಸ್ಟ್ಯಾನಿ ತಾವ್ರೊ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡು ವಂದಿಸಿದರು. ಸಹಾಯಕ ಧರ್ಮಗುರು ಫಾ| ರೋಯ್‌ ಲೋಬೊ ಇದೇ ದಿನ ಜಗತ್ತಿನೆಲ್ಲೆಡೆ ಕ್ರೈಸ್ತ ರಾಜಾರ ಹಬ್ಬವನ್ನು ಆಚರಿಸುವ ದಿನದ ಮಹತ್ವವನ್ನು ತಿಳಿಸಿದರು. ಸಂತ ಮೇರಿಸ್‌ ಜೂ. ಕಾಲೇಜಿನ ಪ್ರಾಂಶುಪಾಲ ಧರ್ಮಗುರು ಫಾ| ಪ್ರವೀಣ್‌ ಅಮೃತ್‌ ಮಾರ್ಟಿಸ್‌ ಕಾರ್ಯ ಕ್ರಮಕ್ಕೆ ಸಹಕರಿಸಿದರು. ಕಾರ್ಯಕ್ರಮದ ಪೋಷಕಿ ಕ್ಲೊಟಿಲ್ಡಾ ಡಿ’ಸಿಲ್ವ  ಪ್ರಸ್ತುತಪಡಿಸಿದರು.

ಟಾಪ್ ನ್ಯೂಸ್

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.