ಸ್ಕೂಟಿಗೆ ಕಾರು ಢಿಕ್ಕಿ: ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ತೀವ್ರ ಗಾಯ
Team Udayavani, May 20, 2022, 8:38 PM IST
ಪಡುಬಿದ್ರಿ : ಕಂಚಿನಡ್ಕ ಟಿವಿಎಸ್ ಶೋ ರೂಮ್ ಎದುರು ರಾಜ್ಯ ಹೆದ್ದಾರಿಯಲ್ಲಿ ಮೇ 19ರಂದು ಸ್ಕೂಟಿಗೆ ಕಾರೊಂದು ಢಿಕ್ಕಿಯಾಗಿ ಎಲ್ಲೂರು ಗ್ರಾ. ಪಂ. ಅಧ್ಯಕ್ಷ ಜಯಂತ್ ರಾವ್ ತೀವ್ರ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾರ್ನಾಡಿನಿಂದ ನಂದಿಕೂರು ಕಡೆಗೆ ಪುತ್ರಿ ಚಲಾಯಿಸುತ್ತಿದ್ದ ಸ್ಕೂಟಿಯಲ್ಲಿ ಸಹ ಸವಾರರಾಗಿ ಕುಳಿತು ಬರುತ್ತಿದ್ದಾಗ ಕಾರ್ಕಳ ಕಡೆಯಿಂದ ಕಾರೊಂದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಢಿಕ್ಕಿ ಹೊಡೆದಿದ್ದಾನೆ. ಕಾರು ಹೊಡೆದ ರಭಸಕ್ಕೆ ದ್ವಿಚಕ್ರ ವಾಹನದಿಂದ ರಸ್ತೆಗೆ ಉರುಳಿ ಬಿದ್ದ ಜಯಂತ್ ರಾವ್ ಬೆನ್ನು ಹುರಿ, ಕೈ, ಕಾಲು, ಪಕ್ಕೆಲುಬುಗಳಿಗೆ ತೀವ್ರತರ ಗಾಯಗಳಾಗಿವೆ.
ಪುತ್ರಿ ಗೌತಮಿಯ ಬಲಗೈ ಮೂಳೆ ಮುರಿತ ಹಾಗೂ ಎಡಕಾಲಿನ ಗಂಟಿಗೆ ಗಾಯವಾಗಿದೆ. ಈರ್ವರನ್ನೂ ಪ್ರಥಮ ಚಿಕಿತ್ಸೆ ಬಳಿಕ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಆರೂವರೆ ವರ್ಷಗಳ ನಂತರ ಜೈಲಿನಿಂದ ಹೊರಬಂದ ಇಂದ್ರಾಣಿ ಮುಖರ್ಜಿ