
ಸೊಂಟದ ಮೇಲೆ ಹರಿದ ಬಸ್ ಚಕ್ರ; ವ್ಯಕ್ತಿ ಸಾವು
Team Udayavani, Nov 28, 2022, 12:46 AM IST

ಸಿದ್ದಾಪುರ: ಅಲ್ಬಾಡಿ ಗ್ರಾಮದ ಕೊಂಜಾಡಿ ಹಳನೀರುಬೆಟ್ಟು ಚಂದ್ರಶೇಖರ ಅವರು ನ. 26ರಂದು ಕೊಂಜಾಡಿ ಬಳಿ ಬಸ್‌ಗೆ ವೀಳ್ಯದೆಲೆ ಪಾರ್ಸೆಲ್ ಕೊಟ್ಟು ಬಸ್‌ನಿಂದ ಕೆಳಗಿಳಿಯುವಾಗ ಬಿದ್ದಿದ್ದು, ಈ ಸಂದರ್ಭ ಅವರ ಸೊಂಟದ ಮೇಲೆ ಬಸ್ ಚಕ್ರ ಹರಿದ ಪರಿಣಾಮ ಅವರು ಮೃತಪಟ್ಟಿದ್ದಾರೆ.
ಚಂದ್ರಶೇಖರ್ ಅವರು ಬಸ್‌ನಿಂದ ಕೆಳಗೆ ಇಳಿಯುವ ಮೊದಲೇ ನಿರ್ವಾಹಕ ಸೂಚನೆ ಕೊಟ್ಟ ಪರಿಣಾಮ ಬಸ್ ಚಾಲಕ ಒಮ್ಮೆಲೆ ಬಸ್ ಚಲಾಯಿಸಿದ್ದರು. ಬಸ್‌ನಿಂದ ಕೆಳಗೆ ಬಿದ್ದ ಪರಿಣಾಮ ಚಂದ್ರಶೇಖರ ಅವರ ಸೊಂಟದ ಮೇಲೆ ಬಸ್ ಚಕ್ರ ಹತ್ತಿ ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುದ್ದಾಗಿ ತಿಳಿಸಿದ್ದಾರೆ.
ಪುತ್ರ ಅರುಣ್ ನಾಯ್ಕ ಅವರು ನೀಡಿರುವ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
