ರಾಡಿಯೆದ್ದ ಉಪ್ಪಿನಕುದ್ರು – ಬೇಡರಕೊಟ್ಟಿಗೆ ರಸ್ತೆ

Team Udayavani, Jul 22, 2019, 5:52 AM IST

ಕುಂದಾಪುರ: ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ಉಪ್ಪಿನಕುದ್ರು ಶಾಲೆ ಬಳಿಯಿಂದ ಬೇಡರಕೊಟ್ಟಿಗೆ ಕಡೆಗೆ ಸಂಚರಿಸುವ ರಸ್ತೆಗೆ ಈ ಬಾರಿಯೂ ಡಾಮರೀಕರಣವಾಗದೆ ರಾಡಿಯೆದ್ದು ಹೋಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಬೇಡರಕೊಟ್ಟಿಗೆಯ ಬೊಬ್ಬರ್ಯ ದೈವಸ್ಥಾನದವರೆಗಿನ ಸುಮಾರು 2 ಕಿ.ಮೀ. ರಸ್ತೆಗೆ ಕಾಂಕ್ರಿಟೀಕರಣಕ್ಕೆ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಮಂಜೂರಾಗಿತ್ತು. ಆದರೆ ಮಳೆಗಾಲಕ್ಕೂ ಮುನ್ನ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಸಮಸ್ಯೆಯಾಗಿದೆ.ಈ ರಸ್ತೆಯ ಎರಡೂ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಸ್ವಲ್ಪ ದೂರದವರೆಗೆ ಜಲ್ಲಿ ಕಲ್ಲು ಹಾಕಲಾಗಿದೆ.

ಮತ್ತೆ ಉಳಿದ ರಸ್ತೆಯಿಡೀ ಕೆಸರುಮಯವಾಗಿದ್ದು, ವಾಹನ ಸವಾರರು ನಿತ್ಯ ಪರದಾಟ ನಡೆಸುತ್ತಿದ್ದಾರೆ.ಕನಿಷ್ಠ ಗ್ರಾಮ ಪಂಚಾಯತ್‌ ವತಿಯಿಂದಲಾದರೂ ಈ ರಸ್ತೆಗೆ ಜಲ್ಲಿ ಮಿಶ್ರಿತ ಮರಳನ್ನು ಹಾಕಿ, ಕೆಸರುಮಯ ರಸ್ತೆಯಿಂದ ಮುಕ್ತಿ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ