Udayavni Special

ನಗರಸಭೆ ವ್ಯಾಪ್ತಿಯಲ್ಲಿ “ಸಾಹಸ್‌’ ಸಾಹಸ

ಒಣ, ಹಸಿ ಕಸ ಸಂಗ್ರಹಿಸಿ ವಿಲೇವಾರಿ

Team Udayavani, Nov 23, 2019, 4:12 AM IST

tt-2

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ 8 ವಾರ್ಡ್‌ಗಳ ಮನೆ ಮನೆಗಳಿಂದ ಕಸ ಸಂಗ್ರಹಿಸಿ ವಿಂಗಡಿಸುವ ಸಾಹಸ್‌ ಯೋಜನೆ ಎರಡು ತಿಂಗಳಿನಿಂದ ಜಾರಿಯಲ್ಲಿದೆ. ಮರುಬಳಕೆಯಾಗದಿರುವ ಪ್ಲಾಸ್ಟಿಕ್‌ಗಳನ್ನು ಗುಲ್ಬರ್ಗದ ಸಿಮೆಂಟ್‌ ಕಾರ್ಖಾನೆಗಳಿಗೆ ರವಾನಿಸುವ ಕೆಲಸವೂ ನಡೆಯುತ್ತಿದೆ.

ಬೆಂಗಳೂರಿನ ಸಾಹಸ್‌ ಎನ್‌ಜಿಒ ಸಂಸ್ಥೆ ನೆರವಿನಿಂದ ಬೀಡಿನಗುಡ್ಡೆಯಲ್ಲಿ 4 ಲಕ್ಷ ರೂ. ವೆಚ್ಚದ ಯಂತ್ರ ಸ್ಥಾಪಿಸಿದ್ದು, ನಿತ್ಯ 400 ಕೆ.ಜಿ.ಗಳಷ್ಟು ಒಣ ಕಸವನ್ನು ಬೇರ್ಪಡಿಸಿ ದಾಸ್ತಾನಿಟ್ಟು ಏಲಂ ಹಾಕಲಾಗುತ್ತಿದೆ. ಎರಡು ತಿಂಗಳಿನಿಂದ ಪ್ರತಿದಿನ 10 ಮಂದಿ ಕಸ ವಿಂಗಡಣೆಯಲ್ಲಿ ತೊಡಗಿದ್ದು, ಕಲ್ಮಾಡಿ, ಕೊಡವೂರು, ಮೂಡಬೆಟ್ಟು, ನಿಟ್ಟೂರು, ಕೊಡಂಕೂರು, ಬಡಗಬೆಟ್ಟು, ಬೈಲೂರು, ಗೋಪಾಲಪುರ ವಾರ್ಡ್‌ನಿಂದ ಒಣ ಹಾಗೂ ಹಸಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ.

ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರವಾನೆ ಬೀಡಿನಗುಡ್ಡೆಯಲ್ಲಿ ಹಸಿ ಕಸದಿಂದ ವಿದ್ಯುತ್‌ ಉತ್ಪಾದನೆ ಮಾಡುವ 2 ಟನ್‌ ಸಾಮರ್ಥ್ಯದ ಘಟಕವಿದ್ದು, ಎಂಟು ವಾರ್ಡ್‌ಗಳಲ್ಲಿ ನಿತ್ಯ ಸಂಗ್ರಹವಾಗುವ 4,000 ಕೆಜಿ ಹಸಿ ಕಸದಲ್ಲಿ ಒಂದು ಪಾಲು ನೀಡಿ ಉಳಿದಿರುವುದನ್ನು ಅಲೆವೂರಿನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ರವಾನಿಸಲಾಗುತ್ತಿದೆ.

ಕಾನೂನು ಕ್ರಮ ಕೈಗೊಳ್ಳಲು ಅವಕಾಶ
ಅಲೆವೂರಿನ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಿತ್ಯ 65ರಿಂದ 70 ಟನ್‌ಗಳಷ್ಟು ತ್ಯಾಜ್ಯವನ್ನು ವಿಲೇವಾರಿ ಮಾಡಲಾಗುತ್ತದೆ. ಇದರಲ್ಲಿ ಪ್ಲಾಸ್ಟಿಕ್‌ ಪಾಲು 2ರಿಂದ 3 ಟನ್‌ನಷ್ಟು ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದರಲ್ಲಿ ಪ್ಲಾಸ್ಟಿಕ್‌ ಪಾಲು 2ರಿಂದ 3 ಟನ್‌ನಷ್ಟಿದ್ದು, ಇದನ್ನು ಪ್ರತ್ಯೇಕಿಸಿದರೆ ಘಟಕದಲ್ಲಿ ಪ್ಲಾಸ್ಟಿಕ್‌ ಲ್ಯಾಂಡ್‌ ಫಿಲ್ಲಿಂಗ್‌ ಸೇರುವುದನ್ನು ತಪ್ಪಿಸಬಹುದು.ಮಾರಾಟ ಮಡಿ ದುಡ್ಡುಗಳಿಸಬಹುದಾಗಿದೆ. ಇಷೇಧಿತ ಪ್ಲಾಸ್ಟಿಕ್‌ ಬಳಕೆ ತಡೆಗೆ ರಾಷ್ಟ್ರೀಯ ಹಸಿರು ಪೀಠವು 2019ರ ಆ.27ರಂದು ಆದೇಶ ಹೊರಡಿಸಿದೆ. ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಮಾರಾಟ ಕಂಡುಬಂದರೆ ಮೊದಲ ಬಾರಿಗೆ 1ಸಾವಿರ ರೂ., ಎರಡನೇ ಬಾರಿಗೆ 2 ಸಾವಿರ ರೂ.ದಂಡ ವಿಧಿಸಿ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿ ಉದ್ದಿಮೆ ಪರವಾನಿಗೆ ರದ್ದುಗೊಳಿಸಿ ಕಾನೂನುಕ್ರಮ ಕೈಗೊಳ್ಳಲು ಅವಕಾಶವಿದೆ.

ತ್ಯಾಜ್ಯ ವಿಲೇವಾರಿಗೆ ಗಮನ
ಎಂಟು ವಾರ್ಡ್‌ಗಳಲ್ಲಿ ನಡೆಯು ತ್ತಿರುವ ಹಸಿ, ಒಣ ಕಸ ಸಂಗ್ರಹ ಹಾಗೂ ಒಣಕಸ ಪ್ರತ್ಯೇಕಿಸಿ ವಿಲೇವಾರಿ ಮಾಡುವ ಯೋಜನೆ 35 ವಾರ್ಡ್‌ಗಳಿಗೂ ವಿಸ್ತರಣೆಯಾಗಲಿದೆ. ಒಂದೊಂದು ವಾರ್ಡ್‌ಗೆ ಒಂದೊಂದು ವಾಹನ ಖರೀದಿಗೆ ಉದ್ದೇಶಿಸಿದ್ದು, ವ್ಯವಸ್ಥಿತ ತ್ಯಾಜ್ಯ ವಿಲೇವಾರಿ ಮಾಡಲು ಗಮನಹರಿಸಲಾಗುತ್ತಿದೆ.
-ಆನಂದ ಕಲ್ಲೋಳಿಕರ್‌, ಆಯುಕ್ತರು ಉಡುಪಿ ನಗರಸಭೆ

ಜನರಿಗೆ ಜಾಗೃತಿ
ನಗರಸಭೆ ವ್ಯಾಪ್ತಿಯಲ್ಲಿ 2016ರ ಆಗಸ್ಟ್‌ನಿಂದ 1350 ಕೆ.ಜಿ.ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದೆ. ನಿಷೇಧಿತ ಪ್ಲಾಸ್ಟಿಕ್‌ ಸಾಗಾಟ, ಮಾರಾಟದ ಮೇಲೆ ಕ್ರಮಜರಗಿಸಲಾಗುತ್ತಿದೆ. ಎಪಿಎಂಸಿಯ ಬುಧವಾರದ ಸಂತೆ, ಕಲ್ಯಾಣಪುರದ ರವಿವಾರದ ಸಂತೆಯಲ್ಲೂ ಪ್ಲಾಸ್ಟಿಕ್‌ ನಿಷೇಧ ಜಾರಿ ಜತೆಗೆ ಬಟ್ಟೆ ಚೀಲ ಬಳಕೆ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

ಸಿಮೆಂಟ್‌ ಕಾರ್ಖಾನೆಗೆ ರವಾನೆ
ಮರುಬಳಕೆಯಾಗದ ಪ್ಲಾಸ್ಟಿಕ್‌ಗಳನ್ನು ಗುಲ್ಬರ್ಗದ ಸಿಮೆಂಟ್‌ ಕಾರ್ಖಾನೆಗೆ ರವಾನಿಸುವ ಕೆಲಸ ಫೆ.23ರಿಂದ ಆರಂಭಗೊಂಡಿದ್ದು, ಇದುವರೆಗೆ 41,885ಕೆ.ಜಿ. ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ರವಾನಿಸಲಾಗಿದೆ.

-ಪುನೀತ್‌ ಸಾಲ್ಯಾನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಡುಪಿ: ಗರಿಷ್ಠ 402 ಪಾಸಿಟಿವ್‌, 2 ಸಾವು; 7,000 ದಾಟಿದ ಒಟ್ಟು ಪ್ರಕರಣ

ಉಡುಪಿ: ಗರಿಷ್ಠ 402 ಪಾಸಿಟಿವ್‌, 2 ಸಾವು; 7,000 ದಾಟಿದ ಒಟ್ಟು ಪ್ರಕರಣ

10 ವರ್ಷ ಬಳಿಕ ಟೆಸ್ಟ್‌ ಆಡಿದ ಆಲಂ

10 ವರ್ಷ ಬಳಿಕ ಟೆಸ್ಟ್‌ ಆಡಿದ ಆಲಂ

K.G.ಹಳ‍್ಳಿ ಗಲಭೆ: ಗೋಲಿಬಾರಿನಲ್ಲಿ ಸತ್ತವರನ್ನು ಅಮಾಯಕರೆಂದ ಶಾಸಕ ಜಮೀರ್ ನಡೆಯೇ ಸಂಶಯಾಸ್ಪದ

K.G.ಹಳ‍್ಳಿ ಗಲಭೆ: ಗೋಲಿಬಾರಿನಲ್ಲಿ ಸತ್ತವರನ್ನು ಅಮಾಯಕರೆಂದ ಶಾಸಕ ಜಮೀರ್ ನಡೆಯೇ ಸಂಶಯಾಸ್ಪದ

ಆ. 25ರಿಂದ ಪುಣೆಯಲ್ಲಿ ಆರ್ಚರಿ ಶಿಬಿರ ಪುನರಾರಂಭ

ಆ. 25ರಿಂದ ಪುಣೆಯಲ್ಲಿ ಆರ್ಚರಿ ಶಿಬಿರ ಪುನರಾರಂಭ

ಚಾಮರಾಜ ನಗರ: ಸೋಂಕಿಗೆ ಕೋವಿಡ್ ಯೋಧ ಬಲಿ ; ASI ಬಲಿ ತೆಗೆದುಕೊಂಡ ಮಹಾಮಾರಿ

ಚಾಮರಾಜ ನಗರ: ಸೋಂಕಿಗೆ ಕೋವಿಡ್ ಯೋಧ ಬಲಿ ; ASI ಬಲಿ ತೆಗೆದುಕೊಂಡ ಮಹಾಮಾರಿ

ಟಾಪ್‌ ಸೀಡ್‌ ಓಪನ್‌ ಟೆನಿಸ್‌; ಕ್ವಾರ್ಟರ್‌ ಫೈನಲ್‌ಗೆ ಕೊಕೊ ಗಾಫ್

ಟಾಪ್‌ ಸೀಡ್‌ ಓಪನ್‌ ಟೆನಿಸ್‌; ಕ್ವಾರ್ಟರ್‌ ಫೈನಲ್‌ಗೆ ಕೊಕೊ ಗಾಫ್

siddu

ಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡಬೇಡಿ: ಬಿ.ಎಲ್ ಸಂತೋಷ್ ಗೆ ಸಿದ್ದು ತಿರುಗೇಟು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಡುಪಿ: ಗರಿಷ್ಠ 402 ಪಾಸಿಟಿವ್‌, 2 ಸಾವು; 7,000 ದಾಟಿದ ಒಟ್ಟು ಪ್ರಕರಣ

ಉಡುಪಿ: ಗರಿಷ್ಠ 402 ಪಾಸಿಟಿವ್‌, 2 ಸಾವು; 7,000 ದಾಟಿದ ಒಟ್ಟು ಪ್ರಕರಣ

ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಶೀಘ್ರ ಅನುದಾನ

ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸಲು ಶೀಘ್ರ ಅನುದಾನ

ಉದಯವಾಣಿ ರೈತಸೇತು: ವೈಜ್ಞಾನಿಕ ಕ್ರಮದಿಂದ ಉತ್ತಮ ಲಾಭ

ಉದಯವಾಣಿ ರೈತಸೇತು: ವೈಜ್ಞಾನಿಕ ಕ್ರಮದಿಂದ ಉತ್ತಮ ಲಾಭ

ಅನುಭವದಿಂದ ಕಲಿತುಕೊಳ್ಳೋಣ

ಜೀವಯಾನ: ಅನುಭವದಿಂದ ಕಲಿತುಕೊಳ್ಳೋಣ

ಹದನಗದ್ದೆ ಸೇತುವೆಗೆ ಕಾಯಕಲ್ಪ

ಹದನಗದ್ದೆ ಸೇತುವೆಗೆ ಕಾಯಕಲ್ಪ

MUST WATCH

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik

udayavani youtube

ಪಾರಂಪರಿಕ ಕುಂಬಾರಿಕೆ ವೃತ್ತಿಗೆ Modern Touch | Traditional Pottery Making

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆಹೊಸ ಸೇರ್ಪಡೆ

ದ.ಕ.: ಆಗಸ್ಟ್ -13: ಕೋವಿಡ್ ಪ್ರಕರಣ; 246 ಪಾಸಿಟಿವ್; 6 ಸಾವು ‌ಮೃತರ ಸಂಖ್ಯೆ 250

ದ.ಕ.: ಆಗಸ್ಟ್ -13ರ ಕೋವಿಡ್ ಪ್ರಕರಣ; 246 ಪಾಸಿಟಿವ್; 6 ಸಾವು ‌ಮೃತರ ಸಂಖ್ಯೆ 250

ಉಡುಪಿ: ಗರಿಷ್ಠ 402 ಪಾಸಿಟಿವ್‌, 2 ಸಾವು; 7,000 ದಾಟಿದ ಒಟ್ಟು ಪ್ರಕರಣ

ಉಡುಪಿ: ಗರಿಷ್ಠ 402 ಪಾಸಿಟಿವ್‌, 2 ಸಾವು; 7,000 ದಾಟಿದ ಒಟ್ಟು ಪ್ರಕರಣ

10 ವರ್ಷ ಬಳಿಕ ಟೆಸ್ಟ್‌ ಆಡಿದ ಆಲಂ

10 ವರ್ಷ ಬಳಿಕ ಟೆಸ್ಟ್‌ ಆಡಿದ ಆಲಂ

K.G.ಹಳ‍್ಳಿ ಗಲಭೆ: ಗೋಲಿಬಾರಿನಲ್ಲಿ ಸತ್ತವರನ್ನು ಅಮಾಯಕರೆಂದ ಶಾಸಕ ಜಮೀರ್ ನಡೆಯೇ ಸಂಶಯಾಸ್ಪದ

K.G.ಹಳ‍್ಳಿ ಗಲಭೆ: ಗೋಲಿಬಾರಿನಲ್ಲಿ ಸತ್ತವರನ್ನು ಅಮಾಯಕರೆಂದ ಶಾಸಕ ಜಮೀರ್ ನಡೆಯೇ ಸಂಶಯಾಸ್ಪದ

ಖಾತೆ ಮಾಡಿಕೊಡಲು ಲಂಚ: ನಗರಸಭೆಯ ಗುಮಾಸ್ತ ACB ಬಲೆಗೆ

ಖಾತೆ ಮಾಡಿಕೊಡಲು ಲಂಚ: ನಗರಸಭೆಯ ಗುಮಾಸ್ತ ACB ಬಲೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.