Udayavni Special

ಸಹ್ಯಾದ್ರಿ ಪಂಚಮುಖೀ ಭತ್ತದ ತಳಿ

ನೆರೆಪೀಡಿತ ತಗ್ಗು ಪ್ರದೇಶಗಳಿಗೆ ವರದಾನ

Team Udayavani, Oct 21, 2019, 5:39 AM IST

nere-peedita-varadana

ಉಡುಪಿ: ಕರಾವಳಿಯ ನೆರೆಪೀಡಿತ ತಗ್ಗು ಪ್ರದೇಶಗಳಲ್ಲಿ ಕೆಂಪು ಅಕ್ಕಿ ಇಳುವರಿಯ ಕೊರತೆ ಕಾಡುತ್ತಿದ್ದು, ಇದನ್ನು ನೀಗಿಸಲು ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ ಸಹ್ಯಾದ್ರಿ ಪಂಚಮುಖೀ (ಕೆಂಪಕ್ಕಿ) ಭತ್ತದ ತಳಿ ಸಂಶೋಧನೆ ಮಾಡಿದೆ.

ಸಹ್ಯಾದ್ರಿ ಪಂಚಮುಖೀ
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಅತಿಯಾದ ವರ್ಷಧಾರೆಯಿಂದ ತಗ್ಗು ಪ್ರದೇಶದ ಗದ್ದೆಯಲ್ಲಿ ನೀರು ತುಂಬಿಕೊಳ್ಳುವುದರಿಂದ ಭತ್ತದ ಬೆಳೆ ನಾಶವಾಗುತ್ತದೆ. ಈ ಸಮಸ್ಯೆಯನ್ನು ಅರಿತ ಕೃಷಿ ಸಂಶೋಧನಾ ಕೇಂದ್ರ ಕರಾವಳಿಯ ತಗ್ಗು ಪ್ರದೇಶಕ್ಕೆ ಸೂಕ್ತವಾದ ಸಹ್ಯಾದ್ರಿ ಪಂಚಮುಖೀ ತಳಿ ಅಭಿವೃದ್ಧಿಪಡಿಸಿದೆ.

ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ
ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದಾದ ಕೆಂಪಕ್ಕಿ ತಳಿ ರೈತರಲ್ಲಿ ಆಶಾಕಿರಣ ಮೂಡಿಸಿದೆ. ಅವಿಭಜಿತ ದ.ಕ. ಜಿÇÉೆಯಲ್ಲಿ ಸಾಮಾನ್ಯವಾಗಿ ಎಂ.ಒ 4 ಭತ್ತ ಬೆಳೆಸುತ್ತಿದ್ದು, ಅತಿವೃಷ್ಟಿಯಿಂದಾಗಿ ತಗ್ಗು ಪ್ರದೇಶದಲ್ಲಿ ಹೆಚ್ಚು ಇಳುವರಿ ಸಿಗುತ್ತಿಲ್ಲ. ಜತೆಗೆ ಈ ತಳಿಯ ನಿರ್ವಹಣೆ ಕಷ್ಟವಾದೆ. ಇದೀಗ ಕರಾವಳಿ ಭಾಗಕ್ಕೆ ಕೆಂಪಕ್ಕಿ ಭತ್ತದ ತಳಿಯ ಪರಿಚಯಿಸಿದ್ದು, ಇದು ಹೆಚ್ಚಿನ ಇಳುವರಿಯ ಜತೆಗೆ ಆರ್ಥಿಕ ಲಾಭ ನೀಡಲಿದೆ.

ನಾಲ್ಕೈದು ದಶಕಗಳ ಹಿಂದೆ ಕರಾವಳಿ, ಮಲೆನಾಡು ಭಾಗಗಳಲ್ಲಿ ಕೆಂಪಕ್ಕಿ ಚಾಲ್ತಿಯಲ್ಲಿತ್ತು. ಬಳಿಕ ಅಧಿಕ ಇಳುವರಿ ಎಂಬ ವಾಂಛೆಗೆ ಕಟ್ಟುಬಿದ್ದು ದೇಸೀ ತಳಿಗಳನ್ನು ಕೈಬಿಡುವಂತೆ ಮಾಡಲಾಗಿತ್ತು.

ಸಹ್ಯಾದ್ರಿ ಪಂಚಮುಖೀ ತಳಿ ಬಯಲು ಗದ್ದೆಗಳಿಗೆ ಮುಂಗಾರು ಬೆಳೆಯಾಗಿ ಬೆಳೆಯಲು ಅತ್ಯಂತ ಸೂಕ್ತ. ಜತೆಗೆ ನೆರೆ ಹಾವಳಿಯನ್ನು 8ರಿಂದ 12 ದಿನಗಳ ವರೆಗೆ ತಡೆದು ಬೆಳೆಯುವ ಸಾಮರ್ಥ್ಯವನ್ನು ಹೊಂದಿದ್ದೆ.

ರುಚಿಕರ ಅನ್ನ
ಎಂಒ 4 ತಳಿಗಿಂತಲೂ ಸಹ್ಯಾದ್ರಿ ಪಂಚಮುಖೀ ಭತ್ತದ ಅನ್ನ ಹೆಚ್ಚು ರುಚಿಯಾಗಿದ್ದು, ಸುವಾಸನೆ ಭರಿತವಾಗಿರಲಿದೆ. ಅಕ್ಕಿಯಿಂದ ಅನ್ನವಾಗಿಸಲು ಬಳಕೆಯಾಗುವ ನೀರಿನ ಪ್ರಮಾಣ ಸಹ ಕಡಿಮೆ. ಅಕ್ಕಿ ಬೇಯಿಸಿದ ಬಳಿಕ ಅನ್ನ ಒಡೆಯದು ಎಂದು ಬೆಂಗಳೂರಿನ ಸಂಶೋಧನಾಲಯ ದಲ್ಲಿ ದೃಢಪಟ್ಟಿದೆ.

135 ದಿನಗಳಲ್ಲಿ ಕಟಾವು
ಭತ್ತದ ಸಸಿಯ ಗಾತ್ರ ಸುಮಾರು 10 ಸೆ.ಮೀ. ನಷ್ಟು ಎತ್ತರವಿದ್ದು, ಗಾಳಿ ಮಳೆಯನ್ನು ತಡೆಯಲು ಸಶಕ್ತವಾಗಿದೆ. ರೋಗಬಾಧೆಯೂ ಕಡಿಮೆ. ಮುಂಗಾರು ಹಂಗಾಮಿಗೆ ಈ ತಳಿ ನಾಟಿ ಮಾಡಿದ 130ರಿಂದ 135 ದಿನಗಳಲ್ಲಿ ಕಟಾವಿಗೆ ಬರಲಿದೆ. ಪ್ರತಿ ಹೆಕ್ಟೇರ್‌ಗೆ 50ರಿಂದ 56 ಕ್ವಿಂಟಲ್‌ ಭತ್ತವನ್ನು ಇಳುವರಿ ಪಡೆಯಬಹುದು. ಇತರೆ ಭತ್ತದ ತಳಿಗೆ ಹೋಲಿಸಿದರೆ ಅಧಿಕ ಪ್ರಮಾಣದ ಭತ್ತದ ಹುಲ್ಲನ್ನೂ ಪಡೆಯಬಹುದು.

ಕರಾವಳಿಗೆ ಸೂಕ್ತ
ಸಹ್ಯಾದ್ರಿ ಪಂಚಮುಖೀ ಭತ್ತದ ತಳಿ ಕರಾವಳಿಗೆ ಸೂಕ್ತ. ಈ ತಳಿಯ ಕುರಿತು ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರ 4 ವರ್ಷಗಳ ಕಾಲ ಸಂಶೋಧನೆ ನಡೆಸಿದೆ. ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.
-ಡಾ| ಶ್ರೀದೇವಿ ಜಕ್ಕೇರಾಳ, 
ಬ್ರಹ್ಮಾವರ ಕೃಷಿ ಸಂಶೋಧನಾ ಕೇಂದ್ರದ ತಳಿಶಾಸ್ತ್ರ ವಿಭಾಗದ ವಿಜ್ಞಾನಿ.

ಉತ್ತಮ ಫ‌ಲಿತಾಂಶ
ಐದಾರು ವರ್ಷಗಳ ಪ್ರಯತ್ನದಿಂದ ಸಹ್ಯಾದ್ರಿ ಪಂಚಮುಖೀ (ಜಿrಜಚ 31811692ಚಿ) ತಳಿಯನ್ನು ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸಂಶೋಧಿಸಲಾಗಿದೆ. ಉಡುಪಿ ಮತ್ತು ದಕ್ಷಿಣ ಜಿÇÉೆ ಸೇರಿದಂತೆ 14 ತಾಲೂಕುಗಳಿಗೆ ಈ ತಳಿಯನ್ನು ನೀಡಿದ್ದು, ಉತ್ತಮ ಫ‌ಲಿತಾಂಶ ದೊರಕಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ವಿದ್ಯಾರ್ಥಿ ನಿಲಯಗಳಲ್ಲಿ 45,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಬೆಂಗಳೂರಿನಿಂದ ಬೀದರ್‌ಗೆ ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ತೆಕ್ಕೆಗೆ

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ತೆಕ್ಕೆಗೆ

ಧಾರವಾಡ: ಮೂರು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ

ಧಾರವಾಡ: ಮೂರು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯಾವರ : ಕಲಾಯಿ ಬೈಲ್ ಸೀಲ್‍ಡೌನ್

ಉದ್ಯಾವರ : ಕಲಾಯಿ ಬೈಲ್ ಸೀಲ್‍ಡೌನ್

WhatsApp Image 2020-06-06 at 6.14.14 PM

ಉದ್ಯಾವರ : ಕಲಾಯಿ ಬೈಲ್ ಸೀಲ್‍ಡೌನ್ ಮುಂಬೈನಿಂದ ಬಂದಾಕೆಗೆ ಪೊಸಿಟಿವ್

ಕ್ವಾರಂಟೈನ್‌ ಮುಗಿಸಿ ಬಂದ ಕೊರವಡಿಯ ವ್ಯಕ್ತಿಗೆ ಸೋಂಕು ದೃಢ : ಮನೆ ಸೀಲ್‌ ಡೌನ್‌

ಕ್ವಾರಂಟೈನ್‌ ಮುಗಿಸಿ ಬಂದ ಕೊರವಡಿಯ ವ್ಯಕ್ತಿಗೆ ಸೋಂಕು ದೃಢ : ಮನೆ ಸೀಲ್‌ ಡೌನ್‌

ಕೃಷ್ಣನೂರಿನಲ್ಲಿ ನಿಲ್ಲದ ಕೋವಿಡ್ ಪ್ರವಾಹ: ಇಂದು ಮತ್ತೆ ಜನರಿಗೆ ಸೋಂಕು ದೃಢ

ಕೃಷ್ಣನೂರಿನಲ್ಲಿ ನಿಲ್ಲದ ಕೋವಿಡ್ ಪ್ರವಾಹ: ಇಂದು ಮತ್ತೆ121 ಜನರಿಗೆ ಸೋಂಕು ದೃಢ

ಕ್ವಾರಂಟೈನ್‌ ಮುಗಿಸಿದ ವ್ಯಕ್ತಿಗೆ ಸೋಂಕು : ಬೇಳೂರು ತೆಂಕಬೆಟ್ಟಿನ 5 ಮನೆಗಳು ಸೀಲ್‌ ಡೌನ್‌

ಕ್ವಾರಂಟೈನ್‌ ಮುಗಿಸಿದ ವ್ಯಕ್ತಿಗೆ ಸೋಂಕು : ಬೇಳೂರು ತೆಂಕಬೆಟ್ಟಿನ 1 ಮನೆ ಸೀಲ್‌ ಡೌನ್‌

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ಕಾಸರಗೋಡು: 10 ಮಂದಿಗೆ ಕೋವಿಡ್-19 ಸೋಂಕು ದೃಢ

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ವಿದ್ಯಾರ್ಥಿ ನಿಲಯಗಳಲ್ಲಿ 45,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಬೆಂಗಳೂರಿನಿಂದ ಬೀದರ್‌ಗೆ ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.