ಉಪ್ಪುಂದ ಶಾಲೆಬಾಗಿಲು: ವಾಹನ ಪಲ್ಟಿ
Team Udayavani, Jul 20, 2019, 5:09 AM IST
ಉಪ್ಪುಂದ: ರಾ. ಹೆದ್ದಾರಿ 66ರ ಶಾಲೆಬಾಗಿಲು ಬಳಿ ಶುಕ್ರವಾರ ಮಧ್ಯಾಹ್ನ ಕ್ರೂಸರ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಭಟ್ಕಳದಿಂದ ಕುಂದಾಪುರ ಮಾರ್ಗ ವಾಗಿ ಸಂಚರಿಸುತ್ತಿದ್ದ ಕ್ರೂಸರ್ ವಾಹನವು ಶಾಲೆಬಾಗಿಲು ಸಮೀಪ ರಸ್ತೆ ಮಧ್ಯದ ಡಿವೈಡರ್ ಮೇಲೆ ಸಾಗಿ ಅಲ್ಲಿ ಅಳವಡಿಸಿರುವ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ವಿರುದ್ಧ ರಸ್ತೆಯಲ್ಲಿ ಪಲ್ಟಿಯಾಗಿದೆ. ಚಾಲಕ ಗಾಯಗೊಂಡಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ. ನಿರ್ವಾಹಕನಿಗೆ ಗಾಯವಾಗಿಲ್ಲ. ವಾಹನ ಸಂಪೂರ್ಣ ಜಖಂಗೊಂಡಿದೆ.
ತಪ್ಪಿದ ಅನಾಹುತ
ಹೆದ್ದಾರಿಯ ಡಿವೈಡರ್ನಲ್ಲಿ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಲಾಗಿದ್ದು, ವಾಹನ ಢಿಕ್ಕಿ ಹೊಡೆದ ರಭಸಕ್ಕೆ ತುಂಡಾಗಿ ರಸ್ತೆಗೆ ಬಿದ್ದಿದೆ. ಈ ಸಮಯದಲ್ಲಿ ಯಾವುದೇ ವಾಹನ ಅಥವಾ ಪಾದಚಾರಿಗಳು ಇರಲಿಲ್ಲವಾದ್ದರಿಂದ ಸಂಭವನೀಯ ದೊಡ್ಡ ಅನಾಹುತ ತಪ್ಪಿದೆ.
ಅಪಘಾತದಿಂದಾಗಿ ಸ್ವಲ್ಪಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು. ಸಾರ್ವಜನಿಕರು ವಾಹನವನ್ನು ಬದಿಗೆ ಸರಿಸಿದ ಬಳಿಕ ವಾಹನಗಳ ಸಂಚಾರ ಸುಗಮವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ