ಸರಳೇಬೆಟ್ಟು ವಾರ್ಡ್‌ ಬೋರ್‌ವೆಲ್‌ ದುರಸ್ತಿ

Team Udayavani, May 14, 2019, 6:00 AM IST

ಉಡುಪಿ: ನಗರದ ಸರಳೇಬೆಟ್ಟು ವಾರ್ಡ್‌ನ ಬೋರ್‌ವೆಲ್‌ಗ‌ಳಲ್ಲಿ ನೀರಿದ್ದರೂ ಜನರು ನೀರಿಗಾಗಿ ಊರೆಲ್ಲ ಸುತ್ತಾಡಬೇಕಾಗಿದೆ ಎನ್ನುವ ಕುರಿತು ಮೇ 12ರಂದು ಉದಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸ್ಥಳೀಯಾಡಳಿತ ಬೋರ್‌ವೆಲ್‌ಗ‌ಳನ್ನು ದುರಸ್ತಿಗೊಳಿಸಿ ನೀರು ಸರಬರಾಜು ಮಾಡಲು ಸಿದ್ಧತೆ ನಡೆಸಿದೆ.

ಸರಳೇಬೆಟ್ಟು ವಾರ್ಡ್‌ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುವ ನೆಹರೂ ನಗರ, ವಿಜಯನಗರ ಹಾಗೂ ಗಣೇಶ್‌ಬಾಗ್‌ ಮೊದಲಾದೆಡೆ ಉದಯವಾಣಿ ತಂಡ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆ ಬಿಚ್ಚಿಟ್ಟಿದ್ದು, ಈ ಬಗ್ಗೆ ಸ್ಪಂದಿಸಿದ ಸ್ಥಳೀಯಾಡಳಿತ ಮೇ 13ರಂದು ನೆಹರೂನಗರದ ಹಾಗೂ ಸರಳೇಬೆಟ್ಟು ಜಂಕ್ಷನ್‌ನಲ್ಲಿ ಕಳೆದ 5 ವರ್ಷಗಳಿಂದ ನಿರುಪಯುಕ್ತವಾಗಿದ್ದ ಬೋರ್‌ವೆಲ್‌ಗೆ ಜೀವ ತುಂಬುವ ಕೆಲಸ ಮಾಡಿದೆ.

ಇದೀಗ ಬೋರ್‌ವೆಲ್‌ಗ‌ಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ರಸ್ತೆಗಳನ್ನು ಅಗೆದು ಬೋರ್‌ವೆಲ್‌ಗ‌ೆ ಪೈಪ್‌ ಲೈನ್‌ ಜೋಡಣೆ ಕೆಲಸ ಆರಂಭವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬಾಲಪ್ಪ ಎಂ. ಕುಪ್ಪಿ ಕಕ್ಕೇರಾ: ನಗರೋತ್ಥಾನ ಯೋಜನೆಯಡಿ ಕಕ್ಕೇರಾ ಪ್ರಮುಖ ವಾರ್ಡ್‌ಗಳಲ್ಲಿ 3ನೇ ಹಂತದ ಕುಡಿಯುವ ನೀರಿನ ಸೌಕರ್ಯ ಒದಗಿಸಲು ನಗರಾಭಿವೃದ್ಧಿ ಕೋಶ...

  • ಕೋಲಾರ: ರಾಜ್ಯದ ಸಮ್ಮಿಶ್ರ ಸರ್ಕಾರ ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವಲ್ಲಿ ಆದ ವೈಫ‌‌ಲ್ಯವೇ ಲೋಕಸಭಾ ಚುನಾವಣೆಯ ಹಿನ್ನಡೆಗೆ ಕಾರಣವಾಯಿತು ಎಂದು ಜಿಲ್ಲಾ...

  • ದೇವದುರ್ಗ: ದೇವದುರ್ಗ ಪಟ್ಟಣ ಸೇರಿ ತಾಲೂಕಿನಾದ್ಯಂತ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ. ಅಕ್ರಮ ಮರಳು ಸಾಗಾಟ, ಜೂಜಾಟ, ಮಟ್ಕಾ, ಅಕ್ರಮ ಮದ್ಯ ಮಾರಾಟ,...

  • ಭಟ್ಕಳ: ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಹೊಳೆಯ ಪಕ್ಕದಲ್ಲಿ ಗುಂಡಿ ತೋಡಿ ನೀರು ಸರಬರಾಜು ಮಾಡುತ್ತಿರುವ ಖಾಸಗಿ ವ್ಯಕ್ತಿ ವಿರುದ್ಧ ಗ್ರಾಮಸ್ಥರು...

  • ತಾಳಿಕೋಟೆ: ತಾಲೂಕಿನ ಮೂಕಿಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮೂಕಿಹಾಳ ದರ್ಗಾದ ಬಳಿ ಇರುವ ನಿವಾಸಿಗಳಿಗೆ ನದಿಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು ಕಲುಷಿತವಾಗಿದ್ದು...

  • ಶಿರಸಿ: ಸಿದ್ದಾಪುರ ಕಾನಸೂರು ಬಳಿ ವಿಧವಾ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಅರಣ್ಯಾಧಿಕಾರಿಗಳ ನಡೆ ವಿರೋಧಿಸಿ ಜಿಲ್ಲಾ ಅತಿಕ್ರಮಣದಾರರ ಹೋರಾಟ ವೇದಿಕೆ ಅಧ್ಯಕ್ಷ...